ಜೈಪುರ (ಜು, 13): ರಾಜಸ್ಥಾನದ ಸರ್ಕಾರದ ರಾಜಕೀಯ ಹೈಡ್ರಾಮ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ತನ್ನ ಬಣದಲ್ಲಿ 30 ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಡಿಸಿಎಂ ಸಚಿನ್ ಪೈಲಟ್ ಘೋಷಿಸಿದ್ದರು. ಆದರೆ, ಸಿಎಂ ಅಶೋಕ್ ಗೆಹ್ಲೋಟ್ ಮನೆಯಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ 102 ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ತಮ್ಮ ಬೆಂಬಲ ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ನ 102 ಶಾಸಕರನ್ನು ಹೋಟೆಲ್ಗೆ ಶಿಫ್ಟ್ ಮಾಡಲಾಗಿದೆ.
ಇಂದು ಸಿಎಲ್ಪಿ ಸಭೆಯಲ್ಲಿ ಬಂಡಾಯಗಾರ ಸಚಿನ್ ಪೈಲಟ್ಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಮಾಡುವ ಮೂಲಕ ಸಚಿನ್ ಪೈಲಟ್ಗೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ. ಇನ್ನೊಂದೆಡೆ ರಾಜಸ್ಥಾನದ ಸಚಿವ ರಮೇಶ್ ಮೀನಾ ತಾವು ಸಚಿನ್ ಪೈಲಟ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: Rajasthan Political Crisis: ರಾಜಸ್ಥಾನದಲ್ಲಿ102 ಕೈ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ಗೆ ಬೆಂಬಲ; ಸಚಿನ್ ಪೈಲಟ್ ಬಲಾಬಲ ಇಳಿಕೆ
ಸಿಎಲ್ಪಿ ಸಭೆಯ ಬಳಿಕ ತಮಗೆ ಬೆಂಬಲ ನೀಡಿರುವ ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ಬಣ ಸೇರಿದರೆ ಕಷ್ಟವೆಂದು ಎಲ್ಲ ಶಾಸಕರನ್ನೂ ಜೈಪುರದ ಫೇರ್ಮೌಂಟ್ ಹೋಟೆಲ್ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗಿದೆ.
#Rajasthan: MLAs arrive at Hotel Fairmont in Jaipur, after attending Congress Legislative Party (CLP) meeting at Chief Minister Ashok Gehlot's residence. https://t.co/fuL74N0yYY pic.twitter.com/eHFDHrDgKc
— ANI (@ANI) July 13, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ