Crime News: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ವಿಷ ಕುಡಿಸಿದ ಸಹಪಾಠಿಗಳು

ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣ ರಾಜಸ್ಥಾನದ ಭರತ್‌ಪುರದಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಸಹಪಾಠಿಗಳೇ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಸ್ಥಾನದ (Rajasthan) ಭರತ್‌ಪುರ ಹೇಯ ಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಲೈಂಗಿಕ ಕ್ರಿಯೆಗೆ ಸಹಕರಿಸದ ಯುವತಿಗೆ ವಿಷ ಹಾಕಿ ಅಮಾನುಷವಾಗಿ ಕೊಲೆ (Murder) ಮಾಡಲಾಗಿದೆ. ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣ ರಾಜಸ್ಥಾನದ ಭರತ್‌ಪುರದಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಸಹಪಾಠಿಗಳೇ ವಿಷ (Poison) ಉಣಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಭರತ್‌ಪುರದ ಖಾಸಗಿ ಕಾಲೇಜಿನಲ್ಲಿ (College) ಓದುತ್ತಿದ್ದ ಯುವತಿಗೆ ಐವರು ಸಹಪಾಠಿಗಳು ಸೇರಿ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರು ಮತ್ತು ಸಂತ್ರಸ್ಥೆ ಯುವತಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕಾಗಿ ಆ ಹುಡುಗರ ಗುಂಪೊಂದು ವಿಷ ಪ್ರಾಶನ ಮಾಡಿದ್ದಾರೆ ಎಂದು ದೂರಿನಲ್ಲಿ ವರದಿ ಆಗಿದೆ.

ಯುವತಿಯನ್ನು ಹಿಂಬಾಲಿಸಿ ಬಲವಂತವಾಗಿ ವಿಷದ್ರವ ಕುಡಿಸಿದ್ದಾರೆ, ನಂತರ ಮನೆಗೆ ಬಂದ ಯುವತಿ ಅಸ್ವಸ್ಥಳಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಆರೋಪಿಗಳ ಬಂಧನವಾಗಿಲ್ಲ

ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಯಾವ ಆರೋಪಿಗಳನ್ನು ಸಹ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ಥೆಯ ತಂದೆ ಹಳೇನಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಭರತ್‌ಪುರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಐವರು ಸಹಪಾಠಿಗಳು ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು ಮತ್ತು ಅವಳು ಅದನ್ನು ನಿರಾಕರಿಸಿದಾಗ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆತ್ಮಹತ್ಯೆಯಾ?

ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹಲೇನಾ ಎಸ್‌ಎಚ್‌ಒ ವಿಜಯ್ ಸಿಂಗ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 328 (ವಿಷದ ಮೂಲಕ ನೋವುಂಟುಮಾಡುವುದು), ಮತ್ತು 341 (ತಪ್ಪು ಸಂಯಮದ ಶಿಕ್ಷೆ) ಅಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ವಿಷ ಪ್ರಾಶನವಾಗಿರುವುದು ಸಾಬೀತು

ಮೃತ ಯುವತಿಯ ಒಳಾಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲಕಿಯ ಶವಪರೀಕ್ಷೆ ವೇಳೆ ವಿಷ ಪ್ರಾಶನದ ಹೋರಾಟದ ಯಾವುದೇ ಸೂಚನೆಗಳು ಅಥವಾ ಗುರುತುಗಳಿಲ್ಲ ಎಂದು ವರದಿ ಹೇಳಿವೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಎಸ್ಪಿ ಮತ್ತು ಡಿಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ಇದನ್ನೂ ಓದಿ: Crime News: ನೈಲಾನ್ ಹಗ್ಗದಿಂದ ಗಂಡನ ಕತ್ತು ಹಿಸುಕಿ ಕೊಂದು ದೇಹವನ್ನು ನೇಣಿಗೆ ಹಾಕಿ ತೂಗಿಸಿದ್ಲು..!

ಯುವತಿಯೇ ವಿಷ ಸೇವಿಸಿದ್ದಾಳೆಯೇ ಅಥವಾ ಬಲವಂತವಾಗಿ ವಿಷ ಹಾಕಲಾಗಿದೆಯೇ ಎಂಬುವುದನ್ನು ಬಹಿರಂಗಪಡಿಸಲು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವಿಜಯ್ ಸಿಂಗ್ ಹೇಳಿದರು.

50 ವಿದ್ಯಾರ್ಥಿಗಳ ಹೇಳಿಕೆ ದಾಖಲು

ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ನಾವು ಸುಮಾರು 50 ವಿದ್ಯಾರ್ಥಿಗಳ ಹೇಳಿಕೆಗಳನ್ನು ಸಹ ತೆಗೆದುಕೊಂಡಿದ್ದೇವೆ, ಆಕೆಯ ಸಹಪಾಠಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ. ಈ ಹುಡುಗರ ಬಗ್ಗೆ ಕೆಟ್ಟ ಅಭಿಪ್ರಾಯಗಳಿದ್ದು, ಹಲವರು ಶಿಕ್ಷಕರಿಗೆ ದೂರು ನೀಡಿದ್ದರು ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.

ಅಪ್ಪ ಅಮ್ಮನಲ್ಲಿ ನೋವು ತೋಡಿಕೊಂಡಿದ್ದ ವಿದ್ಯಾರ್ಥಿನಿ

ಯುವತಿ ಬಿಎ-ಬಿಇಡಿ (ಸ್ನಾತಕೋತ್ತರ ಅಥವಾ ಆರ್ಟ್ಸ್-ಸ್ನಾತಕೋತ್ತರ) ವಿದ್ಯಾರ್ಥಿಯಾಗಿದ್ದಳು. ಮಂಗಳವಾರದಂದು ಹಳೇನಗರದಲ್ಲಿ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿರುವ ಮಗಳು ತನ್ನ ತಾಯಿಗೆ ಕರೆ ಮಾಡಿ ತನ್ನ ಕಾಲೇಜಿನ ಕೆಲವು ವಿದ್ಯಾರ್ಥಿಗಳು ತಮ್ಮೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಫಾಲೋ ಮಾಡಿ ಕೃತ್ಯ

ದೂರಿನ ಪ್ರಕಾರ ಹುಡುಗರು ಮಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕೆ ಮನೆಗೆ ಹಿಂದಿರುಗುತ್ತಿದ್ದಾಗ ವಿದ್ಯಾರ್ಥಿಗಳು ಆಕೆಯನ್ನು ಹಿಂಬಾಲಿಸಿ ಬಲವಂತವಾಗಿ ಸ್ವಲ್ಪ ವಿಷ ಬೆರೆಸಿದ ನೀರು ಕುಡಿಸಿದ್ದಾರೆ ಎಂದು ವರದಿಯಾಗಿದೆ. ಹೀಗೆ ವಿಷದ್ರವ ಸೇವೆಸಿ ಮನೆಗೆ ಬಂದ ಯುವತಿ ವಾಂತಿ ಮಾಡಿಕೊಳ್ಳತೊಡಗಿದಳು.

ಇದನ್ನೂ ಓದಿ: Gayatri Mantra: ಇನ್ನು ಮುಂದೆ ಜೈಲಿನಲ್ಲಿ ಕೇಳಿ ಬರಲಿದೆ ಗಾಯತ್ರಿ ಮಂತ್ರ! ಕೈದಿಗಳ ಮನ ಪರಿವರ್ತನೆಗೆ ನಿತ್ಯ ಪಠಣ

ಅಸ್ವಸ್ಥ ಸ್ಥಿತಿಯಲ್ಲಿದ್ದ ಯುವತಿಯನ್ನು ಏಪ್ರಿಲ್ 5 ರಂದು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ ಎಂದು ಹಳೇನಾಳ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
Published by:Divya D
First published: