Child Marriage| 'ಬಾಲ್ಯ ವಿವಾಹ ನೋಂದಣಿ ಮಸೂದೆ' ಅಂಗೀಕರಿಸಿದ ರಾಜಸ್ಥಾನ; ವಿರೋಧ ಪಕ್ಷಗಳಿಂದ ಆಕ್ರೋಶ!

ಬಾಲ್ಯವಿವಾಹಗಳ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿಯ ಪೋಷಕರು ನಿಗದಿತ ನಮೂನೆಯಲ್ಲಿ ಜ್ಞಾಪನಾ ಪತ್ರವನ್ನು ನೀಡಿ ನೋಂದಣಿ ಅಧಿಕಾರಿಗೆ ತಿಳಿಸಬೇಕಾಗುತ್ತದೆ. ಇದರ ಆಧಾರದ ಮೇಲೆ, ನೋಂದಣಿ ಅಧಿಕಾರಿ ಆ ಬಾಲ್ಯ ವಿವಾಹವನ್ನು ನೋಂದಾಯಿಸಿ ಕೊಳ್ಳುತ್ತಾರೆ.

ಬಾಲ್ಯ ವಿವಾಹ (ಪ್ರಾತಿನಿಧಿಕ ಚಿತ್ರ).

ಬಾಲ್ಯ ವಿವಾಹ (ಪ್ರಾತಿನಿಧಿಕ ಚಿತ್ರ).

  • Share this:
    ಜೈಪುರ; ವಿರೋಧ ಪಕ್ಷಗಳ ವ್ಯಾಪಕ ಪ್ರತಿಭಟನೆ ಮತ್ತು ವಿರೋಧದ ನಡುವೆಯೂ ರಾಜಸ್ತಾನ (Rajastan) ಸರ್ಕಾರ ಶುಕ್ರವಾರ ಬಾಲ್ಯವಿವಾಹಗಳ ನೋಂದಣಿಗೆ (Child Marriage Registration act) ಅವಕಾಶ ನೀಡಲಾಗುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಈ ಬಗ್ಗೆ ಸದನದಲ್ಲಿ ಬಿರುಸಿನ ಚರ್ಚೆ ನಡೆದರೂ, ಅಂತಿಮವಾಗಿ, ‘ರಾಜಸ್ಥಾನ ವಿವಾಹಗಳ ಕಡ್ಡಾಯ ನೋಂದಣಿ ತಿದ್ದುಪಡಿ ಮಸೂದೆ’ಯನ್ನು ಅಂಗೀಕರಿಸ ಲಾಯಿತು. ಈ ಹೊಸ ಮಸೂದೆಯ ಪ್ರಕಾರ, ಬಾಲ್ಯ ವಿವಾಹದ ಮಾಹಿತಿಯನ್ನು ಮದುವೆಯಾದ 30 ದಿನಗಳ ಒಳಗೆ ನೀಡಬೇಕು. ಚರ್ಚೆಯಲ್ಲಿ, ಸಂಸತ್ತಿನ ವ್ಯವಹಾರಗಳ ಸಚಿವೆ ಶಾಂತಿ ಧಾರಿವಾಲ್ ಅವರು ಬಾಲ್ಯವಿವಾಹಗಳನ್ನು ನೋಂದಾಯಿಸುವುದರಿಂದ ಅವುಗಳನ್ನು ಮಾನ್ಯವೆಂದು ಪರಿಗಣಿಸಲಾಗುವುದು ಎಂದಲ್ಲ ಎಂದು ಪ್ರತಿಪಾದಿಸಿದ್ದಾರೆ.

    ಹೊಸ ಕಾನೂನಿನ ಪ್ರಕಾರ, ವಿವಾಹ ನೋಂದಣಿ ಅಧಿಕಾರಿಯು ಬ್ಲಾಕ್ ಹಂತದವರೆಗೆ ನೋಂದಣಿಯನ್ನು ಮಾಡುತ್ತಾರೆ. ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ಕ್ಕಿಂತ ಕಡಿಮೆಯಿದ್ದರೆ, ಅವರ ಪೋಷಕರು ನೋಂದಣಿ ಅಧಿಕಾರಿಗೆ 30 ದಿನಗಳಲ್ಲಿ ತಿಳಿಸಬೇಕೆಂದು ಮಸೂದೆಯು ತಿಳಿಸುತ್ತದೆ.

    ಬಾಲ್ಯವಿವಾಹಗಳ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿಯ ಪೋಷಕರು ನಿಗದಿತ ನಮೂನೆಯಲ್ಲಿ ಜ್ಞಾಪನಾ ಪತ್ರವನ್ನು ನೀಡಿ ನೋಂದಣಿ ಅಧಿಕಾರಿಗೆ ತಿಳಿಸಬೇಕಾಗುತ್ತದೆ. ಇದರ ಆಧಾರದ ಮೇಲೆ, ನೋಂದಣಿ ಅಧಿಕಾರಿ ಆ ಬಾಲ್ಯ ವಿವಾಹವನ್ನು ನೋಂದಾಯಿಸಿ ಕೊಳ್ಳುತ್ತಾರೆ. ಈ ನಿಬಂಧನೆಯನ್ನು ವಿವಾಹಗಳ ಕಡ್ಡಾಯ ನೋಂದಣಿ ಕಾಯಿದೆಯ ಸೆಕ್ಷನ್ 8 ರಲ್ಲಿ ಮಾಡಲಾಗಿದೆ.

    ಈ ಹಿಂದೆ ರಾಜ್ಯದಲ್ಲಿ, ಜಿಲ್ಲಾ ಮಟ್ಟದಲ್ಲಿ ವಿವಾಹ ನೋಂದಣಿ ಅಧಿಕಾರಿಗಳು ಇದ್ದರು ಆದರೆ ಈಗ ಬ್ಲಾಕ್ ಹಂತದವರೆಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಬಾಲ್ಯ ವಿವಾಹ ಕಾನೂನುಬಾಹಿರವಾಗಿರುವಾಗ ನೋಂದಣಿಯ ಅಗತ್ಯತೆ ಮತ್ತು ವಿಧೇಯಕದ ಉದ್ದೇಶವನ್ನು ಪ್ರಶ್ನಿಸಿ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಆಧಾರದಲ್ಲಿ ಮಸೂದೆಯನ್ನು ತರಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಪ್ರತಿಪಕ್ಷಗಳು ಬಾಲ್ಯವಿವಾಹಗಳ ನೋಂದಣಿಯ ಅಗತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: CoronaVirus| ಭಾರತವನ್ನು ಕೆಂಪು ಪಟ್ಟಿಯಿಂದ ತೆಗೆದ ಇಂಗ್ಲೆಂಡ್; ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ತೆರವು!

    ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಧಾರಿವಾಲ್, "ಬಾಲ್ಯ ವಿವಾಹವನ್ನು ನೋಂದಾಯಿಸುವುದು ಎಂದರೆ ಬಾಲ್ಯವಿವಾಹಕ್ಕೆ ಸಿಂಧುತ್ವವನ್ನು ನೀಡುವುದು ಎಂದಲ್ಲ ಮತ್ತು ಅವರಿಗೆ ನ್ಯಾಯಬದ್ಧತೆಯನ್ನು ನೀಡುವುದು ಎಂದಲ್ಲ" ಎಂದು ಪ್ರತಿಪಾದಿಸಿದ್ದಾರೆ. ನೋಂದಾಯಿಸಿದ ನಂತರವೂ ಬಾಲ್ಯ ವಿವಾಹಗಳನ್ನು ಆಯೋಜಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
    Published by:MAshok Kumar
    First published: