ಮಗುವನ್ನು ಸಾಯಿಸಿದ ಅಮ್ಮನನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದ್ಯಾಕೆ?

news18
Updated:August 6, 2018, 4:01 PM IST
ಮಗುವನ್ನು ಸಾಯಿಸಿದ ಅಮ್ಮನನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದ್ಯಾಕೆ?
news18
Updated: August 6, 2018, 4:01 PM IST
ನ್ಯೂಸ್​18 ಕನ್ನಡ

ರಾಜಸ್ಥಾನ (ಆ. 6): ಋತುಚಕ್ರದ ಆರಂಭದ ಸಮಯದಲ್ಲಿ ಉಂಟಾದ ಮಾನಸಿಕ ಅಸಮತೋಲನದಿಂದ ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ ಘಟನೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್​ ಆ ಮಹಿಳೆಗೆ ಖುಲಾಸೆಗೊಳಿಸಿದೆ.

ಇನ್ಸಾನಿಟಿ ಟ್ರಿಗರ್ಡ್​ ಫ್ರಮ್​ ಪ್ರಿಮೆನ್​ಸ್ಟ್ರುವಲ್​ ಸ್ಟ್ರೆಸ್​ ಸಿಂಡ್ರೋಮ್​ ಅಥವಾ ಪಿಎಂಎಸ್​ ಎಂಬ  ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಾ ಎಂಬ ಮಹಿಳೆ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದರು. ಇಬ್ಬರು ಮಕ್ಕಳನ್ನು ಅಕ್ಕಪಕ್ಕದ ಜನ ಸೇರಿ ರಕ್ಷಿಸಿದ್ದರು. ಆದರೆ, ಒಂದು ಮಗು ನೀರಿನಲ್ಲಿ ಮುಳುಗಿ ಸತ್ತುಹೋಗಿತ್ತು.

ಈ ಪ್ರಕರಣದಲ್ಲಿ ಟ್ರಯಲ್​ ಕೋರ್ಟ್​ ಚಂದ್ರಾ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 100 ರೂ.ಗಳ ದಂಡ ವಿಧಿಸಿತ್ತು. ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ ಚಂದ್ರಾ ಅವರ ಪರ ವಕೀಲರು ವೈದ್ಯಕೀಯ ದಾಖಲೆಗಳ ಮೂಲಕ ತನ್ನ ಕಕ್ಷಿದಾರರಿಗೆ ಇರುವ ಮಾನಸಿಕ ಸಮಸ್ಯೆಯನ್ನು ಸಾಬೀತುಪಡಿಸಿದ್ದರು.

ಪಿಎಂಎಸ್​ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಾ ಅವರ ಸಮಸ್ಯೆಯನ್ನು ಪರಿಗಣಿಸಿದ ನ್ಯಾಯಮೂರ್ತಿ ಮಹಮ್ಮದ್​ ರಫೀಕ್​, ಗೋವರ್ಧನ್​ ಬರ್ಧಾರ್​ ಅವರಿರುವ ಪೀಠ ಆಕೆಯ ಮಾನಸಿಕ ಸಮಸ್ಯೆಯ ಬಗ್ಗೆ ಸಾಕಷ್ಟು ಪುಸ್ತಕಗಳಲ್ಲಿ ಅಧ್ಯಯನ ಮಾಡಿ ಖುಲಾಸೆಗೊಳಿಸಿದೆ.

ಆ ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಈ ವೇಳೆ ಹೇಳಿಕೆ ನೀಡಿದ್ದು, ಈ ಸಮಸ್ಯೆಯಿರುವ ಮಹಿಳೆಯರು ಋತುಚಕ್ರ ಸಮೀಪಿಸುತ್ತಿದ್ದಂತೆ ಸಾಮಾನ್ಯರಂತೆ ಇರುವುದಿಲ್ಲ. ಕೆಲವರು ಅತಿಯಾದ ಒತ್ತಡಕ್ಕೊಳಗಾದರೆ ಇನ್ನು ಕೆಲವರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸುತ್ತಾರೆ. ಆದರೆ, ಬಹುತೇಕ  ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಉಂಟಾಗುವ ಈ ಮಾನಸಿಕ ಏರುಪೇರು ಒಂದು ಖಾಯಿಲೆಯೆಂಬುದೇ ಗೊತ್ತಿರುವುದಿಲ್ಲ.  ಆದರೆ, ಕೆಲವರಿಗೆ ಅದು ಗಂಭೀರ ಸಮಸ್ಯೆಯಾಗಿ ಕಾಡುತ್ತದೆ ಎಂದು ಹೇಳಿದ್ದಾರೆ.

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...