ಜೈಪುರ: ಕಳೆದ ವಾರ ರಾಜಸ್ಥಾನದಲ್ಲಿ (Rajastan) ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರ ಭದ್ರತೆಯನ್ನು ಉಲ್ಲಂಘಿಸಿದ ಮತ್ತು ಅವರ ಅವರ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ (PHED) ಜೂನಿಯರ್ ಇಂಜಿನಿಯರ್ ಅನ್ನು ಅಮಾನತುಗೊಳಿಸಿದೆ. ಗೃಹ ಸಚಿವಾಲಯದ ಮಧ್ಯಪ್ರವೇಶದ (Madhya Pradesh) ನಂತರ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗವು (Public Health Engineering Department) ಇಂಜಿನಿಯರ್ ಅನ್ನು ಅಮಾನತುಗೊಳಿಸಿತು. ಜನವರಿ 4 ರಂದು ರೋಹೆತ್ನಲ್ಲಿ ನಡೆದ ಸ್ಕೌಟ್ ಗೈಡ್ ಜಾಂಬೂರಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ ಪಿಎಚ್ಇಡಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಅಂಬಾ ಸಿಯೋಲ್ ಅವರು ರಾಷ್ಟ್ರಪತಿ ಅವರ ಪಾದ ಮುಟ್ಟಲು ಪ್ರಯತ್ನಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದರು.
ಆರೋಪಿ ಅಂಬಾ ಸಿಯೋಲ್ ಅಮಾನತು
ಈ ಹಿನ್ನೆಲೆ ರಾಜಸ್ಥಾನ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 958 ರ ನಿಯಮ 342 ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ವ್ಯಾಯಾಮದಲ್ಲಿ ಕೆಳಗೆ ಸಹಿ ಮಾಡಲಾಗಿದೆ, ಈ ಮೂಲಕ ಕಿರಿಯ ಆರೋಪಿ ಅಂಬಾ ಸಿಯೋಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ ಎಂದು ಮುಖ್ಯ ಇಂಜಿನಿಯರ್ (ಆಡಳಿತ), PHED ರ ಆದೇಶದಲ್ಲಿ ತಿಳಿಸಿದ್ದಾರೆ.
A female engineer, who touched the feet of President Draupadi Murmu, has been suspended by the Rajasthan government, Video surfaced#thesummernews #DraupadiMurmu #president pic.twitter.com/U1SehLfY7A
— The Summer News (@TheSummerNews2) January 14, 2023
ಈ ಮುನ್ನ ಸ್ಕೌಟ್ ಗೈಡ್ ಜಾಂಬೂರಿಯ ಬಗ್ಗೆ ಮಾತನಾಡಿದ್ದ ರಾಜಭವನದ ವಕ್ತಾರರು ಜೈಪುರ ಅಭಿವೃದ್ಧಿ ಪ್ರಾಧಿಕಾರವು 9 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನವನವು ಸಂವಿಧಾನದ ರಚನೆಯಿಂದ ಅದರ ಅನುಷ್ಠಾನದವರೆಗಿನ ಪ್ರತಿಮೆಗಳು ಮತ್ತು ಚಿತ್ರಗಳ ಮೂಲಕ ಅದರ ಪ್ರಯಾಣವನ್ನು ಪ್ರದರ್ಶಿಸುತ್ತದೆ. ರಾಜ್ಯಪಾಲರ ವಿನೂತನ ಉಪಕ್ರಮದಿಂದ, ಸಾಮಾನ್ಯ ಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸಲು ರಾಜಭವನದಲ್ಲಿ ಸಂವಿಧಾನ ಉದ್ಯಾನವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ ಎಂದಿದ್ದರು.
ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ
ಇದೇ ರೀತಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ರೋಡ್ಶೋ ನಡುವೆ ಬಾಲಕನೋರ್ವ ಬ್ಯಾರಿಕೇಟ್ ಹಾರಿ ಬಂದು ನರೇಂದ್ರ ಮೋದಿ ಅವರಿಗೆ ಹಾರ ಹಾಕಲು ಮುಂದಾಗಿದ್ದನು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಟ್ ಹಾರಿದ್ದ ಬಾಲಕ
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಸ್ಥಳದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಆದರೆ ರೋಡ್ಶೋ ನಡುವೆ ಬಾಲಕನೋರ್ವ
ಬಾಲಕ ತಂದಿದ್ದ ಹಾರವನ್ನು ಭದ್ರತಾ ಸಿಬ್ಬಂದಿಯಿಂದ ಪಡೆದ ಮೋದಿ
ಬ್ಯಾರಿಕೇಟ್ ಹಾರಿ ಬಂದು ನರೇಂದ್ರ ಮೋದಿ ಅವರಿಗೆ ಹಾರ ಹಾಕಲು ಮುಂದಾಗಿದ್ದ. ಈ ವೇಳೆಗೆ ಪ್ರಧಾನಿಗಳ ಭದ್ರತಾ ದಳ ಬಾಲಕನ್ನು ತಡೆದು ದೂರ ಕಳುಹಿಸುವ ಪ್ರಯತ್ನ ಮಾಡಿದರು. ಆದರೆ ಮೋದಿ ಅವರ ಬಾಲಕ ತಂದಿದ್ದ ಹಾರವನ್ನು ಭದ್ರತಾ ಸಿಬ್ಬಂದಿಯಿಂದ ಪಡೆದುಕೊಂಡರು.
ಇದನ್ನೂ ಓದಿ:Education: ವಿಶೇಷ ಚೇತನರಿಗೆ ಶಿಕ್ಷಣ ನೀಡಲು ತಂತ್ರಜ್ಞಾನದ ಬಳಕೆ ಅಗತ್ಯ – ದ್ರೌಪದಿ ಮುರ್ಮು
ಪ್ರಧಾನಿಗಳ ಮೆಗಾ ರೋಡ್ಶೋಗಾಗಿ ಹುಬ್ಬಳ್ಳಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು. 2,900 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಲ್ಲದೇ, 7 ASI ದರ್ಜೆ ಅಧಿಕಾರಿಗಳು, 25 DISP ದರ್ಜೆ ಅಧಿಕಾರಿಗಳು, 60 PI, 18 KSRP ಸಿಬ್ಬಂದಿಯನ್ನ ನೇಮಿಸಲಾಗಿತ್ತು.
ಬಾಲಕನ ವರ್ತನೆಯಿಂದ ಕ್ಷಣ ಕಾಲ ಪೊಲೀಸಿರಗೆ ಶಾಕ್
ಇದರ ನಡುವೆಯೂ ಬಾಲಕ ಬ್ಯಾರಿಕೇಟ್ ದಾಟಿ ಮೋದಿ ವಾಹನದ ಬಳಿಗೆ ಬಂದಿದ್ದು, ಅಲ್ಲಿದ್ದ ಪೊಲೀಸಿರಗೆ ಕ್ಷಣ ಕಾಲ ಶಾಕ್ ನೀಡಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಬಾಲಕನನ್ನು ದೂರ ಕರೆದುಕೊಂಡು ಹೋದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ