ಠಾಕ್ರೆ ಮಗನ ಮದುವೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ; ಏನಿದರ ಹಿಂದಿನ ರಾಜಕೀಯ ಲೆಕ್ಕಾಚಾರ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್​ಸಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್​ ಠಾಕ್ರೆ ತಮ್ಮ ಮಗನ ಮದುವೆಗೆ ರಾಹುಲ್ ಗಾಂಧಿ, ಶರದ್​ ಪವಾರ್​, ಸುಶೀಲ್​ ಕುಮಾರ್​ ಶಿಂಧೆ ಮುಂತಾದ ನಾಯಕರಿಗೆ ಆಹ್ವಾನ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುತ್ತಿಲ್ಲ.

sushma chakre | news18
Updated:January 10, 2019, 6:28 PM IST
ಠಾಕ್ರೆ ಮಗನ ಮದುವೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ; ಏನಿದರ ಹಿಂದಿನ ರಾಜಕೀಯ ಲೆಕ್ಕಾಚಾರ?
ರಾಜ್​ ಠಾಕ್ರೆ
sushma chakre | news18
Updated: January 10, 2019, 6:28 PM IST
ಮುಂಬೈ (ಜ. 10): ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಿವಸೇನೆ ಬೆಂಬಲ ಘೋಷಿಸಿತ್ತು. ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್​ ಸಮಿತಿ (ಎನ್​ಸಿಪಿ) ಜೊತೆಗೆ ರಾಜ್​ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್​ಎಸ್​) ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.
ಈ ಅಂತೆ-ಕಂತೆಗಳ ಬೆನ್ನಲ್ಲೇ ರಾಜ್​ ಠಾಕ್ರೆ ತಮ್ಮ ಮಗನ ಮದುವೆಗೆ ಪ್ರಸ್ತುತ ಎನ್​ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿಗೆ ಆಹ್ವಾನ ನೀಡಲು ನಿರ್ಧರಿಸಿರುವುದು ಅನುಮಾನಕ್ಕೆ ಪುಷ್ಠಿ ನೀಡಿದಂತಾಗಿದೆ.

ಬಾಳಾ ಠಾಕ್ರೆ ಖುದ್ದಾಗಿ ಈ ವಾರ ದೆಹಲಿಗೆ ತೆರಳಿ ರಾಹುಲ್​ ಗಾಂಧಿ ಅವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಬೇಕಾಗಿತ್ತು. ಈ ವೇಳೆ , ರಾಹುಲ್​ ಗಾಂಧಿ ಅವರನ್ನು ಮದುವೆಗೆ ಆಹ್ವಾನಿಸಲಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅನಿವಾರ್ಯ ಕಾರಣಗಳಿಂದ ಆ ಭೇಟಿಯನ್ನು ರದ್ದುಗೊಳಿಸಿದ ಠಾಕ್ರೆ ತಮ್ಮ ಕಾರ್ಯಾಲಯದ ಇಬ್ಬರು ಪ್ರತಿನಿಧಿಗಳನ್ನು ದೆಹಲಿಗೆ ಕಳುಹಿಸಿ ಮದುವೆಯ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತೆಲಂಗಾಣ ಸಚಿವ ಸಂಪುಟ: ಜನವರಿ 18ಕ್ಕೆ ಮುಹೂರ್ತ ಫಿಕ್ಸ್​​; ಇಲ್ಲಿದೆ ನೂತನ ಮಂತ್ರಿಗಳ ಪಟ್ಟಿ!

ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮದುವೆಗೆ ಆಹ್ವಾನ ನೀಡಲು ಔಪಚಾರಿಕವಾಗಿ ಭೇಟಿ ಮಾಡಲಾಗಿದೆ ಅಷ್ಟೇ ಎಂದು ಎಂಎನ್​ಎಸ್​ ಪಕ್ಷದ ನಾಯಕರು ತಿಳಿಸಿದ್ದಾರೆ. ಜನವರಿ 27ರಂದು ಮುಂಬೈನಲ್ಲಿ ರಾಜ್​ ಠಾಕ್ರೆ ಅವರ ಮಗ ಅಮಿತ್​ ಠಾಕ್ರೆ ಮಿತಾಲಿಯೊಂದಿಗೆ ವಿವಾಹವಾಗಲಿದ್ದಾರೆ. ಯಾವುದೇ ಅದ್ದೂರಿತನವಿಲ್ಲದೆ ಸರಳವಾಗಿ ಮದುವೆ ನೆರವೇರಿಸಲಾಗುವುದು ಎಂದು ಈ ಹಿಂದೆ ರಾಜ್​ ಠಾಕ್ರೆ ಘೋಷಿಸಿದ್ದರು. ಆದರೆ, ಈ ವಿವಾಹ ಸಮಾರಂಭಕ್ಕೆ ದೇಶದ ಪ್ರಮುಖ ಉದ್ಯಮಿಗಳು, ರಾಜಕಾರಣಿಗಳು, ಪೊಲೀಸ್​ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ.

ಇದನ್ನೂ ಓದಿ: ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ

ಬಾಳಾ ಠಾಕ್ರೆ ಮಗ ಉದ್ಧವ್​ ಠಾಕ್ರೆ ಮುಖ್ಯಸ್ಥರಾಗಿರುವ ಶಿವಸೇನೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿತ್ತು. ಬಿಜೆಪಿ- ಶಿವಸೇನೆ ಮೈತ್ರಿಯಲ್ಲಿ ಇತ್ತೀಚೆಗೆ ಅಪಸ್ವರ ಏಳತೊಡಗಿದೆ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಶಿವಸೇನೆ ಇತ್ತೀಚೆಗೆ ರಾಮ ಮಂದಿರ ವಿವಾದದ ಸಂದರ್ಭದಲ್ಲಿ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾರಂಭಿಸಿತ್ತು.
Loading...

ಬಾಳಾ ಠಾಕ್ರೆ ಅವರ ಸಹೋದರನ ಮಗನಾಗಿರುವ ರಾಜ್​ ಠಾಕ್ರೆ ಹುಟ್ಟುಹಾಕಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷ ಈ ಬಾರಿ ಶರದ್​ ಪವಾರ್​ ಅವರ ಎನ್​ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಕುತೂಹಲ ಮೂಡಿಸಿದ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ; ರೈ ಬೆನ್ನಿಗೆ ಆಮ್ ಆದ್ಮಿ?

ಅಂದಹಾಗೆ ಅದಕ್ಕಿಂತ ಮುಖ್ಯವಾದ ವಿಷಯವೆಂದರೆ, ತಮ್ಮ ಮಗನ ಮದುವೆಗೆ ರಾಹುಲ್​ ಗಾಂಧಿ ಸೇರಿದಂತೆ ಸುಶೀಲ್​ ಕುಮಾರ್​ ಶಿಂಧೆ, ಪೃಥ್ವಿರಾಜ್​ ಚೌಹಾಣ್, ಮಿಲಿಂದ್​ ಡಿಯೋರ ಅವರನ್ನು ಆಹ್ವಾನಿಸಲು ಠಾಕ್ರೆ ನಿರ್ಧರಿಸಿದ್ದಾರೆ. ಜೊತೆಗೆ, ಎನ್​ಸಿಪಿ ನಾಯಕರಾದ ಶರದ್ ಪವಾರ್, ಅಜಿತ್​ ಪವಾರ್, ಸುನೀಲ್​ ತತ್ಕರೆ, ಜಯಂತ್​ ಪಾಟೀಲ್ ಮುಂತಾದ ನಾಯಕರನ್ನು ಆಹ್ವಾನಿಸಿದ್ದಾರೆ. ಆದರೆ, ಈ ವಿವಾಹದ ಆಹ್ವಾನಿತರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೇ ಇಲ್ಲ.

ಇತ್ತೀಚೆಗಷ್ಟೇ ಉದ್ಧವ್​ ಠಾಕ್ರೆ ಅವರನ್ನು ಭೇಟಿಯಾಗಿದ್ದ ರಾಜ್​ ಠಾಕ್ರೆ ಅವರ ಕುಟುಂಬದವರನ್ನು ಮದುವೆಗೆ ಆಹ್ವಾನಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಹಾಗೂ ಬಿಜೆಪಿ ನಾಯಕ ನಿತಿನ್​ ಗಡ್ಕರಿ ಅವರಿಗೂ ಆಹ್ವಾನ ನೀಡಲಾಗಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಿಂಗ್​ ಮೇಕರ್​ ಆಗಿದ್ದ ಎಂಎನ್​ಎಸ್​ 2014ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದೀಗ 2019ರಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಮತ್ತೊಮ್ಮೆ ಜೀವ ತುಂಬುವ ಪ್ರಯತ್ನದಲ್ಲಿದ್ದಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ