ಹೇಯ ಕೃತ್ಯ: ಹೆಂಡತಿಯನ್ನು ರೇಪ್ ಮಾಡಲು ಸ್ನೇಹಿತನಿಗೆ ಅನುವು ಮಾಡಿಕೊಟ್ಟ ಗಂಡ..!

ಘಟನೆಯ ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ನಾನು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಅತ್ಯಾಚಾರದ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆಯು ನಾಲ್ಕು ದಿನದ ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯಾರು ಸಪ್ತಪದಿ ತುಳಿದು ವರಿಸಿದ್ದನೋ..ಆತನೇ ಅತ್ಯಾಚಾರಕ್ಕೆ ಅನುವು ಮಾಡಿಕೊಟ್ಟರೆ? ಯೋಚಿಸುವಾಗಲೇ, ಇಂತವರೂ ಇರುತ್ತಾರಾ? ಎಂಬ ಪ್ರಶ್ನೆ ಮೂಡುತ್ತದೆ. ಅಂತಹದೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ.

  ರಾಜಸ್ಥಾನ್​ನ ಆಲ್ವಾರ್ ಜಿಲ್ಲೆಯ ಶಹಜಹಾನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆಯಾದ ಗಂಡನೇ ಅತ್ಯಾಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಅಹಿತಕರ ಘಟನೆ ನಡೆದಿದೆ. ಹೀಗೆ ರೇಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸ್ವಂತ ಗೆಳೆಯನಿಗೆ.

  ಮೇ 31 ರಂದು ಆರೋಪಿ ತನ್ನ ಹೆಂಡತಿಯನ್ನು ಮಾರುಕಟ್ಟೆಗೆ ಹೋಗುವ ನೆಪದಲ್ಲಿ ತನ್ನ ಸ್ನೇಹಿತನ ಮೋಟಾರ್ ಸೈಕಲ್‌ನಲ್ಲಿ ಕರೆದೊಯ್ದಿದ್ದನು. ಇದೇ ವೇಳೆ ಸ್ನೇಹಿತನೂ ಕೂಡ ಜೊತೆಗೆ ಬಂದಿದ್ದ. ಆದರೆ ಮಾರುಕಟ್ಟೆಯ ಬದಲು ಅವರು ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಸ್ನೇಹಿತ ಬಲ್ವಾನ್​ಗೆ ನನ್ನ ಮೇಲೆ ಅತ್ಯಾಚಾರ ಎಸಗುವಂತೆ ಗಂಡನೇ ಸೂಚಿಸಿದ್ದನು. ಇದೇ ವೇಳೆ ಪತಿ ಕೋಣೆಯ ಹೊರಗೆ ಕಾವಲು ಕಾಯುತ್ತಾ ನಿಂತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

  ಘಟನೆಯ ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ನಾನು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಅತ್ಯಾಚಾರದ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆಯು ನಾಲ್ಕು ದಿನದ ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಗಂಡನ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸಂತ್ರಸ್ತೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.

  ದೂರು ದಾಖಲಾಗುತ್ತಿದ್ದಂತೆ ಅತ್ಯಾಚಾರಿ ಹಾಗೂ ಸಂತ್ರಸ್ತೆಯ ಪತಿ ಪರಾರಿಯಾಗಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಡಿ (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು  ಬುಧವಾರ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ  ಡಿಎಸ್ಪಿ ಲೋಕೇಶ್ ಮೀನಾ ತಿಳಿಸಿದ್ದಾರೆ.
  First published: