HOME » NEWS » National-international » RAJASTHAN MAN KILLS MARRIED DAUGHTER FOR ELOPING WITH LOVER LG

Crime News: ಮದುವೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪರಾರಿ; ಕೋಪಗೊಂಡ ತಂದೆ ಮಾಡಿದ್ದು ಮಗಳ ಕೊಲೆ..!

ಈ ಘಟನೆ ರಾಜಸ್ಥಾನ ದೌಸ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಶಂಕರ್ ಲಾಲ್​ ಸೈನಿ (50) ಎಂದು ಗುರುತಿಸಲಾಗಿದೆ. ಈತ ಕೊಲೆ ಮಾಡಿದ ಬಳಿಕ ತಾನು ಎಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಯಾದ ಯುವತಿಯನ್ನು ಪಿಂಕಿ ಎಂದು ಗುರುತಿಸಲಾಗಿದೆ.

news18-kannada
Updated:March 5, 2021, 2:54 PM IST
Crime News: ಮದುವೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪರಾರಿ; ಕೋಪಗೊಂಡ ತಂದೆ ಮಾಡಿದ್ದು ಮಗಳ ಕೊಲೆ..!
ಸಾಂದರ್ಭಿಕ ಚಿತ್ರ
  • Share this:
ಜೈಪುರ(ಮಾ.05): ಮಕ್ಕಳು ತಪ್ಪು ಮಾಡಿದಾಗ ಪೋಷಕರು ಬುದ್ಧಿ ಹೇಳಿ ಈ ರೀತಿಯ ತಪ್ಪುಗಳನ್ನು ಪುನಃ ಮಾಡದಂತೆ ಎಚ್ಚರಿಕೆ ಕೊಡುವುದನ್ನು ನೋಡಿರುತ್ತೇವೆ. ಆದರೆ ಜೈಪುರದಲ್ಲಿ ತಂದೆಯೊಬ್ಬ ತಪ್ಪು ಮಾಡಿದ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ. ಹೌದು, ತಂದೆ ನೋಡಿದ್ದ ವರನೊಂದಿಗೆ ಮದುವೆಯಾಗಿದ್ದ 19 ವರ್ಷದ ಯುವತಿ, ಕೆಲ ದಿನಗಳಲ್ಲೇ ತನ್ನ ಪ್ರಿಯಕರನೊಂದಿಗೆ ಓಡಿಹೋದ ಕಾರಣಕ್ಕೆ ಕೋಪಗೊಂಡ ತಂದೆ ಮಗಳ ಕತ್ತು ಹಿಸುಕಿ ಕೊಂದಿದ್ದಾನೆ.

ಈ ಘಟನೆ ರಾಜಸ್ಥಾನ ದೌಸ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಶಂಕರ್ ಲಾಲ್​ ಸೈನಿ (50) ಎಂದು ಗುರುತಿಸಲಾಗಿದೆ. ಈತ ಕೊಲೆ ಮಾಡಿದ ಬಳಿಕ ತಾನು ಎಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಯಾದ ಯುವತಿಯನ್ನು ಪಿಂಕಿ ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸೈನಿ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

Crime News: ಹದಿಹರೆಯದ ಮಗಳು ಅನ್ಯ ವ್ಯಕ್ತಿಯೊಂದಿಗೆ ಸಂಬಂಧ; ಆಕೆಯ ತಲೆ ಕತ್ತರಿಸಿ ರಸ್ತೆಗೆ ತಂದ ಅಪ್ಪ..!

‘ಫೆಬ್ರವರಿ 16ರಂದು ಮಗಳಿಗೆ ನಾನು ಒಬ್ಬ ಯುವಕನ ಜೊತೆ ಮದುವೆ ಮಾಡಿದ್ದೆ. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಇದಾದ ಮೂರು ದಿನಗಳ ಬಳಿಕ ಆಕೆ ತವರು ಮನೆಗೆ ಬಂದು, ತಾನು ಪ್ರೀತಿಸುತ್ತಿದ್ದ ರೋಷನ್​ ಜೊತೆಗೆ ಫೆ.21ರಂದು ಓಡಿ ಹೋಗಿದ್ದಳು‘ ಎಂದು ಆರೋಪಿ ಸೈನಿ ಪೊಲೀಸರ ಬಳಿ ಹೇಳಿದ್ದಾನೆ.

ಮಗಳು ಪ್ರಿಯಕರನೊಂದಿಗೆ ಓಡಿ ಹೋದ ಬಳಿಕ ತಂದೆ ಸೈನಿ, ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರ ಬಳಿ ದೂರು ನೀಡಿದ್ದ ಎನ್ನಲಾಗಿದೆ. ಪಿಂಕಿಯ ಮನೆಯವರು ಆಕೆಯ ಫೋನ್ ನಂಬರ್ ಟ್ರೇಸ್ ಮಾಡಿ, ಆಕೆಯನ್ನು ವಾಪಸ್ ಮನೆಗೆ ಕರೆತಂದಿದ್ದರು. ಈ ವೇಳೆ ಕೋಪಗೊಂಡಿದ್ದ ತಂದೆ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Published by: Latha CG
First published: March 5, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories