PUBG: ಪಬ್ ಜೀ ಹುಚ್ಚಿನಿಂದಾಗಿ 3 ಲಕ್ಷ ಹಣ ಕಳೆದುಕೊಂಡ ಬಾಲಕ

Rajasthan Child: ಬಾಲಕನ ಮನೆಯ ಪಕ್ಕದಲ್ಲಿ ಇದ್ದ ಇಂಟರ್ನೆಟ್ ಕೆಫೆಯವರು ತನ್ನ ಮಗ ಅಪ್ರಾಪ್ತ ಬಾಲಕ ಎಂದು ಗೊತ್ತಿದ್ದರೂ, ಅವನನ್ನ ಪಬ್ ಜೀ ಗೇಮ್ ಆಡಲು ಬಿಟ್ಟಿದ್ದಾರೆ.. ಅವರೇ ನನ್ನ ಮಗನಿಗೆ ಪುಸಲಾಯಿಸಿ ಮೂರು ಲಕ್ಷ ಹಣ ಕದಿಯುವಂತೆ ಮಾಡಿದ್ದಾರೆ ಎಂದು ಬಾಲಕನ ಪೋಷಕರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಶ್ವದಾದ್ಯಂತ(World) ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಗಳಲ್ಲಿ(Mobile Game) ಪಬ್ ಜಿ(PUB G) ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಯುವಜನಾಂಗವನ್ನುಇದು ಆಕರ್ಷಿಸುತ್ತಿದೆ. ಇದರ ವ್ಯಸನಕ್ಕೆ ಸಿಲುಕಿದವರು ಅದೆಷ್ಟೋ ಮಂದಿ. ಈ ಹಿಂದೆ ಬ್ಲೂ ವೇಲ್(Blue Whale) ಗೇಮ್ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿ ಅನೇಕರನ್ನು ಬಲಿ ಪಡೆದಿತ್ತು. ಪಬ್ ಜಿ ಚಟಕ್ಕೆ ಬಿದ್ದಿದ್ದ ಬಾಲಕನೋರ್ವ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್(Smartphone) ಕೊಡಿಸಬೇಕೆಂದು ಪೋಷಕರಲ್ಲಿ ಪ್ರತಿನಿತ್ಯ ಬೇಡಿಕೆ ಇಡುತ್ತಿದ್ದ. ಆದರೇ ಪಾಲಕರು ನಯವಾಗಿ ತಿರಸ್ಕರಿಸಿದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾದ.ಬಾಲಕನೊಬ್ಬ ಪಬ್ ಜಿ ಚಟದಿಂದ 16 ಲಕ್ಷ ಹಣ ಕಳೆದು ಮನೆಯವರನ್ನ ಬೀದಿಗೆ ತಂದು ನಿಲ್ಲಿಸಿದ್ದ.. ಅದೇ ರೀತಿ ಈಗ ಪಬ್ ಜಿಯಿಂದಾಗಿ ಬಾಲಕ 3 ಲಕ್ಷ ಹಣ ಕಳೆದುಕೊಂಡಿದ್ದಾನೆ.

    ಪಬ್ ಜೀ ಚಟಕ್ಕೆ 3 ಲಕ್ಷ ಕಳೆದುಕೊಂಡ ಬಾಲಕ..

    ರಾಜಸ್ಥಾನದ ಝಲಾವರ್ ನಗರದ 13 ವರ್ಷದ ಬಾಲಕ ಪ್ರತಿನಿತ್ಯ ಪಬ್ ಆಡುವ ಚಟದಿಂದಾಗಿ ತನ್ನ ಮನೆಯಿಂದಲೇ ಮೂರು ಲಕ್ಷ ರೂಪಾಯಿಗಳಷ್ಟು ಕಳ್ಳತನ ಮಾಡಿದ್ದಾನೆ.. ಪ್ರತಿನಿತ್ಯ ತನ್ನ ಮನೆಯ ಪಕ್ಕದಲ್ಲೇ ಇದ್ದ ಇಂಟರ್ನೆಟ್ ಕೆಫೆಯಲ್ಲಿ ಪಬ್ ಜೀ ಆಡುತ್ತಿದ್ದ ಬಾಲಕ, ಮನೆಯವರಿಗೆ ಗೊತ್ತಿಲ್ಲದಂತೆ 3 ಲಕ್ಷ ರೂಪಾಯಿಗಳನ್ನ ಕದ್ದು ಆಟ ಆಡಿದ್ದೇನೆ..

    ಬಾಲಕನ ಪೋಷಕರಿಂದ ನೆರೆಹೊರೆಯವರ ಮೇಲೆ ದೂರು

    ಪಬ್ ಜೇ ಚಟಕ್ಕೆ ಬಿದ್ದು ಮೂರು ಲಕ್ಷ ರೂಪಾಯಿ ಕಳೆದುಕೊಂಡ ಬಾಲಕನ ಮನೆಯ ಪಕ್ಕದಲ್ಲಿ ಇದ್ದ ಇಂಟರ್ನೆಟ್ ಕೆಫೆಯವರು ತನ್ನ ಮಗ ಅಪ್ರಾಪ್ತ ಬಾಲಕ ಎಂದು ಗೊತ್ತಿದ್ದರೂ, ಅವನನ್ನ ಪಬ್ ಜೀ ಗೇಮ್ ಆಡಲು ಬಿಟ್ಟಿದ್ದಾರೆ.. ಅವರೇ ನನ್ನ ಮಗನಿಗೆ ಪುಸಲಾಯಿಸಿ ಮೂರು ಲಕ್ಷ ಹಣ ಕದಿಯುವಂತೆ ಮಾಡಿದ್ದಾರೆ ಎಂದು ಬಾಲಕನ ಪೋಷಕರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..

    ಇದನ್ನೂ ಓದಿ: Android ಹಾಗೂ ಐಫೋನ್‌ಗಳಲ್ಲಿ PUBG ನ್ಯೂ ಸ್ಟೇಟ್ ಗೇಮ್‌ನ ಸಿಸ್ಟಮ್ ಅವಶ್ಯಕತೆಗಳೇನು?

    ಉಪಕರಣ ಖರೀದಿ ಹೆಸರಿನಲ್ಲಿ ಹಣ ಸುಲಿಗೆ

    ಪಬ್ ಜೀ ಉಪಕರಣಗಳ ಖರೀದಿ ಹೆಸರಿನಲ್ಲಿ ಇಂಟರ್ನೆಟ್ ಕೆಫೆ ನಡೆಸುತ್ತಿರುವ ಶಹಬಾಜ್ ಖಾನ್ PUBG ಉಪಕರಣಗಳನ್ನು ಖರೀದಿಸಲು ಹಣ ಬೇಕು ಎಂದು ಬೇಡಿಕೆಯಿಟ್ಟಿದ್ದಾನೆ. ಒಂದು ವೇಳೆ ಬಾಲಕ ಅಂದು ಹಣ ತಂದು ಕೊಡದಿದ್ದರೆ ಮರುದಿನ ಹೆಚ್ಚಿನ ಹಣ ತರುವಂತೆ ಬಾಲಕನಿಗೆ ಶಹಬಾಜ್ ಖಾನ್ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.. ಹೀಗಾಗಿ ಬಾಲಕ ತನ್ನ ತಂದೆಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು .ಶಹಬಾಜ್ ಖಾನ್ ಗೆ ನೀಡಿದ್ದಾನೆ.. ಇದನ್ನ ಬಳಸಿಕೊಂಡ ಶಹಬಾಜ್ ಖಾನ್ ಬಾಲಕನ ಜೊತೆ ಸೇರಿ ಮೂರು ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ.. ಇನ್ನು 13 ವರ್ಷದ ಬಾಲಕ ಮಾತ್ರವಲ್ಲದೇ ಹಲವು ಅಮಾಯಕ ಬಾಲಕರಿಂದ ಶಹಬಾಜ್ ಖಾನ್ ಯಾಮಾರಿಸಿ ಬೆದರಿಕೆ ಹಾಕಿ ಹಣ ಸುಲಿಗೆ ಆರೋಪ ಇದ್ದು, ಆತನನ್ನ ಸೂಕ್ತ ವಿಚಾರಣೆಗೆ ಒಳಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ..

    ಇದನ್ನೂ ಓದಿ: ಪಬ್​ಜಿ ಗೇಮ್​ ಆಡುತ್ತಾ ಮೈಮರೆತ ವಿದ್ಯಾರ್ಥಿಗಳು, ರೈಲು ಹರಿದು ಇಬ್ಬರ ದಾರುಣ ಸಾವು!

    ಪಬ್ ಜೀಯಿಂದ ಪ್ರಾಣ ಕಳೆದುಕೊಂಡಿದ್ದ ಬಾಲಕರು

    ಕಳೆದ ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಮಥುರಾದಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿನ ಲಕ್ಷಿನಗರ ನಿವಾಸಿಗಳಾಗಿರುವ ಇಬ್ಬರು ವಿದ್ಯಾರ್ಥಿಗಳು, ಕಿವಿಗೆ ಹೆಡ್‌ಫೋನ್ ಹಾಕಿ ಪಬ್‌ಜಿ ಆಡುತ್ತಿದ್ದರು. ಇಬ್ಬರು ವಿದ್ಯಾರ್ಥಿಗಳು ರೈಲು ಹಳಿ ಬಳಿ ಹೋಗಿದ್ದು ಗೊತ್ತೆ ಆಗಿಲ್ಲ. ಅತ್ತ ರೈಲಿನ ಶಬ್ದ ಕೂಡ ಕೇಳಿಸಿಲ್ಲ. ಹೆಡ್‌ಫೋನ್ ಹಾಕಿದ್ದ ಕಾರಣ ಅವರಿಗೆ ಕೇಳಿಸಿ.ಅತ್ತ ವೇಗವಾಗಿ ಬಂದ ರೈಲು ಕ್ಷಣಾರ್ಧದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳ
    Published by:ranjumbkgowda1 ranjumbkgowda1
    First published: