• Home
  • »
  • News
  • »
  • national-international
  • »
  • Rajasthan: ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್, ಗೆಹ್ಲೋಟ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸೋದು ಡೌಟ್​!

Rajasthan: ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್, ಗೆಹ್ಲೋಟ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸೋದು ಡೌಟ್​!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Rajasthan Political Crisis: ರಾಜಸ್ಥಾನದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟದ ನಡುವೆಯೇ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಾರೋ ಇಲ್ಲವೋ ಎಂಬ ಗೊಂದಲ ಮನೆ ಮಾಡಿದೆ. ಮೂಲಗಳ ಪ್ರಕಾರ, ಗೆಹ್ಲೋಟ್ ಪಾಳಯದ ಶಾಸಕರು ಈ ಆಲೋಚನೆಯನ್ನು ಕೈಬಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ, ಇವೆಲ್ಲದರ ಪರಿಣಾಮ ಹೇಗಿರಬಹುದೆಂದು ಊಹಿಸುವುದೂ ಕಷ್ಟವಾಗಿದೆ.

ಮುಂದೆ ಓದಿ ...
  • Share this:

ಜೈಪುರ(ಸೆ.26): ಅಶೋಕ್ ಗೆಹ್ಲೋಟ್(Ashok Gehlot) ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಅನುಮಾನ ಮೂಡಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ (Congress President Election) ಆಯ್ಕೆ ಮತ್ತು ರಾಜಸ್ಥಾನದಲ್ಲಿ ಸರ್ಕಾರದ ನಾಯಕತ್ವ ಬದಲಾವಣೆಯ ನಡುವೆ ಉದ್ಭವಿಸಿದ ಪರಿಸ್ಥಿತಿಯ ನಂತರ, ಈಗ ರಾಜಕೀಯ ಸಮೀಕರಣಗಳು ಬದಲಾಗಲಾರಂಭಿಸಿವೆ. ರಾಜಸ್ಥಾನದ ಅಧಿಕಾರಕ್ಕಾಗಿ ತಡರಾತ್ರಿಯ ಹೋರಾಟದ ನಂತರ, ಈಗ ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸುತ್ತಾರೋ ಇಲ್ಲವೋ ಎಂಬ ಅನುಮಾನ ಎದ್ದಿದೆ. ಗೆಹ್ಲೋಟ್ ಪರ ಶಾಸಕರು ಅಧ್ಯಕ್ಷ ನಾಮಪತ್ರ ಸಲ್ಲಿಸುವುದನ್ನು ವಿರೋಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು


ಮೂಲಗಳನ್ನು ನಂಬುವುದಾದರೆ, ಭಾನುವಾರ ರಾತ್ರಿ ಸಂಪುಟ ಸಚಿವ ಶಾಂತಿ ಧರಿವಾಲ್ ಮತ್ತು ವಿಧಾನಸಭೆ ಸ್ಪೀಕರ್ ಡಾ.ಸಿ.ಪಿ.ಜೋಶಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಗೆಹ್ಲೋಟ್ ಪರ ಶಾಸಕರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಆಲೋಚನೆಯನ್ನು ಕೈಬಿಡುವಂತೆ ಸೂಚಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ಬಳಿಕ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಈ ವಿಚಾರವಾಗಿ ಬಹಳಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಶಾಸಕರು ಗೆಹ್ಲೋಟ್​ಗೆ ಸೂಚಿಸಿದ್ದಾರೆ. ಅದೇ ಸಮಯದಲ್ಲಿ, ಭಾನುವಾರ ರಾತ್ರಿಯ ಬೆಳವಣಿಗೆಗಳ ನಂತರ, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.


ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ನಾಯಕತ್ವ ಸೂಚನೆ ನೀಡಿತ್ತು


ಈ ಸಂಪೂರ್ಣ ಘಟನೆಯ ಬಗ್ಗೆ ರಾಜಸ್ಥಾನ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ ಮಾತನಾಡಿ, ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ನಾಯಕತ್ವವು ಸೂಚನೆಗಳನ್ನು ನೀಡಿದೆ. ಸಿಎಂ ಅಶೋಕ್ ಗೆಹ್ಲೋಟ್ ಒಪ್ಪಿಗೆ ನೀಡಿದ ನಂತರವೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಆದರೆ ಯಾವೊಬ್ಬ ಶಾಸಕರೂ ಸಭೆಗೆ ಬರಲಿಲ್ಲ. ಬಹುತೇಕ ಶಾಸಕರು ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿದ್ದಾರೆ. ಕೇಂದ್ರ ನಾಯಕರು ಶಾಸಕಾಂಗ ಪಕ್ಷದ ಪ್ರತಿಯೊಬ್ಬ ಸದಸ್ಯರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ ಶಾಸಕರು ಗುಂಪು ಗುಂಪಾಗಿ ಮಾತುಕತೆ ನಡೆಸಲು ಬಯಸಿದ್ದಾರೆ. ಶಾಸಕರು ಪಕ್ಷದ ಆದೇಶ ಪಾಲಿಸಿಲ್ಲ.


ಮೊದಲು ರಾಜಸ್ಥಾನದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡುವುದು ಹೈಕಮಾಂಡ್ ಉದ್ದೇಶ


ಸಚಿವ ಶಾಂತಿ ಧಾರಿವಾಲ್ ಅವರ ನಿವಾಸದಲ್ಲಿ ಕಾಂಗ್ರೆಸ್ ಶಾಸಕರ ಒಗ್ಗಟ್ಟಿನ ಕುರಿತು ಮಾತನಾಡಿದ ಮಾಕೆನ್, ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಶಾಸಕಾಂಗ ಪಕ್ಷವು ಅಲ್ಲಿ ಸೇರಿದೆ ಎಂದು ಹೇಳಿದರು. ಗೆಹ್ಲೋಟ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಹೊಸ ಸಿಎಂ ರಚನೆಗೆ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ಮಾಕೆನ್ ಹೇಳಿದರು. ಅಕ್ಟೋಬರ್ 19ರ ನಂತರವೇ ರಾಜಸ್ಥಾನದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಬೇಕು ಎಂದು ಗೆಹ್ಲೋಟ್ ಬಣದ ಶಾಸಕರು ಕೇಂದ್ರ ವೀಕ್ಷಕರಿಗೆ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ವೀಕ್ಷಕರನ್ನು ಸಚಿವರಾದ ಪ್ರತಾಪ್ ಸಿಂಗ್ ಖಚರಿಯಾವಾಸ್ ಮತ್ತು ಮಹೇಶ್ ಜೋಶಿ ಭೇಟಿ ಮಾಡಿದ್ದರು. ಈ ಹಿಂದೆ ರಾಜಸ್ಥಾನದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡುವ ಇರಾದೆ ಹೈಕಮಾಂಡ್‌ಗೆ ಇತ್ತು.


ಇದನ್ನೂ ಓದಿ:  ನಿರ್ಭಯಾ ತಾಯಿ ಪಾತ್ರವನ್ನು ನನಗೆ ಕೊಡಿ ಎಂದ ಸ್ಯಾಂಡಲ್​ವುಡ್​ ನಟಿ!


ಶಾಸಕರು ಈಗ ಯಾರೊಂದಿಗೂ ಮಾತನಾಡುವುದಿಲ್ಲ ಎಂದ ಲೋಧಾ


ಅದೇ ಸಮಯದಲ್ಲಿ, ಶಾಸಕರು ಈಗ ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಸಂಯಮ್ ಲೋಧಾ ಹೇಳಿದ್ದಾರೆ. ನಮ್ಮ ಉದ್ದೇಶವನ್ನು ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇವೆ. ಈಗ ಶಾಸಕರ ನಿರ್ಧಾರದ ಮೇಲೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಹೈಕಮಾಂಡ್ ನಿರ್ಧಾರವನ್ನು ರಾಜಸ್ಥಾನದ ಪ್ರತಿಯೊಬ್ಬ ಶಾಸಕರು ಒಪ್ಪಿಕೊಂಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಹೈಕಮಾಂಡ್ ನಿರ್ಧಾರವು ಮಾನ್ಯವಾಗಲಿದೆ. ಮತ್ತೊಂದೆಡೆ ಇಂದು ಹಲವು ಶಾಸಕರು ಸಚಿನ್ ಪೈಲಟ್ ನಿವಾಸಕ್ಕೆ ಆಗಮಿಸಿದ್ದಾರೆ. ಇವರಲ್ಲಿ ಶಾಸಕರಾದ ವೇದಪ್ರಕಾಶ್ ಸೋಲಂಕಿ, ಖಿಲಾಡಿ ಲಾಲ್ ಬೈರ್ವಾ ಮತ್ತು ಜಿಆರ್ ಖತಾನಾ ಸೇರಿದ್ದಾರೆ.

Published by:Precilla Olivia Dias
First published: