ಅತ್ಯಾಚಾರಕ್ಕೆ ಟಿವಿ ಮತ್ತು ಮೊಬೈಲ್​​ ಕಾರಣ; ಕಾಂಗ್ರೆಸ್ ಸಚಿವ ಬನ್ವರ್​​ಲಾಲ್​​ ಮೇಘವಾಲ್​​​​​​​​

ಅತ್ಯಾಚಾರ ಪ್ರಕರಗಳಲ್ಲಿ ಅಪರಾಧಿಗಳಿಗೆ ಮೂರು ತಿಂಗಳಲ್ಲೇ ಶಿಕ್ಷೆಯಾಗಬೇಕು. ಈ ಬಗ್ಗೆ ತ್ವರಿತವಾಗಿ ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತೇನೆ. ಹಾಗೆಯೇ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲಿದ್ದೇನೆ ಎಂದರು ಬನ್ವರ್​​ ಲಾಲ್​​​ ಮೇಘಲಾಲ್​​​.

news18-kannada
Updated:December 6, 2019, 7:44 PM IST
ಅತ್ಯಾಚಾರಕ್ಕೆ ಟಿವಿ ಮತ್ತು ಮೊಬೈಲ್​​ ಕಾರಣ; ಕಾಂಗ್ರೆಸ್ ಸಚಿವ ಬನ್ವರ್​​ಲಾಲ್​​ ಮೇಘವಾಲ್​​​​​​​​
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.06): ಸಮಾಜದಲ್ಲಿ ಅತ್ಯಾಚಾರ ಹೆಚ್ಚಾಗಲು ಟಿವಿ ಮತ್ತು ಮೊಬೈಲ್​​ ಫೋನ್​ಗಳೇ ಕಾರಣ ಎಂದು ರಾಜಸ್ಥಾನ ಸರ್ಕಾರದ ಸಚಿವ ಬನ್ವರ್​​ಲಾಲ್ ಮೇಘವಾಲ್ ಅಭಿಪ್ರಾಯಪಟ್ಟಿದ್ದಾರೆ. ಜೈಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತಾಡಿದ ಸಚಿವ ಬನ್ವರ್​​ಲಾಲ್ ಮೇಘವಾಲ್, ಟಿವಿ ಮತ್ತು ಫೋನ್​​ ಇಲ್ಲದ ಕಾಲದಲ್ಲಿ ಯಾವುದೇ ಅತ್ಯಾಚಾರ ನಡೆಯುತ್ತಿರಲಿಲ್ಲ. ಆದರೀಗ ತಂತ್ರಜ್ಞಾನ ಶರವೇಗದಲ್ಲಿದೆ, ಆದ್ದರಿಂದಲೇ ಅತ್ಯಾಚಾರದ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ಧಾರೆ.

ಟಿವಿ ಮತ್ತು ಮೊಬೈಲ್​​​ಗಳಲ್ಲಿ ಪ್ರಚೋದನಕಾರಿ ದೃಶ್ಯಗಳು ಯುವಕರಿಗೆ ಲಭ್ಯವಾಗುತ್ತಿವೆ. ಇದನ್ನು ನೋಡಿ ಯುವ ತಲೆಮಾರು ಹಾಳಾಗುತ್ತಿದೆ. ಬಳಿಕ ಯಾರಾದರೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಕ್ಕೆ ಮುಂದಾಗುತ್ತಾರೆ. ವಿದೇಶಗಲ್ಲಿ ಅತ್ಯಾಚಾರಿಗಳ ಮರ್ಮಾಂಗ ಕತ್ತರಿಸುತ್ತಿದ್ದಾರೆ. ಹಾಗಯೇ ಭಾರತದಲ್ಲೂ ಯಾವುದಾದರೂ ಕಠಿಣ ಕಾನೂನು ತರಬೇಕು. ಆಗ ಮಾತ್ರ ಇಂತಹ ಅತ್ಯಾಚಾರ ಪೈಶ್ಯಾಚಿಕ ಕೃತ್ಯಗಳು ಕಡಿಮೆಯಾಗಬಹುದು ಎಂದು ಬನ್ವರ್​​ಲಾಲ್ ಮೇಘವಾಲ್​​​ ಎಂದರು.

ಅತ್ಯಾಚಾರ ಪ್ರಕರಗಳಲ್ಲಿ ಅಪರಾಧಿಗಳಿಗೆ ಮೂರು ತಿಂಗಳಲ್ಲೇ ಶಿಕ್ಷೆಯಾಗಬೇಕು. ಈ ಬಗ್ಗೆ ತ್ವರಿತವಾಗಿ ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತೇನೆ. ಹಾಗೆಯೇ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲಿದ್ದೇನೆ ಎಂದರು ಬನ್ವರ್​​ ಲಾಲ್​​​ ಮೇಘಲಾಲ್​​​.

ಇದನ್ನೂ ಓದಿ: ಶಿಶು ಅತ್ಯಾಚಾರಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು; ರಾಮನಾಥ್​​ ಕೋವಿಂದ್​​

ಒಂದು ವಾರದ ಹಿಂದೆ ತೆಲಂಗಾಣ ಮೂಲದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ನಾಲ್ವರ ಕಿಡಿಗೇಡಿಗಳ ಗುಂಪೊಂದು ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆಗೈದಿದ್ದರು. ಈ ಬೆನ್ನಲ್ಲೇ ಇಡೀ ದೇಶಾದ್ಯಂತ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈ ಮಧ್ಯೆ ಶುಕ್ರವಾರ(ಇಂದು) ಸೈಬರಾಬಾದ್​ ಪೊಲೀಸರು ಈ ನಾಲ್ವರು ಅಪರಾಧಿಗಳನ್ನು ಎನ್​​ಕೌಂಟರ್​​ನಲ್ಲಿ ಹತ್ಯೆಗೈದಿದ್ದಾರೆ.
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ