ಜೈಪುರ: ರಾಜಸ್ಥಾನ ಮುಖ್ಯಮಂತ್ರಿ (Rajasthan CM ) ಅಶೋಕ್ ಗೆಹ್ಲೋಟ್ (Ashok Gehlot ) ಬಜೆಟ್ (Budget) ಮಂಡನೆ ವೇಳೆ ಕಳೆದ ವರ್ಷದ ಬಜೆಟ್ ಓದುವ ಮೂಲಕ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಸಿಎಂ ಬಜೆಟ್ನ ಮೊದಲ ಎರಡು ಘೋಷಣೆಗಳನ್ನು ಮಾಡುತ್ತಿದ್ದಂತೆ ಸದನಸಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸಚಿವರೊಬ್ಬರು ಸಿಎಂ ಬಳಿ ಬಂದು ಹಳೆ ಬಜೆಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವೇಳೆ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿ ಸದನ ಬಾವಿಗೆ ನುಗ್ಗಿದ್ದಾರೆ. ಸ್ವೀಕರ್ ಸಿಪಿ ಜೋಶಿ (CP Joshi) ಸಮಾಧಾನದಿಂದ ಇರುವಂತೆ ಹೇಳಿದರೂ ಸಹಾ ವಿಪಕ್ಷಗಳು ತಮ್ಮ ಗದ್ದಲವನ್ನು ಮುಂದುವರಿಸಿದ ಪರಿಣಾಮ ಸದನವನ್ನು 30 ನಿಮಿಷಗಳ ಕಾಲ ಮುಂದೂಡಲಾಗಿತ್ತು.
ಗೆಹ್ಲೋಟ್ ಹಳೆಯ ಬಜೆಟ್ ಅನ್ನೇ ಸುಮಾರು 7ರಿಂದ 8 ನಿಮಿಷಗಳ ಕಾಲ ಓದಿದ್ದರು. ಹಳೆ ಬಜೆಟ್ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಅವರಿಂದ ಕುಳಿತಿದ್ದ ಸಚಿವರು ಇದರ ಬಗ್ಗೆ ಗೆಹ್ಲೋಟ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಬಜೆಟ್ ದಿನಾಂಕ ನೋಡಿದ ಗೆಹ್ಲೋಟ್ ನಗಲು ಶುರುಮಾಡಿದ್ದಾರೆ. ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡಲು ಶುರುಮಾಡಿದ ಕಾರಣ ಕಲಾಪವನ್ನು ಅರ್ಧಗಂಟೆ ಮುಂದೂಡಲಾಯಿತು.
ಮಾಜಿ ಸಿಎಂ ವಸುಂಧರಾ ರಾಜೆ ಕಿಡಿ
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್ ಪ್ರತಿಯನ್ನು ಎರಡರಿಂದ ಮೂರು ಬಾರಿ ಪರಿಶೀಲನೆ ಮಾಡುತ್ತಿದ್ದೆ. ಮೊದಲೇ ಓದಿಕೊಂಡು ಬರುತ್ತಿದ್ದೆ. ಆದರೆ ಮುಖ್ಯಮಂತ್ರಿಗಳು 8 ನಿಮಿಷಗಳ ಕಾಲ ಹಳೆಯ ಬಜೆಟ್ ಓದಿದ್ದಾರೆ. ಮಹತ್ವದ ದಾಖಲೆಗಳನ್ನು ಸಿಎಂ ನಿರ್ಲಕ್ಷ್ಯದಿಂದ ಓದಿದ್ದಾರೆ. ಇಂತಹವರ ಕೈಯಲ್ಲಿ ರಾಜಸ್ಥಾನ ಎಷ್ಟು ಸುರಕ್ಷಿತವಾಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ ಎಂದು ಮಾಜಿ ಸಿಎಮ ವಸುಂಧರಾ ರಾಜೆ ಕಿಡಿಕಾರಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಪ್ರಸಾರ
ರಾಜಸ್ಥಾನ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಮಂಡನೆಯನ್ನು ನೇರಪ್ರಸಾರ ಮಾಡುತ್ತಿದೆ. ಆದರೆ ಗೆಹ್ಲೋಟ್ ಮಾಡಿಕೊಂಡು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಘಟನೆಯ ಕುರಿತು ಗೆಹ್ಲೋಟ್, ನನ್ನ ಕೈಯಲ್ಲಿರುವ ಬಜೆಟ್‌ನಲ್ಲಿ ಬರೆದಿರುವುದಕ್ಕೆ ಮತ್ತು ಸದನದ ಸದಸ್ಯರಿಗೆ ನೀಡಿದ ಪ್ರತಿಗಳ ನಡುವೆ ವ್ಯತ್ಯಾಸವಿದ್ದರೆ ಮಾತ್ರ ನೀವು ಸೂಚಿಸಿ ಎಂದರು. ಬಜೆಟ್ ಪ್ರತಿಯಲ್ಲಿ ಹೆಚ್ಚುವರಿ nಪುಟ ಸೇರಿಕೊಂಡಿದೆ ಎಂದು ಹಳೆ ಬಜೆಟ್ ಓದಿದ ಬಗ್ಗೆ ಸ್ಪಷ್ಟನೆ ನೀಡಿದರು. ಇದೇ ಸಂದರ್ಭದಲ್ಲಿ ಬಜೆಟ್ ಸೋರಿಕೆಯಾಗಿದೆ ಎಂಬ ಬಿಜೆಪಿ ಆರೋಪವನ್ನು ಅಲ್ಲಗಳೆದರು.
ವಿಷಾದ ವ್ಯಕ್ತಪಡಿಸಿದ ಸ್ಪೀಕರ್
ಸದನದಲ್ಲಿ ತಪ್ಪು ಬಜೆಟ್ ಓದಿರುವು ತಪ್ಪು ಇತಿಹಾಸಕ್ಕೆ ಕಾರಣವಾಗಿದೆ, ಇಂತಹ ಘಟನೆ ಹಿಂದೆಂದೂ ಸಂಭವಿಸಿಲ್ಲ ಎಂದು ಹೇಳಿದರು. ಗದ್ದಲದ ನಡುವೆಯೂ ಸ್ಪೀಕರ್ ಸಿಪಿ ಜೋಶಿ 2023–24ರ ಬಜೆಟ್ ಅನ್ನು ಎರಡನೇ ಬಾರಿಗೆ ಮಂಡಿಸಲು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಅನುಮತಿ ನೀಡಿದರು.
ಮತ್ತೊಮ್ಮೆ ಯಾರಿಗೂ ಹೀಗಾಗಾದಿರಲಿ
ಅಶೋಕ್ ಗೆಹ್ಲೋಟ್ ತಪ್ಪಾದ ಬಜೆಟ್ ಮಂಡನೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು " ರಾಜ್ಯ ವಿಧಾನಸಭೆಯಲ್ಲಿ ರಾಜ್ಯದ ಬಜೆಟ್ ಮಂಡಿಸುವಾಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ತರಾಟೆಗೆ ತೆಗೆದುಕೊಂಡರು, ಭವಿಷ್ಯದಲ್ಲಿ ಯಾರೂ ಇಂತಹ ಪರಿಸ್ಥಿತಿಯನ್ನು ಎದುರಿಸಬಾರದು" ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ,
ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧದ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್, "ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ. ನೀವು (ಕಾಂಗ್ರೆಸ್) ಡೆಟಾಲ್‌ನಿಂದ ಬಾಯಿ ಸ್ವಚ್ಛಗೊಳಿಸಿದರೂ ಅದು ಸ್ವಚ್ಛವಾಗುವುದಿಲ್ಲ. ರಾಜಸ್ಥಾನದಲ್ಲಿ ಇಂದು ದೊಡ್ಡ ಅವ್ಯವಸ್ಥೆಯೊಂದು ನಡೆದಿದೆ. ಕಳೆದ ವರ್ಷದ ಬಜೆಟ್ ಓದಲಾಗಿದೆ.ತಪ್ಪುಗಳು ಯಾರಿಗಾದರೂ ಆಗಬಹುದು, ಆದರೆ ಅಂತಹ ಪರಿಸ್ಥಿತಿ ಯಾರಿಗೂ ಮುಂದೆ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ