• Home
  • »
  • News
  • »
  • national-international
  • »
  • Rajasthan: ಕಾಂಗ್ರೆಸ್ ಮುಖಂಡನ 21 ವರ್ಷದ ಮಗಳು ನಾಪತ್ತೆ, 40 ಗಂಟೆ ಕಳೆದರೂ ಸುಳಿವಿಲ್ಲ!

Rajasthan: ಕಾಂಗ್ರೆಸ್ ಮುಖಂಡನ 21 ವರ್ಷದ ಮಗಳು ನಾಪತ್ತೆ, 40 ಗಂಟೆ ಕಳೆದರೂ ಸುಳಿವಿಲ್ಲ!

ನಾಪತ್ತೆಯಾದ ಅಭಿಲಾಷಾ

ನಾಪತ್ತೆಯಾದ ಅಭಿಲಾಷಾ

ಕಾಂಗ್ರೆಸ್ ಮುಖಂಡ ಗೋಪಾಲ್ ಕೇಶವತ್ ಅವರ ಪುತ್ರಿ 21ರ ಹರೆಯದ ಅಭಿಲಾಷಾ ಅಪರಾಹನ ಪ್ರಕರಣದಲ್ಲಿ ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಸೋಮವಾರ ಸಂಜೆ ಜೈಪುರದ ಪ್ರತಾಪ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಭಿಲಾಷಾ ಅವರನ್ನು ಹಗಲಿನಲ್ಲಿ ಅಪಹರಿಸಲಾಗಿತ್ತು. ಇತ್ತೀಚಿನ ನವೀಕರಣಗಳನ್ನು ಓದಿ.

ಮುಂದೆ ಓದಿ ...
  • News18
  • Last Updated :
  • Jaipur, India
  • Share this:

ಜೈಪುರ(ನ.23): ರಾಜಸ್ಥಾನ (Rajasthan) ಅಲೆಮಾರಿ ಜಾತಿಗಳ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ (Congress) ಮುಖಂಡ ಗೋಪಾಲ್ ಕೇಶವತ್ (Gopal Kesawat) ಅವರ 21 ವರ್ಷದ ಪುತ್ರಿ ಅಭಿಲಾಷಾ ಕೇಶವತ್ ಅಪಹರಣವಾಗಿ ಸುಮಾರು 40 ಗಂಟೆಗಳು ಕಳೆದಿವೆ, ಹೀಗಿದ್ದರೂ ಪೊಲೀಸರಿಗೆ ಯಾವುದೇ ಸುಳಿವಿ ಸಿಕ್ಕಿಲ್ಲ. ಈ ಅವಧಿಯಲ್ಲಿ ಪೊಲೀಸರು ಸ್ಥಳ ಮತ್ತು ಸುತ್ತಮುತ್ತ ಅಳವಡಿಸಿರುವ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ (CCTV Camera) ದೃಶ್ಯಾವಳಿಗಳನ್ನು ಶೋಧಿಸಿದ್ದು, ಅಭಿಲಾಷಾ ಪತ್ತೆಯಾಗಿಲ್ಲ. ಪ್ರತಾಪನಗರ ಪೊಲೀಸ್ ಠಾಣೆಯೊಂದಿಗೆ ಸಿಎಸ್‌ಟಿ ಮತ್ತು ಡಿಎಸ್‌ಟಿ ತಂಡಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಆದರೆ ಇದುವರೆಗೂ ಅಭಿಲಾಷಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.


ರಾಜಧಾನಿ ಜೈಪುರದಲ್ಲಿ ಹಾಡಹಗಲೇ ಕಿಡ್ನಾಪ್ ಆದ ಈ ಘಟನೆಯ ನಂತರ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು ಗೋಪಾಲ್ ಕೇಶವತ್ ನೀಡಿದ ಮಾಹಿತಿ ಮೇರೆಗೆ ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಅವರಿಂದಲೂ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಅಪಹರಣದ ನಂತರ ಸಂಜೆಯ ವೇಳೆಗೆ ಅಭಿಲಾಷಾ ಅವರ ಮೊಬೈಲ್​ನ ಕೊನೆಯ ಲೊಕೇಷನ್​ ಪತ್ತೆ ಹಚ್ಚಲಾಯಿತು, ಆದರೆ ಇದಾದ ನಂತರ ಅವರೆಲ್ಲಿದ್ದಾರೆಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ಇದನ್ನೂ ಓದಿ:  Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್


ಅಳಲು ತೋಡಿಕೊಂಡ ಕೇಶವತ್ ಕುಟುಂಬ


ಮತ್ತೊಂದೆಡೆ, ಮಗಳ ಅಪಹರಣ ನಡೆದು 40 ಗಂಟೆಗಳಿಗೂ ಹೆಚ್ಚು ಕಳೆದರೂ, ಕೇಶವತ್ ಅವರ ಕುಟುಂಬವು ಆಕೆಯ ಬಗ್ಗೆ ಸುಳಿವು ಸಿಗದೆ ಕಂಗಾಲಾಗಿದೆ. ಡ್ರಗ್ಸ್ ವಿರುದ್ಧದ ತಮ್ಮ ರಾಜಕೀಯ ಅಭಿಯಾನವು ಕೆಲವರ ಕೋಪಕ್ಕೆ ಕಾರಣವಾಗಿರಬಹುದು, ಮಗಳ ಅಪಹರಣಕ್ಕೂ ಇದೇ ಕಾರಣವಿರಬಹುದು ಎಂದು ಕೇಶವತ್ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದಿನ ಗೆಹ್ಲೋಟ್ ಸರ್ಕಾರದಲ್ಲಿ ಕೆಸಾವತ್ ಅವರು ರಾಜಸ್ಥಾನ ಅಲೆಮಾರಿ ಜಾತಿ ಮಂಡಳಿಯ ಅಧ್ಯಕ್ಷರಾಗಿದ್ದರು. ಆಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನವಿತ್ತು. ಈ ಸಂಬಂಧ ಕೇಶವತ್ ಅವರು ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ.


ಇದನ್ನೂ ಓದಿ:  PFI Ban: ಪಿಎಫ್​ಐ ನಿಷೇಧದ ಬಗ್ಗೆ ಸಿದ್ದರಾಮಯ್ಯ, ನಟ ಚೇತನ್ ಹೇಳಿದ್ದೇನು?


ಸೋಮವಾರ ಸಂಜೆ ಅಭಿಲಾಷಾ ಅವರ ಅಪಹರಿಸಲಾಗಿತ್ತು


ಸೋಮವಾರ ಸಂಜೆ 5.30ರ ಸುಮಾರಿಗೆ ತರಕಾರಿ ತರಲು ಅಭಿಲಾಷಾ ಸ್ಕೂಟಿಯಲ್ಲಿ ತೆರಳಿದ್ದರು ಎಂಬುದು ಗಮನಾರ್ಹ. ಆ ನಂತರ ಆಕೆ ಮನೆಗೆ ಹಿಂತಿರುಗಿರಲಿಲ್ಲ. ಆ ನಂತರ ಮಗಳಿಂದ ನನಗೆ ಕರೆ ಬಂದಿತ್ತು ಎಂದಿರುವ ಗೋಪಾಲ್ ಕೇಶವತ್, ಫೋನ್‌ನಲ್ಲಿ ಕೆಲವು ಹುಡುಗರು ತನ್ನನ್ನು ಹಿಂಬಾಲಿಸಿದ್ದಾರೆ,ನೀನು ಕಾರು ತನ್ನಿ ಎಂದು ಮಗಳು ಹೇಳಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಶವತ್ ಕುಟುಂಬ ಸದಸ್ಯರೊಂದಿಗೆ ಮಗಳು ತಿಳಿಸಿದ್ದ ಸ್ಥಳಕ್ಕೆ ತೆರಳಿದ್ದರು, ಆದ್ರೆ ಅಲ್ಲಿ ಆಕೆ ಪತ್ತೆಯಾಘಿರಲಿಲ್ಲ. ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ರಸ್ತೆಯ ಪೊದೆಯಲ್ಲಿ ಅಭಿಲಾಷಾ ಅವರ ಸ್ಕೂಟಿ ಪತ್ತೆಯಾಗಿತ್ತು.

Published by:Precilla Olivia Dias
First published: