HOME » NEWS » National-international » RAJASTHAN CM GEHLOT AS 4 STATES MULL LAW SESR

ಲವ್​ ಜಿಹಾದ್​ ಬಿಜೆಪಿ ಸೃಷ್ಟಿ; ಮದುವೆ ವೈಯಕ್ತಿಕ ಸ್ವಾತಂತ್ರ್ಯ; ಅಶೋಕ್​ ಗೆಹ್ಲೋಟ್​

ರಾಷ್ಟ್ರವನ್ನು ವಿಭಜಿಸಿ, ಕೋಮು ಸೌಹಾರ್ದತೆಗೆ ಭಂಗ ತರಲು ಬಿಜೆಪಿ ರಚಿಸಿರುವ ಪದವೇ ಈ ಲವ್​ ಜಿಹಾದ್​ ಎಂದು ಸರಣಿ ಟ್ವೀಟ್​ ಮೂಲಕ ಹರಿಹಾಯ್ದಿದ್ದಾರೆ.

news18-kannada
Updated:November 20, 2020, 5:36 PM IST
ಲವ್​ ಜಿಹಾದ್​ ಬಿಜೆಪಿ ಸೃಷ್ಟಿ; ಮದುವೆ ವೈಯಕ್ತಿಕ ಸ್ವಾತಂತ್ರ್ಯ; ಅಶೋಕ್​ ಗೆಹ್ಲೋಟ್​
ಅಶೋಕ್ ಗೆಹ್ಲೋಟ್.
  • Share this:
ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸದ್ಯದಲ್ಲೇ ಲವ್​ ಜಿಹಾದ್ ನಿಷೇಧಕ್ಕೆ ಕಾನೂನು ತರುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಬಿಜೆಪಿ ಸರ್ಕಾರಗಳ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಬಿಜೆಪಿ ಸರ್ಕಾರಗಳು ರಾಷ್ಟ್ರದಲ್ಲಿ ಕೋಮುವಾದವನ್ನು ಹುಟ್ಟುಹಾಕುತ್ತಿದೆ. ಈ ಲವ್​ ಜಿಹಾದ್​ ಎಂಬ ಪದ ಬಂದಿದ್ದೆ ಬಿಜೆಪಿ ಇಂದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂತರ್​ ಧರ್ಮಿಯ ಮದುವೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದುಮ ಅವುಗಳನ್ನು ತಡೆಯುವ ಯಾವುದೇ ಕಾನೂನು ನ್ಯಾಯಲಯದಲ್ಲಿ ನಿಲ್ಲುವುದಿಲ್ಲ ಎಂದು ಹರಿಹಾಯ್ದರು. ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರಗಳು ಲವ್​ ಜಿಹಾದ್​ ವಿರುದ್ಧ ಕಾನೂನು ತರಲು ಮುಂದಾಗಿವೆ.ರಾಷ್ಟ್ರವನ್ನು ವಿಭಜಿಸಿ, ಕೋಮು ಸೌಹಾರ್ದತೆಗೆ ಭಂಗ ತರಲು ಬಿಜೆಪಿ ರಚಿಸಿರುವ ಪದವೇ ಈ ಲವ್​ ಜಿಹಾದ್​ ಎಂದು ಸರಣಿ ಟ್ವೀಟ್​ ಮೂಲಕ ಹರಿಹಾಯ್ದಿದ್ದಾರೆ.ಇನ್ನು ಅಶೋಕ್​ ಅವರ ಈ ಟ್ವೀಟ್​ಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖವಾತ್​, ಲವ್​ ಜಿಹಾದ್​ ಎಂಬುದು ಒಂದು ಬಲೆ. ಈ ಮೂಲಕ ಸಾವಿರಾರು ಅಮಾಯಕ ಯುವತಿಯನ್ನು ವೈಯಕ್ತಿಕ ಲಾಭಾಕ್ಕಾಗಿ ನಂಬಿಸಿ ಮದುವೆಯಾಗುತ್ತಾರೆ. ಇದು ಮಹಿಖೆಯರ ವೈಯಕ್ತಿಕ ಸ್ವಾತಂತ್ರಯದ ವಿಷಯವಾಗಿದ್ದರೆ, ಯಾಕೆ ಮಹಿಳೆಯರು ಅವರ ಧರ್ಮ ಮತ್ತು ಹೆಸರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.ಅಷ್ಟೇ ಅಲ್ಲದೇ ಮುಂದುವರೆದು ಟ್ವೀಟ್​ ಮಾಡಿರುವ ಅವರು, ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್​ ಇದನ್ನು ಬೆಂಬಲಿಸುತ್ತದೆ. ಇದು ಕೋಮುವಾದಿ ಕಾರ್ಯಸೂಚಿಯ ಪ್ರದರ್ಶನವಾಗುವುದಿಲ್ಲವೇ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಲವ್​ ಜಿಹಾದ್​ ಕಾನೂನು ತರಲು ಕಾನೂನು ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ ಸರ್ಕಾರ ಶೀಘ್ರದಲ್ಲಿಯೇ ಈ ಕುರಿತು ಕಾನೂನು ರೂಪಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇದನ್ನು ಜಾಮೀನು ರಹಿತ ಪ್ರಕರಣವಾಗಿ ಪರಿಗಣಿಸಲು ಮುಂದಾಗಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಶಾಸಕ ಸಿಟಿ ರವಿ, ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧಿಸುವ ಕಾಯ್ದೆಗಳ ಜಾರಿಗೆ ಬಿಜೆಪಿಯ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದೆ. ಗೋ ಹತ್ಯೆ ನಿಷೇಧ ಕಾನೂನುನನ್ನು ಮತ್ತೆ ತರಬೇಕೆಂಬ ಕೂಗು ಜೋರಾಗಿದೆ. ಕಠಿಣ ಕಾನೂನು ತರುವ ಚಿಂತನೆ ಇದೆ. ನಾನು ಪಶು ಸಂಗೋಪನಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಎರಡು ಕಾಯ್ದೆಗಳನ್ನ ತರಬೇಕು ಎಂದು ಹೇಳಿದ್ದಾರೆ.
Published by: Seema R
First published: November 20, 2020, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories