ಜೈಪುರ (ಜೂ. 4): ಕೊರೋನಾ ಬಿಕ್ಕಟ್ಟಿನ ಸಮಯದಲ್ಲೂ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ಟಾ (Central Vista) ಯೋಜನೆಗೆ ಕಾಂಗ್ರೆಸ್ ಬಲವಾಗಿ ವಿರೋಧಿಸಿತ್ತು. ದೇಶದಲ್ಲಿ ಜನರು ಕೊರೋನಾ ಸೋಂಕಿನಿಂದ ತತ್ತರಿಸುತ್ತಿರುವಾಗ ಈ ಯೋಜನೆಯನ್ನು ಮುಂದುವರೆಸಿದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿರೋಧದ ನಡುವೆ ಈಗ ಕಾಂಗ್ರೆಸ್ ಕೂಡ ಶಾಸಕರಿಗಾಗಿ ಐಷಾರಾಮಿ ಫ್ಲಾಟ್ಗಳ ನಿರ್ಮಾಣಕ್ಕೆ ಮುಂದಾಗಿದೆ. ರಾಜಸ್ಥಾನ ಕಾಂಗ್ರೆಸ್ (Rajasthan Congress) ಈ ಕಾರ್ಯ ನಡೆಸಿದೆ. ಜೈ ಪುರದ ಜ್ಯೋತಿ ನಗರದ ಬಳಿ 160 ಐಷಾರಾಮಿ ಫ್ಲಾಟ್ಗಳ ನಿರ್ಮಾಣ ಕಾರ್ಯ ಎಗ್ಗಿಲ್ಲದೇ ಸಾಗಿದೆ. ಕಳೆದ ಮೇ 20ರಿಂದ ಈ ಕಾರ್ಯ ಆರಂಭಿಸಲಾಗಿದೆ.
ರಾಜಸ್ಥಾನ ಹೌಸಿಂಗ್ ಬೋರ್ಡ್ನಿಂದ ಶಾಸಕರಿಗಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ. 3,200 ಚದರ ಅಡಿಯಲ್ಲಿ ಪ್ರತಿಯೊಂದು ಫ್ಲಾಟ್ ನಿರ್ಮಾಣ ಮಾಡಲಾಗುತ್ತಿದೆ, ಒಂದು ಪ್ಲಾಟ್ನಲ್ಲಿ ನಾಲ್ಕು ಬೆಡ್ ರೂಂ ಗಳಿರಲಿದೆ. ಜೊತೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಈ ಯೋಜನೆಗೆ 266 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೌಸಿಂಗ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ನಿಗದಿಸಿದ ಸಮಯಕ್ಕೆ ತಕ್ಕಂತೆ ಈ ಯೋಜನೆಯನ್ನು ಆರಂಭಿಸಲಾಗಿದೆ. ರಾಜಸ್ಥಾನ ವಿಧಾನಸಭಾದ ಮುಂದೆ ಈ ಯೋಜನೆ ಇದೆ. ಜೈ ಪುರ ಅಭಿವೃದ್ಧಿ ಮಂಡಳಿ (ಜೆಡಿಎ) ಮೊದಲು 176 ಫ್ಲಾಟ್ಗಳ ನಿರ್ಮಾಣಕ್ಕೆ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ರಾಜಸ್ಥಾನ ಹೌಸಿಂಗ್ ಮಂಡಳಿ 160 ಫ್ಲಾಟ್ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತು, ಈ ಯೋಜನೆಯನ್ನು 30 ತಿಂಗಳ ಅವಧಿಯಲ್ಲಿ ಮುಗಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ರಾಜಸ್ಥಾನ ಹೌಸಿಂಗ್ ಬೋರ್ಡ್ ನಿಗದಿಗೆ ಮೊದಲೇ ಈ ಯೋಜನೆ ಮುಗಿಸುವ ಇರಾದೆ ಹೊಂದಿದೆ
ಇದನ್ನು ಓದಿ: ಜುಲೈ. 1ರಿಂದ ಶಾಲೆ ಆರಂಭಕ್ಕೆ ಸೂಚನೆ; ಪರಿಷ್ಕೃತ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ
ಎರಡನೇ ಅಲೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಯೋಜನೆಯನ್ನು ಆರಂಭಿಸಿರುವ ಕುರಿತು ಮಾತನಾಡಿರುವ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ಡೊತಸ್ರ, ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಈ ಕಾರ್ಯವನ್ನು ನಡೆಸಲಾಗಿದೆ ಎಂದು ಸಮಾಜಾಯಿಷಿ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದೆಹಲಿಯಲ್ಲಿ ಸೆಟ್ರಲ್ ವಿಸ್ಟಾ ಯೋಜನೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತು. ಈ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ, ಕೋವಿಡ್ ಬಿಕ್ಕಟ್ಟಿನಲ್ಲಿ ನಡೆಸುತ್ತಿರುವ ಈ ಕಾಮಗಾರಿ ದಂಡರ್ಹ ಅಪರಾಧ ಎಂದು ಟೀಕಿಸಿದ್ದರು.
ಸೆಂಟ್ರಲ್ ವಿಸ್ಟಾ ಯೋಜನೆ ಅಡಿ ನೂತನ ಸಂಸತ್ ಭವನ, ಸಾಮಾನ್ಯ ಕೇಂದ್ರ ಸಚಿವಾಲಯ (Central Secretariat) ಹಾಗೂ ವಿವಿಧ ಸರ್ಕಾರಿ ಕಚೇರಿಗಳಿರುವ ಕಟ್ಟಡಗಳು ನಿರ್ಮಾಣ ಆಗಲಿವೆ. ತ್ರಿಭುಜ (Triangle) ಆಕಾರದ ಸಂಸತ್ ಭವನವನ್ನು ಸುಮಾರು 971 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 2022ರಷ್ಟರಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2024ರಷ್ಟರಲ್ಲಿ ನೂತನ ಸಚಿವಾಲಯದ ಕಟ್ಟಡಗಳು ತಲೆ ಎತ್ತಲಿವೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ