• Home
  • »
  • News
  • »
  • national-international
  • »
  • Shraddha Murder Case: ಶ್ರದ್ಧಾ ಕೊಲೆ ಕೇಸ್ ಏನೂ ಹೊಸದಲ್ಲ! ರಾಜಸ್ಥಾನ ಸಿಎಂ ಬೇಜವಾಬ್ದಾರಿ ಹೇಳಿಕೆ

Shraddha Murder Case: ಶ್ರದ್ಧಾ ಕೊಲೆ ಕೇಸ್ ಏನೂ ಹೊಸದಲ್ಲ! ರಾಜಸ್ಥಾನ ಸಿಎಂ ಬೇಜವಾಬ್ದಾರಿ ಹೇಳಿಕೆ

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಶ್ರದ್ಧಾಳನ್ನು ಕತ್ತರಿಸಿ, ಬರ್ಬರವಾಗಿ ಕೊಂದಿರುವ ಆಫ್ತಾಬ್‌ ಪೂನಾವಾಲಾಗೆ (Aftab Poonawala) ಉಗ್ರ ಶಿಕ್ಷೆ ಆಗಬೇಕು ಅಂತ ಇಡೀ ದೇಶದ ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಆದರೆ ರಾಜಸ್ಥಾನ ಸಿಎಂ (Rajasthan CM) ಮಾತ್ರ ಇದೊಂದು ಸಹಜ ಘಟನೆ ಎಂದಿದ್ದಾರೆ!

  • News18 Kannada
  • Last Updated :
  • Rajasthan, India
  • Share this:

ರಾಜಸ್ಥಾನ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ ಬರ್ಬರ ಹತ್ಯೆ ಕೇಸ್‌ನ (Shraddha Walker murder case) ತನಿಖೆ ಚುರುಕುಗೊಂಡಿದೆ. ಶ್ರದ್ಧಾಳನ್ನು ಕತ್ತರಿಸಿ, ಬರ್ಬರವಾಗಿ ಕೊಂದಿರುವ ಆಫ್ತಾಬ್‌ ಪೂನಾವಾಲಾಗೆ (Aftab Poonawala) ಉಗ್ರ ಶಿಕ್ಷೆ ಆಗಬೇಕು ಅಂತ ಇಡೀ ದೇಶದ ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಆದರೆ ರಾಜಸ್ಥಾನ ಸಿಎಂ (Rajasthan CM) ಮಾತ್ರ ಇದೊಂದು ಸಹಜ ಘಟನೆ ಎಂದಿದ್ದಾರೆ. ಹೌದು, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಶ್ರದ್ಧಾ ಬರ್ಬರ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಹಾಗೂ ಸಾಮಾನ್ಯವಾದ ಘಟನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಅಂತರ್ಜಾತಿಯಲ್ಲಿ ನಡೆಯುವ ವಿವಾಹ, ರಿಲೇಶನ್‌ಶಿಪ್ ಕುರಿತು ಸಮರ್ಥಿಸಿಕೊಳ್ಳಲು ಹೋಗುವ ಭರದಲ್ಲಿ, ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಅವರ ಈ ಬೇಜವಾಬ್ದಾರಿ ಹೇಳಿಕೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಶ್ರದ್ಧಾ ಹತ್ಯೆ ಕೇಸ್‌ಗೆ ರಾಜಕೀಯ ತಿರುವು!


ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವು ಇಡೀ ದೇಶವನ್ನು ಅದರ ಭೀಕರ ಮತ್ತು ಭಯಾನಕ ವಿವರಗಳೊಂದಿಗೆ ಬೆಚ್ಚಿಬೀಳಿಸಿದೆ. ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾ ದೆಹಲಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ . ಈ ಹೊತ್ತಲ್ಲಿ ಈ ಭೀಕರ ಹತ್ಯೆ ಭಾರತದಾದ್ಯಂತ ರಾಜಕೀಯ ತಿರುವು ಪಡೆದುಕೊಂಡಿದೆ.


ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್


ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಿಎಂ


ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹತ್ಯೆಯನ್ನು "ಅಪಘಾತ" ಎಂದು ಕರೆದಿರುವ ಅವರು, "ಇದು ಹೊಸ ವಿಷಯವಲ್ಲ, ಸಾಮಾನ್ಯವಾಗಿ ನಡೆಯುವಂತದ್ದು" ಎಂದು ಹೇಳಿ್ದ್ದಾರೆ.


ಕೊಲೆಯಾದ ಶ್ರದ್ಧಾ


ಇದನ್ನೂ ಓದಿ: Shraddha Murder Case: ಶ್ರದ್ಧಾ ದೇಹ ಕಟ್ ಮಾಡಲು 10 ಗಂಟೆ ಬೇಕಾಯ್ತಂತೆ! ಪಾಪಿ ಅಫ್ತಾಬ್ ಜೊತೆ ಇನ್ನಿಬ್ಬರು ಇದ್ರಾ? 


ಅಶೋಕ್ ಗೆಹ್ಲೋಟ್ ಹೇಳಿದ್ದೇನು?


ಶತ ಶತಮಾನಗಳಿಂದ ಭಾರತದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿದೆ. ಇದು ಹೊಸ ವಿಚಾರವಲ್ಲ. ಆದರೆ ಬಿಜೆಪಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ. ಬಿಜೆಪಿಗೆ ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾತ್ರ ಗೊತ್ತಿದೆ. ಅಂರ್ಜಾತಿ ವಿವಾಹ, ಅಂತರ್ಜಾತಿ ರಿಲೇಶನ್‌ಶಿಪ್‌ನ್ನು ಬಿಜೆಪಿ ಸಹಿಸಿಕೊಳ್ಳಲ್ಲ. ಹೀಗಾಗಿ ಬಿಜೆಪಿ ಒಂದು ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಅಂತರ್ಜಾತಿ ವಿವಾಹ ಹಾಗೂ ಬಿಜಪಿ ಧರ್ಮ ಹಾಗೂ ಜಾತಿ ಒಡೆಯುವ ಆರೋಪವನ್ನು ಸಮರ್ಥಿಸಿಕೊಳ್ಳಲು ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಘಟನೆ, ಇದರಲ್ಲೇನು ಹೊಸದಿಲ್ಲ. ಈ ರೀತಿಯ ಹತ್ಯೆಗಳು ಸಾಮಾನ್ಯ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.


ಶ್ರದ್ಧಾ-ಅಫ್ತಾಬ್ ಹಳೆ ಚಿತ್ರ


ಬೆಂಕಿ ಹಚ್ಚುವುದು ಸುಲಭ, ಆರಿಸುವುದು ಕಷ್ಟ!




ಇನ್ನು ಜನರನ್ನು ಒಟ್ಟುಗೂಡಿಸುವುದು ಮತ್ತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಗುಂಪುಗಳನ್ನು ಸೃಷ್ಟಿಸುವುದು ತುಂಬಾ ಸುಲಭ. ಬೆಂಕಿ ಹಚ್ಚುವುದು ಸುಲಭ, ಆದರೆ ಬೆಂಕಿಯನ್ನು ನಂದಿಸುವುದು ತುಂಬಾ ಕಷ್ಟ. ಕಟ್ಟಡ ನಿರ್ಮಿಸಲು ಸಮಯ ಹಿಡಿಯುತ್ತದೆ, ಆದರೆ ಅದನ್ನು ಕೆಡವಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ ಅಂತ ಗೆಹ್ಲೋಟ್ ಹೇಳಿದ್ದಾರೆ.


ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ


ಇದನ್ನೂ ಓದಿ: Explained: ಶ್ರದ್ಧಾ ವಾಕರ್ ಹತ್ಯೆ ಬೆನ್ನಲ್ಲೇ ಲಿವ್‌-ಇನ್​ನಲ್ಲಿರೋ ಜೋಡಿಗಳಿಗೆ ಹೊಸ ಸಂಕಷ್ಟ: ಕೊನೆಯಾಗುತ್ತಾ ಈ ಸಂಸ್ಕೃತಿ?


ಗೆಹ್ಲೋಟ್ ಮಾತಿಗೆ ಬಿಜೆಪಿ ವಿರೋಧ


ಇದೀಗ ಗೆಹ್ಲೋಟ್ ಮಾತಿಗೆ ಬಿಜಿಪೆ ತಿರುಗೇಟು ನೀಡಿದೆ. ಬಿಜೆಪಿಯನ್ನು ವಿರೋಧಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಬಿಜೆಪಿಯನ್ನು ವಿರೋಧಿಸಲು ಉದ್ದೇಶಪೂರ್ವಕವಾಗಿ, ಸಂಚು ನಡೆಸಿ ಮಾಡಿರುವ ಭೀಕರ ಹತ್ಯೆಯನ್ನು ಆಕಸ್ಮಿಕವಾಗಿ ನಡೆದ ಕೊಲೆ ಎಂದು ಬಿಂಬಿಸುವುದು ತಪ್ಪು ಎಂದಿದೆ.  ಗೆಹ್ಲೋಟ್‌ಗೆ ಹತ್ಯೆಯ ಗಂಭೀರತೆ ಅರಿವಾಗಿಲ್ಲ. ಗೆಹ್ಲೋಟ್‌ಗೆ ಕೇವಲ ಆರೋಪಿಯ ಧರ್ಮ ಮಾತ್ರ ಕಾಣುತ್ತಿದೆ ಎಂದಿದೆ. ಈ ಭೀಕರ ಹತ್ಯೆಯನ್ನು ಸಾಮಾನ್ಯ ಹೇಳುವ ಗೆಹ್ಲೋಟ್ ಹಾಗೂ ಕಾಂಗ್ರೆಸ್ ಮನಸ್ಥಿತಿ ಹೇಗಿದೆ ಅನ್ನೋದು ಬಹಿರಂಗವಾಗಿದೆ  ಎಂದು ವ್ಯಂಗ್ಯವಾಡಿದೆ.

Published by:Annappa Achari
First published: