Rajasthan: ಗೆಳೆಯನ ತಮಾಷೆಗೆ ಬಲಿಯಾದ ಯುವಕ, ಬರ್ತ್​ಡೇ ಪಾರ್ಟಿಯಲ್ಲಿ ದುರಂತ!

ರಾಜಸ್ಥಾನದ ಕೋಟಾ ಜಿಲ್ಲೆಯ ಸಿಮಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಸ್ನೇಹಿತನೊಬ್ಬ ಮಾಡಿದ ತಮಾಷೆಗೆ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ಪಾರ್ಟಿ ಮಾಡುತ್ತಿದ್ದ ಸ್ನೇಹಿತರು ಅಲ್ಲಿಂದ ಓಡಿ ಹೋಗಿದ್ದಾರೆ.

ತಮಾಷೆಯಾಟಕ್ಕೆ ಬಲಿಯಾದ ರಾಜಸ್ಥಾನದ ನರೇಶ್

ತಮಾಷೆಯಾಟಕ್ಕೆ ಬಲಿಯಾದ ರಾಜಸ್ಥಾನದ ನರೇಶ್

  • Share this:
ಜೈಪುರ(ಆ.22): ರಾಜಸ್ಥಾನದ (Rajasthan) ಕೋಟಾ ಜಿಲ್ಲೆಯಲ್ಲಿ ಯುವಕನೊಬ್ಬ ತಮಾಷೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಗೆಳೆಯನ ಹುಟ್ಟುಹಬ್ಬಕ್ಕೆ ಬಂದಿದ್ದ ಯುವಕ, ಪಾರ್ಟಿಯಲ್ಲಿ (Party) ಮದ್ಯಪಾನ ಮಾಡುತ್ತಿದ್ದಾಗ, ಸ್ನೇಹಿತ ಮಾಡಿದ ತಮಾಷೆಗೆ ಭಯ ಭೀತನಾಗಿ ಛಾವಣಿಯಿಂದ ಜಿಗಿದಿದ್ದಾನೆ. ಈ ವೇಳೆ ಅಲ್ಲಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ತಂತಿಯ ಹಿಡಿತಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಪಾರ್ಟಿ ಮಾಡುತ್ತಿದ್ದ ಆತನ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಆಗಮಿಸಿ ಯುವಕನ ಶವವನ್ನು ಮೇಲಕ್ಕೆತ್ತಿ ಶವಾಗಾರದಲ್ಲಿರಿಸಿದ್ದಾರೆ. ಈ ವಿಷಯವು ಕೋಟಾ ಜಿಲ್ಲೆಯ ಸಿಮ್ಲಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಂಭವಿಸಿದೆ.

ಪೊಲೀಸರ ಪ್ರಕಾರ, ಈ ಘಟನೆ ಒಂದು ದಿನದ ಹಿಂದೆ ಸಿಮ್ಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಯುವಕ ನರೇಶ್ ಕಂದಾರ ತೇಜಪುರ ಬಸ್ತಿ ನಿವಾಸಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಮ್ಲಿಯಾ ಪೊಲೀಸ್ ಠಾಣೆಯಿಂದ ಆತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಎರಡು-ಮೂರು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿ ನರೇಶ್ ಮನೆಗೆ ಹೋಗಿದ್ದರು. ಆದರೆ ಆತ ಮನೆಯಲ್ಲಿ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ:  Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಕುಡಿದ ಅಮಲಿನಿಂದಾಗಿ ವಿದ್ಯುತ್ ತಂತಿ ಬಗ್ಗೆ ತಿಳಿಯಲಿಲ್ಲ

ಶನಿವಾರ ರಾತ್ರಿ ನರೇಶ್ ಬಾಬಾ ರಕ್ತಾಯ ಭೈರೂಜಿ ದೇವಸ್ಥಾನದ ಆವರಣದಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ಬಂದಿದ್ದರು. ಅಲ್ಲಿ ಸ್ನೇಹಿತರೊಂದಿಗೆ ವೈನ್ ಕುಡಿದಿದ್ದ. ರಾತ್ರಿ ಸುಮಾರು 10 ಗಂಟೆಗೆ ಕೇಕ್ ಕತ್ತರಿಸುತ್ತಿದ್ದಾಗ ಸ್ನೇಹಿತರೊಬ್ಬರು ಇಲ್ಲಿಗೆ ಪೊಲೀಸರು ಬರಲಿದ್ದಾರೆ ಎಂದು ತಮಾಷೆಗೆ ಹೇಳಿದ್ದಾನೆ. ಇದನ್ನು ಕೇಳಿದ ಆತ ಭಯಗೊಂಡಿದ್ದಾನೆ ಹಾಗೂ ಛಾವಣಿಗೆ ಓಡಿ ಅಲ್ಲಿಂದ ಕೆಳಗೆ ಜಿಗಿದಿದ್ದಾನೆ. ಕುಡಿದ ಅಮಲಿನಲ್ಲಿ ಕತ್ತಲಾಗಿದ್ದರಿಂದ ಅಲ್ಲಿ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿರುವುದು ಆತನಿಗೆ ಗೊತ್ತಿರಲಿಲ್ಲ. ಕತ್ತಲೆಯಲ್ಲಿ, ಆತನಿಗೆ ಭಾರೀ ಪ್ರಮಾಣದ ಶಾಕ್ ಹೊಡೆದಿದ್ದು, ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Banashankari Murder Case: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

ಅಪಘಾತ ಸಂಭವಿಸಿದ ತಕ್ಷಣ ಪಾರ್ಟಿ ಮಾಡುತ್ತಿದ್ದ ಸ್ನೇಹಿತರು ಪರಾರಿ

ಅಪಘಾತದ ವಿಷಯ ತಿಳಿದ ತಕ್ಷಣ ಗದ್ದಲ ಉಂಟಾಗಿ ಪಾರ್ಟಿ ಮಾಡುತ್ತಿದ್ದ ಸ್ನೇಹಿತರು ಓಡಿ ಹೋಗಿದ್ದಾರೆ. ನಂತರ ಯಾರೋ ಪೊಲೀಸರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕಾಗಮಿಸಿ ಶವವನ್ನು ಅಲ್ಲಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ನರೇಶ್ ಕಂದರ ಅವರ ಚಿಕ್ಕಪ್ಪ ಮಹಾವೀರ ಕಂದರ ನೀಡಿದ ವರದಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Published by:Precilla Olivia Dias
First published: