• Home
  • »
  • News
  • »
  • national-international
  • »
  • Rajasthan Politics: ಪೈಲಟ್​ ಸಿಎಂ ಆಗೋದು ಬೇಡ, ಗೆಹ್ಲೋಟ್​ ಬಣದ 92 ಶಾಸಕರ ರಾಜೀನಾಮೆ!

Rajasthan Politics: ಪೈಲಟ್​ ಸಿಎಂ ಆಗೋದು ಬೇಡ, ಗೆಹ್ಲೋಟ್​ ಬಣದ 92 ಶಾಸಕರ ರಾಜೀನಾಮೆ!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Rajasthan Politics: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗುವ ಸಾಧ್ಯತೆ ಬಹಳಷ್ಟಿದೆ. ಹೀಗಿರುವಾಗ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಗದ್ದಲ ಶುರುವಾಗಿದೆ. ಇತ್ತ ಗೆಹ್ಲೋಟ್ ಬಣ ಸಕ್ರಿಯವಾಗಿದ್ದು, ಇದು ಪೈಲಟ್‌ರವರನ್ನು ಸಂಕಷ್ಟಕ್ಕೀಡು ಮಾಡಿದೆ. ಹೀಗಿರುವಾಗ ರಾಜ್ಯದ ನೂತನ ಸಿಎಂ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.

ಮುಂದೆ ಓದಿ ...
  • Share this:

 ಜೈಪುರ(ಸೆ.26): ರಾಜಸ್ಥಾನದಲ್ಲಿ ದೊಡ್ಡ ರಾಜಕೀಯ ಬಿಕ್ಕಟ್ಟು (Rajasthan Political Crisis) ಉದ್ಭವಿಸಿದೆ. ಹೌದು ಸಚಿನ್ ಪೈಲಟ್‌ಗೆ ಅಧಿಕಾರ ಹಸ್ತಾಂತರಿಸುವುದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Chief Minister Ashok Gehlot) ಬೆಂಬಲಿಗ ಶಾಸಕರು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಗೆಹ್ಲೋಟ್ ಬಣದ ಎಲ್ಲಾ ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಗೆಹ್ಲೋಟ್ ಬಣದ ಎಲ್ಲಾ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸಿಪಿ ಜೋಶಿ ಅವರಿಗೆ ಸಲ್ಲಿಸಲು ತಲುಪಿದ್ದಾರೆ. ಈ ನಡುವೆ ಸ್ವತಃ ಸ್ಪೀಕರ್ ಸಿ.ಪಿ.ಜೋಶಿ ರಾಜೀನಾಮೆ ಸುದ್ದಿಯೂ ಬೆಳಕಿಗೆ ಬಂದಿದೆ.


ಇದನ್ನೂ ಓದಿ: 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು


ಎಲ್ಲಾ ಶಾಸಕರು ಕೋಪಗೊಂಡು ರಾಜೀನಾಮೆ ನೀಡುತ್ತಿದ್ದಾರೆ ಎಂದು ರಾಜಸ್ಥಾನ ಸರ್ಕಾರದ ಸಚಿವ ಮತ್ತು ಗೆಹ್ಲೋಟ್ ಅವರ ಆಪ್ತರಾದ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿಗಳ ಮೊರೆ ಹೋಗುತ್ತೇವೆ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಸಂಪರ್ಕಿಸದೆ ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಚರಿಯಾವಾಸ್ 92 ಶಾಸಕರ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಇದುವರೆಗೆ 82 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಸಚಿನ್ ಪೈಲಟ್


ಈ ಮಧ್ಯೆ ಸಿಎಂ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಇದಕ್ಕಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಸ್ತುವಾರಿ ಅಜಯ್ ಮಾಕನ್ ಅವರನ್ನು ದೆಹಲಿಯಿಂದ ವೀಕ್ಷಕರಾಗಿ ಜೈಪುರಕ್ಕೆ ಕಳುಹಿಸಲಾಗಿತ್ತು. ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂಬ ನಿರ್ಣಯವನ್ನು ಅಂಗೀಕರಿಸುವಂತೆ ಶಾಸಕರಿಗೆ ಸೂಚಿಸಲಾಗಿತ್ತು. ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಮನಸ್ಸು ಮಾಡಿದ್ದು, ಇದನ್ನು ಗೆಹ್ಲೋಟ್ ಒಪ್ಪುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅವರ ಅಭಿಪ್ರಾಯವನ್ನು ಹೈಕಮಾಂಡ್ ತೆಗೆದುಕೊಂಡಿಲ್ಲ ಎನ್ನುತ್ತಾರೆ.


ಇದನ್ನೂ ಓದಿ:  ನಿರ್ಭಯಾ ತಾಯಿ ಪಾತ್ರವನ್ನು ನನಗೆ ಕೊಡಿ ಎಂದ ಸ್ಯಾಂಡಲ್​ವುಡ್​ ನಟಿ!


ಇದಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್, ಸಚಿನ್ ಪೈಲಟ್ ಮತ್ತು ಸುಮಾರು ಎರಡು ಡಜನ್ ಶಾಸಕರು ಅಶೋಕ್ ಗೆಹ್ಲೋಟ್ ಮನೆಗೆ ತಲುಪಿದ್ದರು. ಆದರೆ ಗೆಹ್ಲೋಟ್ ಬಣದ ಶಾಸಕರು ಸಭೆಗೆ ಹಾಜರಾಗಿರಲಿಲ್ಲ. ಈ ಮಧ್ಯೆ ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಗೊಳಿಸಲಾಗಿದೆ. ಇದೀಗ ರಾಜಸ್ಥಾನದ ರಾಜಕೀಯದ ಒಂಟೆ ಯಾವ ಕಡೆ ಕೂರಲಿದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ.


ಗೆಹ್ಲೋಟ್ ವಿರುದ್ಧ ಶಶಿ ತರೂರ್ ಪಂದ್ಯ ಬಹುತೇಕ ಫಿಕ್ಸ್


ಶೋಕ್ ಗೆಹ್ಲೋಟ್ ಗುರುವಾರ ಕೊಚ್ಚಿ ತಲುಪಿ ರಾಹುಲ್ ಗಾಂಧಿ ಅವರೊಂದಿಗೆ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಹಿಂದೆ ಅಶೋಕ್ ಗೆಹ್ಲೋಟ್ ಅವರು ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ನೇರವಾಗಿ ಹೇಳಿದ್ದರು, ಆದರೆ ಅದಕ್ಕೂ ಮೊದಲು ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮನವೊಲಿಸಲು ಕೊನೆಯ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಇಂದು ಅಂದರೆ ಶುಕ್ರವಾರ ರಾಹುಲ್ ಗಾಂಧಿ ದೆಹಲಿ ತಲುಪಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಅಶೋಕ್ ಗೆಹ್ಲೋಟ್ ವಿರುದ್ಧ ಶಶಿ ತರೂರ್ ಸ್ಪರ್ಧೆ ಎಂಬುದು ಬಹುತೇಕ ನಿರ್ಧಾರವಾಗಿದ್ದು, ರಾಜಸ್ಥಾನದಲ್ಲಿ ಗೆಹ್ಲೋಟ್ ಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದೇ ಬಹುದೊಡ್ಡ ಪ್ರಶ್ನೆಯಾಗಿದೆ.

Published by:Precilla Olivia Dias
First published: