ವರ್ಷದ 300 ದಿನ ನಿದ್ದೆಯಲ್ಲಿಯೇ ಜೀವನ; ರಾಜಸ್ಥಾನದಲ್ಲೊಬ್ಬ ಕುಂಭಕರ್ಣ

ಒಮ್ಮೆ ಮಲಗಿದರೆ 20 ರಿಂದ 25 ದಿನಗಳ ಕಾಲ ಎಚ್ಚರವೇ ಇರುವುದಿಲ್ಲಂತೆ ಇವನಿಗೆ.

ಪುರಖರಂ

ಪುರಖರಂ

 • Share this:
  ಲಕ್ನೋ (ಜು. 13): ರಾಮಾಯಣದಲ್ಲಿನ ರಾವಣದ ತಮ್ಮ ಕುಂಭ ಕರ್ಣನ ಕಥೆ ಎಲ್ಲರಿಗೂ ಗೊತ್ತಿರುವುದೇ. ಈತ ಒಮ್ಮೆ ನಿದ್ರೆಗೆ ಜಾರಿದ ಎಂದರೆ ಆತನನ್ನು ಎಚ್ಚರಿಸುವುದು ದೊಡ್ಡ ಸಾಹಸವೇ ಸರಿ. ಆರು ತಿಂಗಳ ಕಾಲ ನಿದ್ದೆಗೆ ಜಾರುತ್ತಿದ್ದ ಕುಂಭ ಕರ್ಣನನ್ನೇ ಮೀರಿಸುವ ಮತ್ತೊಬ್ಬ ಕುಂಭ ಕರ್ಣ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾನೆ. ಈತ ವರ್ಷದ 300 ದಿನಗಳ ಕಾಲ ನಿದ್ದೆಯಲ್ಲಿಯೇ ಕಾಲ ಕಳೆಯುತ್ತಾನಂತೆ. ಒಮ್ಮೆ ಮಲಗಿದರೆ 20 ರಿಂದ 25 ದಿನಗಳ ಕಾಲ ಎಚ್ಚರವೇ ಇರುವುದಿಲ್ಲಂತೆ ಇವನಿಗೆ. ವರ್ಷದ ಬಹುತೇಕ ದಿನಗಳ ಕಾಲ ಮಲಗುವ ಈತ ತಿಂಗಳಲ್ಲಿ ಐದು ದಿನ ಮಾತ್ರ ಎದ್ದಿರುತ್ತಾನಂತೆ. ಆ ಐದು ದಿನಗಳಲ್ಲಿ ಈತನ ಎಲ್ಲಾ ಕಾರ್ಯ ಚಟುವಟಿಕೆ ನಡೆಯುತ್ತದೆ. ಅಷ್ಟಕ್ಕೂ ಈತ ಈ ಪಾಟಿ ನಿದ್ದೆ ಮಾಡಲು ಈತನಿಗಿರುವ ನಿದ್ದೆ ಸಮಸ್ಯೆ ಕಾರಣವಂತೆ. 

  ರಾಜಸ್ಥಾನದ ನಾಗೌರ್​ ಭಡ್ವಾ ಗ್ರಾಮದ 42 ವರ್ಷದ ಪುರಖರಂ ಆಧುನಿಕ ಕಾಲದ ಕುಂಭಕರ್ಣ. ಈತನ ಹೈಪರ್ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದಲೇ ಈತ ಇಷ್ಟು ದೀರ್ಘಾವಧಿ ಕಾಲ ನಿದ್ರಿಸುತ್ತಾನಂತೆ.
  ಒಬ್ಬ ಮನುಷ್ಯ ಸಾಮಾನ್ಯವಾಗಿ ಆರರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದರೆ ಸಾಕ ಆತ ಆರೋಗ್ಯಯುತ ಜೀವನ ನಡೆಸಲು ಎಂದು ವೈದ್ಯರು ಹೇಳುತ್ತಾರೆ. ಆದರೆ, ಈತ ಕಳೆದ 23 ವರ್ಷಗಳ ಹಿಂದೆ ದಿನದಲ್ಲಿ 15 ಗಂಟೆ ಮಲಗುತ್ತಿದ್ದನಂತೆ. ಆರಂಭದಲ್ಲಿ ಏನೋ ನಿದ್ದೆ ಹೆಚ್ಚಾಗಿ ಬರುತ್ತಿದೆ ಎಂದು ಆಲಕ್ಷಿಸಿದರಂತೆ ಪುರಖರಂ ಕುಟುಂಬಸ್ಥರು. ಆದರೆ, ದಿನ ಕಳೆದಂತೆ ಈ ಸಮಸ್ಯೆ ತೀವ್ರವಾಗಿ ಕಾಡಲು ಪ್ರಾರಂಭವಾಯಿತಂತೆ.

  ಜೀವನೋಪಾಯಕ್ಕಾಗಿ ಗ್ರಾಮದಲ್ಲಿ ಒಂದು ಸಣ್ಣ ಅಂಗಡಿ ನಡೆಸುತ್ತಿರುವ ಈತ ಕಡೆಗೆ ನಿದ್ದೆ ಹೆಚ್ಚಾಗಿ ಅಲ್ಲಿಯೇ ಮಲಗಿ ಕೊಳ್ಳುತ್ತಿದ್ದಂತೆ. ಕಳೆದೊಂದು ವರ್ಷದಿಂದ ಈತನ ನಿದ್ದೆ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದೆ ಅಂತೆ. ಸದ್ಯ ಈಗ ಮಲಗಿದರೆ ಕನಿಷ್ಠ 20 ರಿಂದ 25 ದಿನ ಮಲಗಿಯೇ ಇರುತ್ತಾನಂತೆ. ಈತನ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಪರಿಣಾಮ ಈ ರೀತಿ ಸಮಸ್ಯೆ ಹೆಚ್ಚಾಗಿದೆ ಎನ್ನಲಾಗಿದೆ.

  ಇದನ್ನು ಓದಿ: ಬೆಂಡೆಕಾಯಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು!

  ಈತನ ಈ ನಿದ್ದೆ ಸಮಸ್ಯೆ ಹೋಗಿಸಲು ಮನೆಯವರು ಈತನಿಗೆ ಪದೇ ಪದೇ ಸ್ನಾನ ಮಾಡಿಸುವುದು. ಊಟ ನೀಡುವುದು ನೀಡಿದರೂ ಯಾವುದೇ ತಂತ್ರ ಫಲಿಸುತ್ತಿಲ್ಲವಂತೆ, ಇದರ ಪರಿಣಾಮ ಈತ ಈಗ ತಿಂಗಳಲ್ಲಿ ಐದು ದಿನ ಮಾತ್ರ ಎಚ್ಚರವಾಗಿರುತ್ತನಂತೆ.
  ಎಲ್ಲಾ ಚಿಕಿತ್ಸೆಗಳ ಹೊರತಾಗಿ ಈತನ ಸಮಸ್ಯೆಗೆ ಸದ್ಯ ಪರಿಹಾರ ಸಿಕ್ಕಿಲ್ಲವಂತೆ. ಅತಿಯಾದ ನಿದ್ದೆ ಜೊತೆಗೆ ಔಷಧಗಳು ಈಗ ಆತನ ದೇಹವನ್ನು ಮತ್ತಷ್ಟು ಆಯಾಸ ಗೊಳಿಸುತ್ತಿದೆಯಂತೆ, ಇದರಿಂದ ಆತನ ದೇಹದ ಉತ್ಪಾದಕ ಶಕ್ತಿ ಸಂಪೂರ್ಣ ಕುಗ್ಗಿದೆ. ಅಲ್ಲದೇ, ಈತ ಸದಾ ತಲೆ ನೋವಿನಿಂದ ಬಳಲುತ್ತಿದ್ದು, ಇತರೆ ರೋಗಗಳು ಕಾಡುತ್ತಿದೆಯಂತೆ.

  ಗಂಡನ ಈ ಆರೋಗ್ಯ ಸಮಸ್ಯೆ ಹೆಂಡತಿಗೆ ಸಾಕಷ್ಟು ಆತಂಕ ಮೂಡಿಸಿದೆ. ಈ ಸಂಬಂಧ ಎಲ್ಲಾ ಚಿಕಿತ್ಸೆ ಕೊಡಿಸಲಾಗಿದ್ದು, ಪರಿಹಾರ ಮಾತ್ರ ಸಿಕ್ಕಿಲ್ಲ. ಶೀಘ್ರದಲ್ಲಿಯೇ ಅವರು ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ ಆತನ ಹೆಂಡತಿ ಲಿಚಮಿ ದೇವಿ.
  Published by:Seema R
  First published: