50 ಪೈಸೆ ಸಾಲಕ್ಕೆ ನೋಟಿಸ್​ ಕಳುಹಿಸಿದ ಎಸ್​ಬಿಐ ಬ್ಯಾಂಕ್​!

ನೋಟಿಸ್​​ ಗಮನಿಸಿ ಸಾಲವನ್ನು ಮರು ಪಾವತಿಸಲು ಎಸ್​ಬಿಐ ಬ್ಯಾಂಕ್​ ಹೋದರೆ ಅದನ್ನು ಸ್ವೀಕರಿಸಲು ಬ್ಯಾಂಕ್​​ ಹಿಂದೇಟು ಹಾಕಿದೆ ಎಂದು ಗ್ರಾಹಕ ಜಿತೇಂದ್ರ ಸಿಂಗ್​ ಆರೋಪಿಸಿದ್ದಾನೆ.

news18-kannada
Updated:December 15, 2019, 8:43 PM IST
50 ಪೈಸೆ ಸಾಲಕ್ಕೆ ನೋಟಿಸ್​ ಕಳುಹಿಸಿದ ಎಸ್​ಬಿಐ ಬ್ಯಾಂಕ್​!
50 ಪೈಸೆ
  • Share this:
50 ಪೈಸೆ ಬಾಕಿ ಉಳಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಗ್ರಾಹಕನೊಬ್ಬನಿಗೆ ಎಸ್​ಬಿಐ ಬ್ಯಾಂಕ್​ ನೋಟಿಸ್​ ಜಾರಿ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಎಸ್​ಬಿಐ ಬ್ಯಾಂಕ್​​ ವೊಂದು ‘50 ಪೈಸೆ ಸಾಲ ಪಾವತಿಸಲು ಬಾಕಿ ಇದ್ದು, ಕೂಡಲೇ ಅದನ್ನು ಪಾವತಿಸಿ. ಇಲ್ಲದಿದ್ದರೆ ಕಾನೂನಾತ್ಮಕ ಕ್ರಮ ಕೈಗಗೊಳ್ಳಬೇಕಾಗುತ್ತದೆ ಎಂದು ಬ್ಯಾಂಕ್​​ ಅಧಿಕಾರಿಗಳು ಗ್ರಾಹಕನ ಮನೆಯ ಬಾಗಿಲಿಗೆ ನೋಟಿಸ್​ ಅಂಟಿಸಿದ್ದಾರೆ.

ನೋಟಿಸ್​​ ಗಮನಿಸಿ ಸಾಲವನ್ನು ಮರು ಪಾವತಿಸಲು ಎಸ್​ಬಿಐ ಬ್ಯಾಂಕ್​ ಹೋದರೆ ಅದನ್ನು ಸ್ವೀಕರಿಸಲು ಬ್ಯಾಂಕ್​​ ಹಿಂದೇಟು ಹಾಕಿದೆ ಎಂದು ಗ್ರಾಹಕ ಜಿತೇಂದ್ರ ಸಿಂಗ್​ ಆರೋಪಿಸಿದ್ದಾನೆ. ನನ್ನ ಬೆನ್ನು ಮೂಳೆಗೆ ಗಾಯವಾಗಿರುವ ಕಾರಣ, ನನ್ನ ಅಪ್ಪ ಬ್ಯಾಂಕ್​ಗೆ ಹೋಗಿ ಮೊತ್ತ ಪಾವಸಿ, ಎನ್​ಒಸಿ ಪಡೆಯಲು ಮುಂದಾಗಿದ್ದರು.ಆದರೆ, ಬ್ಯಾಂಕ್​ನವರು ಮಾತ್ರ ಬಾಕಿ ಉಳಿದಿರುವ 50 ಪೈಸೆಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಹಾಗಾಗಿ ನೋಟಿಸ್​ ನೀಡಿರುವ ಬ್ಯಾಂಕ್​ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ ಜಿತೇಂದ್ರ ಸಿಂಗ್​.
Published by: Harshith AS
First published: December 15, 2019, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading