• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Woman Judge: ಅಶ್ಲೀಲ ಫೋಟೋ ವೈರಲ್​ ಮಾಡುವುದಾಗಿ ಮಹಿಳಾ ಜಡ್ಜ್​ಗೆ ಬ್ಲಾಕ್​ಮೇಲ್, ಬರೋಬ್ಬರಿ 20 ಲಕ್ಷ ಬೇಡಿಕೆಯಿಟ್ಟ ದುಷ್ಕರ್ಮಿ

Woman Judge: ಅಶ್ಲೀಲ ಫೋಟೋ ವೈರಲ್​ ಮಾಡುವುದಾಗಿ ಮಹಿಳಾ ಜಡ್ಜ್​ಗೆ ಬ್ಲಾಕ್​ಮೇಲ್, ಬರೋಬ್ಬರಿ 20 ಲಕ್ಷ ಬೇಡಿಕೆಯಿಟ್ಟ ದುಷ್ಕರ್ಮಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯಾಯಾಧೀಶರ ಫೋಟೋಗಳನ್ನು ಅಸಹ್ಯವಾಗಿ ಎಡಿಟ್ ಮಾಡಿ ನ್ಯಾಯಾಲಯದಲ್ಲಿರುವ ಅವರ ಕೊಠಡಿ ಮತ್ತು ಅವರ ಮನೆಗೆ ಕಳುಹಿಸಿರುವ ವ್ಯಕ್ತಿಯೊಬ್ಬ, 20 ಲಕ್ಷ ಹಣ ಕೊಡದಿದ್ದರೆ ಈ ಫೋಟೋಗಳನ್ನು ವೈರಲ್ ಮಾಡಿ ಕುಟುಂಬದ ಮರ್ಯಾದೆ ಕಳೆಯುವುದಾಗಿ ಬೆದರಿಕೆಯಾಕಿದ್ದಾನೆ.

  • Share this:

ಜೈಪುರ: ವ್ಯಕ್ತಿಯೊಬ್ಬ ಮಹಿಳಾ ನ್ಯಾಯಾಧೀಶರಿಗೆ (Woman Judge) ಅವರ ಮಾರ್ಫ್ (Morphed photos) ಮಾಡಿದ ಛಾಯಾಚಿತ್ರಗಳನ್ನು ಮನೆಗೆ ಮತ್ತು ಕಚೇರಿಗೆ ಕಳುಹಿಸಿ ಬ್ಲ್ಯಾಕ್ ಮೇಲ್ (Blackmail) ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  ಆರೋಪಿ  ಆ ಫೋಟೋಗಳನ್ನು ಸಾರ್ವಜನಿಕಗೊಳಿಸದಿರುವುದಕ್ಕೆ ಪ್ರತಿಯಾಗಿ 20 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಧೀಶರ ಫೋಟೋಗಳನ್ನು ಅವರ ಸಾಮಾಜಿಕ ಜಾಲತಾಣಗಳ (Social Media) ಖಾತೆಯಿಂದ ಡೌನ್‌ಲೋಡ್ ಮಾಡಿ, ಅಸಹ್ಯವಾಗಿ ಎಡಿಟ್ ಮಾಡಿ ನ್ಯಾಯಾಲಯದಲ್ಲಿರುವ (Court) ಅವರ ಕೊಠಡಿ ಮತ್ತು ಅವರ ಜೈಪುರದ ಮನೆಗೆ ಕಳುಹಿಸಿದ್ದಾನೆ. ಈ ಕುರಿತಂತೆ ಫೆಬ್ರವರಿ 28ರಂದೇ ಪ್ರಕರಣ ದಾಖಲಿಸಿಕೊಂಡಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ಫೆಬ್ರವರಿ 7ರಂದು ನನ್ನ ಕೊಠಡಿಗೆ ಬಂದಿದ್ದ ವ್ಯಕ್ತಿಯೊಬ್ಬ ನನ್ನ ಸ್ಟೆನೊಗ್ರಾಫರ್‌ ಕೈಗೆ ಒಂದು ಪಾರ್ಸಲ್ ನೀಡಿದ್ದಾನೆ. ಆ ಪಾರ್ಸಲ್​ ನನ್ನ ಮಕ್ಕಳ ಶಾಲೆಯಿಂದ ಬಂದಿದೆ ಎಂದು ಪಾರ್ಸಲ್​ ತಂದಿದ್ದ ವ್ಯಕ್ತಿ ಹೇಳಿದ್ದಾನೆ. ಸ್ಟೆನೊಗ್ರಾಫರ್ ಆತನ ಹೆಸರು ಕೇಳಿದಾಗ ಆತ ಹೇಳದೆ ಪರಾರಿಯಾದ ಎಂದು ನ್ಯಾಯಾಧೀಶೆ ಹೇಳಿದ್ದಾರೆ. ಇದೀಗ ಅವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್​ಐರ್​ ದಾಖಲಿಸಿಕೊಂಡಿದ್ದಾರೆ.


ಪಾರ್ಸಲ್​ನಲ್ಲಿತ್ತು ಸ್ವೀಟ್​, ಮಾರ್ಫ್​ ಮಾಡಿದ ಅಶ್ಲೀಲ ಚಿತ್ರಗಳು


ದುಷ್ಕರ್ಮಿ ಕಳುಹಿಸಿದ ಪಾರ್ಸೆಲ್‌ನಲ್ಲಿ ಒಂದಷ್ಟು ಸಿಹಿ ತಿಂಡಿಗಳು ಹಾಗೂ ನ್ಯಾಯಾಧೀಶೆಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳು ಇದ್ದವು. ಜೊತೆಗೆ 20 ಲಕ್ಷ ರೂಪಾಯಿಗಳನ್ನ ನೀಡದಿದ್ದರೆ ಈ ಫೋಟೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿರುವ ಪತ್ರವೊಂದು ಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.


 ಇದನ್ನೂ ಓದಿ: Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!


ಕುಟುಂಬದ ಮರ್ಯಾದೆ ಕಳೆಯುತ್ತೇನೆಂದು ಬೆದರಿಕೆ


20 ಲಕ್ಷ ರೂಪಾಯಿ ಸಿದ್ಧಪಡಿಸಿಕೊಂಡಿರಿ, ಇಲ್ಲವಾದರೆ ನಿಮ್ಮ ಮತ್ತು ನಿಮ್ಮ ಕುಟುಂಬದ ಮರ್ಯಾದೆಯನ್ನು ಹಾಳು ಮಾಡುತ್ತೇನೆ. ಹಣ ತಲುಪಿಸುವ ಸಮಯ ಮತ್ತು ಸ್ಥಳದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಬ್ಲಾಕ್‌ಮೇಲರ್‌ ಪಾರ್ಸಲ್​ ಜೊತೆಗೆ ಕಳುಹಿಸಿದ್ದ ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ.
ಎರಡನೇ ಪತ್ರ ಬಂದ ನಂತರ ದೂರು


ಮೊದಲ ಪತ್ರ ಬಂದ 20 ದಿನಗಳ ನಂತರ ದುಷ್ಕರ್ಮಿ ನ್ಯಾಯಾಧೀಶೆಯ ಮನೆಗೆ ಅದೇ ತರಹದ ವಸ್ತುಗಳು ಇರುವ ಮತ್ತೊಂದು ಪಾರ್ಸಲ್ ಕಳುಹಿಸಿದ್ದಾನೆ. ಆ ನಂತರ ನ್ಯಾಯಾಧೀಶೆ ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾಯಾಧೀಶೆಯ ಚೇಂಬರ್​ಗೆ ಪಾರ್ಸಲ್ ತಲುಪಿಸಿದ ವ್ಯಕ್ತಿ ಸುಮಾರು 20 ವರ್ಷದ ವಯಸ್ಸಿನವನಾಗಿದ್ದಾನೆ, ಆತ ಬಂದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುಲಿಗೆ ಮತ್ತು ಮಹಿಳಾ ದೌರ್ಜನ್ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ, ಆರೋಪಿ ಪತ್ತೆಗೆ ಬಲೆ ಬೀಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.


ಅನುಪಮಾ ಪರಮೇಶ್ವರನ್​ ಮಾರ್ಫ್​ ಫೋಟೋ ವೈರಲ್


ಕನ್ನಡದ ನಟಸಾರ್ವಭೌಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸಿದ್ದ ಅನುಪಮಾ ಪರಮೇಶ್ವರನ್ ಅವರೂ ಕೂಡ ಇಂತಹದ್ದೇ ಪರಿಸ್ಥಿತಿ ಎದುರಿಸಿದ್ದರು. ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಿ, ಅವರ ಮಾರ್ಫ್ ಮಾಡಿದ ಫೋಟೋವನ್ನು ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಅನುಪಮಾ ಪರಮೇಶ್ವರನ್ ಸೈಬರ್​ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಅನುಪಮಾ ತಮ್ಮ ಫೇಕ್ ಫೋಟೋವನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಅಭಿಮಾನಿಗಳು ಕೂಡ ಅವರು ಒಬ್ಬ ಹೆಣ್ಣು ಮಗಳು ಎಂಬುದನ್ನು ಮರೆಯಬೇಡಿ ಎಂದು ಫೋಟೋವನ್ನು ವೈರಲ್ ಮಾಡದಂತೆ ಮನವಿ ಮಾಡಿಕೊಂಡಿದ್ದರು.


ತಂತ್ರಜ್ಞಾನ ಬೆಳೆದಂತೆ ಇಂತಹ ಒಳ್ಳೆಯ ಕೆಲಸದಂತೆ ಇಂತಹ ಕಾನೂನು ಬಾಹಿರ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಕೆಲವು ನಟ ನಟಿಯರು, ಕ್ರಿಕೆಟಿಗರು, ಸೆಲೆಬ್ರೆಟಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡೌನ್​ಲೋಡ್​ ಮಾಡಿಕೊಂಡು ಅವುಗಳನ್ನು ಮಾರ್ಫ್​ ಮಾಡಿ ವೈರಲ್ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು