Rajasthan: ಅತ್ಯಾಚಾರಿಗಳಿಗೆ ಗಲ್ಲು ವಿಧಿಸುವುದರಿಂದ ರೇಪ್​ ಬಳಿಕದ ಕೊಲೆ ಪ್ರಕರಣ ಹೆಚ್ಚಳ: ಸಿಎಂ ಗೆಹ್ಲೋಟ್​!

ನಿರ್ಭಯಾ ಪ್ರಕರಣದ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಬಂದಿದ್ದು, ಹೀಗಾಗೇ ಅತ್ಯಾಚಾರದ ನಂತರ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಆತಂಕಕಾರಿ ವಿಷಯ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಟಾರ್ಗೆಟ್ ಮಾಡಿದ್ದಾರೆ. ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆಯೂ ಬಿಜೆಪಿ ಆರೋಪಿಸಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

  • Share this:
ಜೈಪುರ(ಆ.07): ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan CM Ashok Gehlot) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ನಿರ್ಭಯಾ ಪ್ರಕರಣದ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ (Law Of hanging) ವಿಧಿಸುವ ಕಾನೂನು ಬಂದಿದ್ದು, ಅತ್ಯಾಚಾರದ ನಂತರ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಗೆಹ್ಲೋಟ್ ಹೇಳಿದ್ದಾರೆ. ದೇಶದಲ್ಲಿ ಕಂಡುಬರುತ್ತಿರುವ ಈ ಅಪಾಯಕಾರಿ ಪ್ರವೃತ್ತಿ ಆತಂಕಕಾರಿಯಾಗಿದೆ ಎಂದರು.

ಸಿಎಂ ಗೆಹ್ಲೋಟ್ ಹೇಳಿಕೆ ಬಳಿಕ ಬಿಜೆಪಿ ನಾಯಕರು ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಜೈಹಿಂದ್ ಅವರು ಗೆಹ್ಲೋಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರನ್ನು ಗುರಿಯಾಗಿಸಿದ್ದಾರೆ. ಶಹಜಾದ್ ಈ ಬಗ್ಗೆ ಮಾತನಾಡುತ್ತಾ, 'ಗೆಹ್ಲೋಟ್ ಅತ್ಯಾಚಾರಿಗಳನ್ನು ದೂಷಿಸಿಲ್ಲ, ಬದಲಾಗಿ ಜಾರಿಯಾದ ಕಟ್ಟುನಿಟ್ಟಾದ ಅತ್ಯಾಚಾರ ಕಾನೂನುಳನ್ನು ವಿರೋಧಿಸಿದ್ದಾರೆ. ನಿರ್ಭಯಾ ಪ್ರಕರಣದ ಬಳಿಕ, ಕಾನೂನು ಬಿಗಿಯಾದ ಕಾರಣ, ಅತ್ಯಾಚಾರಕ್ಕೆ ಸಂಬಂಧಿಸಿದ ಕೊಲೆಗಳು ಹೆಚ್ಚಾದವು ಎಂಬಂತಹ ಹೇಳಿಕೆ ಇದೇ ಮೊದಲಲ್ಲ! ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಕಲಿ ಎಂಬ ಹೇಳಿಕೆಯನ್ನೂ ನಿಡಿದ್ದಾರೆ. ಅವರ ಮಂತ್ರಿಯೊಬ್ಬರು ಇದು ಸತ್ತವರ ನಾಡು, ಹೀಗಾಗೇ ಅತ್ಯಾಚಾರಗಳು ನಡೆಯುತ್ತವೆ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಪ್ರಿಯಾಂಕಾಜಿ ಮಾತ್ರ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Bikini Ghoonghat Or Hijab It is Womans Right says Priyanka Gandhi Vadra about Hijab Controversy

ಇದನ್ನೂ ಓದಿ: 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು

ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದ್ದರೂ ಪ್ರಿಯಾಂಕಾ ವಾದ್ರಾ ಮೌನವಾಗಿದ್ದಾರೆ ಎಂದು ಶಹಜಾದ್ ಹೇಳಿದ್ದಾರೆ. ಅನೇಕ ನಾಯಕರು ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರವೂ ಅವರು ಮೌನವಾಗಿದ್ದಾರೆ, ಏಕೆಂದರೆ ಗಲಭೆಗಳಿಂದ ಅತ್ಯಾಚಾರದವರೆಗೆ ಎಲ್ಲಾ ವಿಚಾರದಲ್ಲೂ ರಾಜಸ್ಥಾನದ ಕಾನೂನು ಮತ್ತು ಸುವ್ಯವಸ್ಥೆ ಕೈ ಕೊಟ್ಟದೆ ಎಂದು ಕಿಡಿ ಕಾರಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನಕ್ಕೆ ಅಗ್ರಸ್ಥಾನ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, 2020 ರಲ್ಲಿ ರಾಜಸ್ಥಾನದಲ್ಲಿ 5,310 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದಷ್ಟೇ ಅಲ್ಲ, ಎನ್‌ಸಿಆರ್‌ಬಿ ಪ್ರಕಾರ, ಇದಕ್ಕೂ ಮೊದಲು (2019) 5,997 ಅತ್ಯಾಚಾರ ಪ್ರಕರಣಗಳು ಇಲ್ಲಿ ವರದಿಯಾಗಿದ್ದವು. ಎರಡೂ ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ದೇಶದಲ್ಲೇ ಮೊದಲ ಸ್ಥಾನದಲ್ಲಿತ್ತು.

ಇದನ್ನೂ ಓದಿ:  ನಿರ್ಭಯಾ ತಾಯಿ ಪಾತ್ರವನ್ನು ನನಗೆ ಕೊಡಿ ಎಂದ ಸ್ಯಾಂಡಲ್​ವುಡ್​ ನಟಿ!

ಭಾರತದ ಯಾವ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳಿವೆ?

ಎನ್‌ಸಿಆರ್‌ಬಿ ಪ್ರಕಾರ, 2020 ರಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ 5,310 ಪ್ರಕರಣಗಳೊಂದಿಗೆ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. 16 ಮಾರ್ಚ್ 2022 ರಂದು ಗೃಹ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಈ ಪ್ರಕರಣಗಳಲ್ಲಿ 45.4 ಪ್ರತಿಶತದಷ್ಟು ಅಪರಾಧಿಗಳಿಗೆ ಶಿಕ್ಷೆಯಾಗಿದೆ. 2,769 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ, 70.9 ಪ್ರತಿಶತ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಮಧ್ಯಪ್ರದೇಶವು 2,339 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಅಲ್ಲಿ 33.8 ಪ್ರತಿಶತ ಪ್ರಕರಣಗಳಲ್ಲಿ ಶಿಕ್ಷೆಯನ್ನು ನೀಡಲಾಗಿದೆ.
Published by:Precilla Olivia Dias
First published: