'ಮುಸ್ಲಿಂ' ನಗರಗಳ ಹೆಸರನ್ನು ಬದಲಾಯಿಸುತ್ತಿದೆ ರಾಜಸ್ಥಾನ ಸರ್ಕಾರ: 'ಮಿಯೋಂ ಕಾ ಬಾಡಾ' ಆಯ್ತು 'ಮಹೇಶ್​ ನಗರ'


Updated:August 10, 2018, 11:47 AM IST
'ಮುಸ್ಲಿಂ' ನಗರಗಳ ಹೆಸರನ್ನು ಬದಲಾಯಿಸುತ್ತಿದೆ ರಾಜಸ್ಥಾನ ಸರ್ಕಾರ: 'ಮಿಯೋಂ ಕಾ ಬಾಡಾ' ಆಯ್ತು 'ಮಹೇಶ್​ ನಗರ'

Updated: August 10, 2018, 11:47 AM IST
ನ್ಯೂಸ್​ 18 ಕನ್ನಡ

ಜೈಪುರ(ಆ.09): ರಾಜಸ್ಥಾನ ಸರ್ಕಾರ ಎರಡು ಹಳ್ಳಿಗಳ ಹೆಸರನ್ನು ಬದಲಾಯಿಸಿದೆ. ಆದರೆ ಹೆಸರು ಬದಲಾಯಿಸಲಾದ ಎರಡೂ ಮುಸ್ಲಿಂ ಹಳ್ಳಿಗಳಿಗೆ ಹಿಂದೂ ಹೆಸರುಗಳಿಂದ ಮರುನಾಮಕರಣ ಮಾಡಲಾಗಿದೆ ಎಂಬುವುದೇ ಅತ್ಯಂತ ಕುತೂಹಲಕಾರಿ ವಿಚಾರವಾಗಿದೆ. ಒಂದೆಡೆ ಇಲ್ಲಿನ ಝುಂಝನೂ ಎಂಬಲ್ಲಿನ ಇಸ್ಮಾಯಿಲ್​ಪುರ್​ ಎಂಬ ಹಳ್ಳಿಯ ಹೆಸರನ್ನು ಪಿಚಾನ್ವಾ ಕುರ್ದ್​ ಎಂದು ಬದಲಾಯಿಸಿದ್ದರೆ, ಮತ್ತೊಂದೆಡೆ ಬಾಡ್​ಮೇರ್​ ಜಿಲ್ಲೆಯ ಮಿಯೋಂ ಕಾ ಬಾಡಾ ಹೆಸರನ್ನು ಬದಲಾಯಿಸಿ ಮಹೇಶ್​ನಗರ್​ ಎಂದು ಮರು ನಾಮಕರಣ ಮಾಡಲಾಗಿದೆ.

ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನ ಸರ್ಕಾರವು ತನ್ನ ರಾಜ್ಯದ 27 ಹಳ್ಳಿಗಳ ಹೆಸರನ್ನು ಬದಲಾಯಿಸಲು ಅವಕಾಶ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿತ್ತು. ಇವುಗಳಲ್ಲಿ 8 ಹಳ್ಳಿಗಳ ಹೆಸರು ಮರು ನಾಮಕರಣ ಮಾಡಲು ಅನುಮತಿ ಸಿಕ್ಕಿತ್ತು. ಇನ್ನು ಈ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಬಹುತೇಕ ಮುಸ್ಲಿಂ ಹೆಸರುಗಳಿರುವ ಹಳ್ಳಿಗಳೆಂದು ಹೇಳಲಾಗಿದೆ.

ಇನ್ನು ಲಭ್ಯವಾದ ಮಾಹಿತಿ ಅನ್ವಯ ಇಲ್ಲಿನ ಸ್ಥಳೀಯರು ತಮ್ಮ ಹಳ್ಳಿಯ ಮುಸ್ಲಿಂ ಹೆಸರಿನ ಕುರಿತಾಗಿ ದೂರು ನೀಡಿದ್ದರೆಂದು ತಿಳಿದು ಬಂದಿದೆ. ಪಾಕಿಸ್ತಾನದ ಗಡಿ ಭಾಗದ ಜಿಲ್ಲೆಯಾಗಿರುವ ಬಾಡ್​ಮೇರ್​ನಲ್ಲಿರುವ 'ಮಿಯೋಂ ಕಾ ಬಾಡಾ' ಎಂಬುವುದೂ ಇಂತಹುದೇ ಒಂದು ಹಳ್ಳಿಯಾಗಿದೆ. ಸುಮಾರು 2000 ಜನಸಂಖ್ಯೆ ಇರುವ ಈ ಹಳ್ಳಿಯಲ್ಲಿ ಹಿಂದೂ ಪ್ರಾತಿನಿಧ್ಯ ಹೆಚ್ಚಿದೆ. ಇಲ್ಲಿ ಕೇವಲ 4 ಕುಟುಂಬಗಳಷ್ಟೇ ಮುಸ್ಲಿಮರದ್ದಾಗಿದೆ. ಸ್ಥಳೀಯರು ತಮ್ಮ ಹಳ್ಳಿಗೆ ಈ ಹೆಸರಿರುವುದರಿಂದ ಭಾರೀ ಅವಮಾನವಾಗುತ್ತಿದೆ. ಹೀಗಾಗಿ ಹಳ್ಳಿಯ ಹೆಸರು ಬದಲಾಯಿಸಬೇಕೆಂದು ಒತ್ತಾಯಿಸಿದ್ದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.

ಅಧಿಕಾರಿಯೊಬ್ಬರು ಈ ಕುರಿತಾಗಿ ಮಾತನಾಡುತ್ತಾ "ಹಳ್ಳಿಗಿರುವ ಹೆಸರಿನಿಂದಾಗಿ ಇಲ್ಲ್ಲಿನ ಯುಕ/ಯುವತಿಯರಿಗೆ ಮದುವೆ ಸಂಬಂಧಗಳು ಬರುತ್ತಿಲ್ಲ. ಆದರೆ ಆಗಸ್ಟ್​ 1 ರಿಂದ ಅನ್ವಯವಾಗುವಂತೆ ಈ ಹಳ್ಳಿಯ ಹೆಸರನ್ನು ಬದಲಾಯಿಸಲಾಗಿದ್ದು, ಇನ್ಮುಂದೆ ಇದನ್ನು ಮಹೆಶ್​ ನಗರ್​ ಎಂದು ಕರೆಯಬಹುದಾಗಿದೆ" ಎಂದಿದ್ದಾರೆ.

ಹಳ್ಳಿಗಳ ಹೆಸರುಗಳನ್ನು ಬದಲಾಯಿಸುವುದು ಇದೇ ಮೊದಲಲ್ಲ. ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಅಧಿಕಾರಕ್ಕೇರಿದ ಬಳಿಕ ಅಕ್ಬರ್​ಪುರ್​ ಎಂಬುವುದು ಅಂಬೇಡ್ಕರ್​ ನಗರವಾಯಿತು. ಕಾಸ್​ಗಂಜ್​ ಎಂಬುವುದು ಕಾಶೀಗಾಂವ್​ ಆಯಿತು. ಹಾಥ್​ರಸ್​ ಎಂಬುವುದು ಮಹಾಮಾಯಾ ನಗರ ಆಯ್ತು. ಕಾನ್ಪುರ್​ ಎಂಬುವುದು ರಮಾಬಾಯಿ ನಗರವಾಯ್ತು. ಇತ್ತ ಅಮೇಟಿಯಲ್ಲಿ ಛತ್ರಪತಿ ಶಾಹೂಜಿ ಬದಲಾಯಿಸಿ ಮಹಾರಾಜ್​ ನಗರ ಎಂದಿಡಲಾಗಿತ್ತು.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ