• Home
 • »
 • News
 • »
 • national-international
 • »
 • ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ಗೆ ಆಂಜಿಯೋಪ್ಲ್ಯಾಸ್ಟಿ: ಆರೋಗ್ಯ ಸ್ಥಿರ ಎಂದ ವೈದ್ಯರು

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ಗೆ ಆಂಜಿಯೋಪ್ಲ್ಯಾಸ್ಟಿ: ಆರೋಗ್ಯ ಸ್ಥಿರ ಎಂದ ವೈದ್ಯರು

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​

ಅಶೋಕ್​ ಗೆಹ್ಲೋಟ್​ ನಾಯಕತ್ವದಲ್ಲಿ ಮುಂದುವರೆಯುದಿಲ್ಲ ಎಂದು ಅನೇಕ ರಾಜಸ್ಥಾನ ಕಾಂಗ್ರೆಸ್​ ನಾಯಕರು ಬಹಿರಂಗವಾಗಿ ಹೇಳಿದ್ದು ಕಾಂಗ್ರೆಸ್​ ಹೈಕಮಾಂಡಿಗೆ ಮುಜುಗರ ಉಂಟುಮಾಡಿತ್ತು.  

 • Share this:

  ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ  ನಂತರ ನಡೆಸಿದ ಪರೀಕ್ಷೆಗಳು ಸಾಮಾನ್ಯವಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹಿರಿಯ ಸರ್ಕಾರಿ ವೈದ್ಯರು ಶನಿವಾರ ಮಧ್ಯಾಹ್ನ ಹೇಳಿದ್ದಾರೆ. ಸುಧೀರ್ ಭಂಡಾರಿ, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ (SMS) ಮುಖ್ಯಸ್ಥರು ಸುದ್ದಿಗಾರರಿಗೆ ಮಾಹಿತಿ ನೀಡಿದರು.


  ಇಂತಹ ಸಂದರ್ಭಗಳಲ್ಲಿ, ರೋಗಿಗಳಿಗೆ ಸಾಮಾನ್ಯವಾಗಿ 24 ಗಂಟೆಗಳ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ನಂತರ ಮನೆಗೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಭಂಡಾರಿ ಹೇಳಿದರು.


  ಸಂಜೆಯೊಳಗೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರನ್ನು ಮನೆಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.


  ಗೆಹ್ಲೋಟ್ ಅವರಿಗೆ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು, ಅಲ್ಲಿ ಅವರ ಮೇಲೆ ಇನ್ನೂ ನಿಗಾವಹಿಸಲಾಗಿದೆ. ಅವರು ಮೂರು ಮುಖ್ಯ ಅಪಧಮನಿಗಳಲ್ಲಿ ಒಂದರಲ್ಲಿ 90 ಪ್ರತಿಶತದಷ್ಟು ಬ್ಲಾಕ್​ ಆಗಿತ್ತು.  ಆಂಜಿಯೋಪ್ಲ್ಯಾಸ್ಟಿ ನಡೆಸುವ ಮೂಲಕ ಅಪಧಮನಿಯಲ್ಲಿ ಸ್ಟಂಟ್​ ಹಾಕಲಾಗಿದೆ.

  70 ವರ್ಷದ ಕಾಂಗ್ರೆಸ್ ನಾಯಕ ಏಪ್ರಿಲ್‌ನಲ್ಲಿ ಕರೋನ ವೈರಸ್‌ ದಾಳಿಗೆ ತುತ್ತಾಗಿದ್ದರು  ಮತ್ತು ಮೇನಲ್ಲಿ ಕರೋನಾದಿಂದ ಚೇತರಿಸಿಕೊಂಡ ನಂತರ, ಅವರು ಕೋವಿಡ್ ನಂತರದ ಸಮಸ್ಯೆಗಳಿಗೆ ತುತ್ತಾಗಿ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಿಕೊಂಡಿದ್ದರು.


  ರಾಜಸ್ಥಾನದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್​ ಪಕ್ಷದ ಒಳಗೆ ಕಳೆದ ಒಂದುವರೆ ವರ್ಷದಿಂದ ಜಟಾಪಟಿ ನಡೆಯುತ್ತಿದ್ದು, ಯುವ ನಾಯಕ ಸಚಿನ್​ ಪೈಲಟ್​ ಅಶೋಕ್​ ಗೆಹ್ಲೋಟ್​ ವಿರುದ್ದ ಬಹಿರಂಗವಾಗಿಯೇ ದಂಗೆ ಎದ್ದಿದ್ದರು.


  ಅಶೋಕ್​ ಗೆಹ್ಲೋಟ್​ ನಾಯಕತ್ವದಲ್ಲಿ ಮುಂದುವರೆಯುದಿಲ್ಲ ಎಂದು ಅನೇಕ ರಾಜಸ್ಥಾನ ಕಾಂಗ್ರೆಸ್​ ನಾಯಕರು ಬಹಿರಂಗವಾಗಿ ಹೇಳಿದ್ದು ಕಾಂಗ್ರೆಸ್​ ಹೈಕಮಾಂಡಿಗೆ ಮುಜುಗರ ಉಂಟುಮಾಡಿತ್ತು.


  ಈಗ ಅಶೋಕ್​ ಗೆಹ್ಲೋಟ್​ ಆರೋಗ್ಯ ಹದಗೆಟ್ಟಿರುವ ಕಾರಣ, ಮತ್ತೆ ನಾಯಕತ್ವ ಬದಲಾವಣೆ ಕುರಿತು ಮತ್ತೆ ದನಿ ಎದ್ದೇಳುವ ಸಂದರ್ಭ ಬಂದಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹೇಳುತ್ತಿದ್ದಾರೆ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆ ಎದುರಾಗುವ ಕಾರಣ ಈಗ ಯಾರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುವುದು ಎನದನುವ ಅನಿಶ್ಚಿತತೆ ಎದುರಾಗಿದೆ.


  ಇದನ್ನೂ ಓದಿ: 'ಬಿಎಚ್' ಭಾರತ್ ಸರಣಿ ವಾಹನ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕೆ; ಹಂತ-ಹಂತದ ವಿವರ ಇಲ್ಲಿದೆ


  ಕಾಂಗ್ರೆಸ್​ನ ಹೈಕಮಾಂಡ್​ ಈ ವಿಚಾರವಾಗಿ  ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ. ರಾಹುಲ್​ ಗಾಂಧಿಯ ಆಪ್ತ ಗೆಳೆಯ ಸಚಿನ್​ ಪೈಲಟ್​ ಅವರಿಗೆ ಪಟ್ಟ ಕಟ್ಟಬೇಕು ಎನ್ನುವ ಇರಾದೆ ಇದ್ದು, ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್​ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆಯೇ ಎನ್ನುವುದು ಮುಂದಿರುವ ಪ್ರಶ್ನೆ?


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: