HOME » NEWS » National-international » RAJASTHAN HIGH COURT DIRECTS SPEAKER NOT TO TAKE ACTION AGAINST SACHIN PILOT AND REBEL CONGRESS MLAS TILL TUESDAY SCT

Rajasthan Political Crisis: ಸಚಿನ್ ಪೈಲಟ್​ಗೆ ತಾತ್ಕಾಲಿಕ ರಿಲೀಫ್; ಹೈಕೋರ್ಟ್​ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ

Rajasthan Political Updates: ಇಂದು ಸಚಿನ್ ಪೈಲಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್​ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ವಿರುದ್ಧ ಮಂಗಳವಾರದವರೆಗೆ ಯಾವುದೇ ಕ್ರಮ ಜರುಗಿಸಬಾರದು ಎಂದು ತಾತ್ಕಾಲಿಕ ತಡೆ ನೀಡಿದೆ.

Sushma Chakre | news18-kannada
Updated:July 17, 2020, 7:20 PM IST
Rajasthan Political Crisis: ಸಚಿನ್ ಪೈಲಟ್​ಗೆ ತಾತ್ಕಾಲಿಕ ರಿಲೀಫ್; ಹೈಕೋರ್ಟ್​ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
ಸಚಿನ್ ಪೈಲಟ್
  • Share this:
ಜೈಪುರ (ಜು. 17): ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ವಿಪ್ ಜಾರಿಯಲ್ಲಿದ್ದರೂ ಸಿಎಲ್​ಪಿ ಸಭೆಯಲ್ಲಿ ಭಾಗಿಯಾಗದ ಸಚಿನ್ ಪೈಲಟ್ ಮತ್ತು ಅವರ ಬಣದ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಿ, ಸ್ಪೀಕರ್ ಆದೇಶ ಹೊರಡಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಸಚಿನ್ ಪೈಲಟ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ಅನರ್ಹತೆಯ ನೋಟೀಸ್​ಗೆ ರಾಜಸ್ಥಾನ ಹೈಕೋರ್ಟ್​ ತಡೆನೀಡಿದೆ.

ಇಂದು ಸಚಿನ್ ಪೈಲಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್​ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ವಿರುದ್ಧ ಮಂಗಳವಾರದವರೆಗೆ ಯಾವುದೇ ಕ್ರಮ ಜರುಗಿಸಬಾರದು ಎಂದು ತಾತ್ಕಾಲಿಕ ತಡೆ ನೀಡಿದೆ. ಅಲ್ಲದೆ, ಈ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಈ ಮೂಲಕ ಸಚಿನ್ ಪೈಲಟ್ ಬಣಕ್ಕೆ ತಾತ್ಕಾಲಿಯ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ:Madhya Pradesh Politics: ರಾಜಸ್ಥಾನದ ಬೆನ್ನಲ್ಲೇ ಕಾಂಗ್ರೆಸ್​ಗೆ ಮತ್ತೊಂದು ಶಾಕ್; ಮಧ್ಯಪ್ರದೇಶದ ಕೈ ಶಾಸಕಿ ರಾಜೀನಾಮೆ

200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಟಿಪಿಯ ಇಬ್ಬರು ಶಾಸಕರಿದ್ದಾರೆ. ಬಹುಮತಕ್ಕೆ 101 ಶಾಸಕರ ಅಗತ್ಯವಿದ್ದು, ತಮಗೆ 109 ಶಾಸಕರ ಬೆಂಬಲ ಇರುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿಯಲ್ಲಿ 72 ಶಾಸಕರಿದ್ದು, ಸಚಿನ್ ಪೈಲಟ್ ಬಣದಲ್ಲಿ ಮೂವರು ಪಕ್ಷೇತರರು ಸೇರಿದಂತೆ 22 ಶಾಸಕರು ಇದ್ದಾರೆ. ಇಂದು ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಹಾಗೂ ನ್ಯಾಯಮೂರ್ತಿ ಪ್ರಕಾಶ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಂಗಳವಾರದವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್ ಸಿಪಿ ಜೋಶಿ ಅವರಿಗೆ ಸೂಚಿಸಿದೆ.
Youtube Video

ಜುಲೈ 21ರ ವರೆಗೆ ಬಂಡಾಯ ಶಾಸಕರ ವಿರುದ್ಧ ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಭರವಸೆ ನೀಡಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಸೋಮವಾರ ಬೆಳಗ್ಗೆ 10.30ಕ್ಕೆ ತಮ್ಮ ವಾದ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಸಚಿನ್‌ ಪೈಲಟ್‌ ಪರ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ವಾದ ಮಂಡಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.
Published by: Sushma Chakre
First published: July 17, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories