Raj Kundra| 'Hot Shots' ಆ್ಯಪ್ ಮೂಲಕ ಪೋರ್ನ್ ಹಂಚಲು ರಾಜ್ ಕುಂದ್ರಾ ಪ್ಲ್ಯಾನ್: ಖಾಕಿ ಮುಂದೆ ಬಾಯ್ಬಿಟ್ಟ ಬಿಸಿನೆಸ್ ಪಾರ್ಟ್​ನರ್

Hot Shots ಆ್ಯಪ್ ಮೂಲಕ ಪೋರ್ನ್ ಹಂಚಲು ರಾಜ್ ಕುಂದ್ರಾ ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ಆತನ ಬಿಸಿನೆಸ್ ಪಾರ್ಟ್​ನರ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ರಾಜ್ ಕುಂದ್ರಾ

ರಾಜ್ ಕುಂದ್ರಾ

 • Share this:
  ಇಂಡೋ ಬ್ರಿಟೀಷ್ ಮೂಲದ  ಉದ್ಯಮಿ ಮತ್ತು ಐಪಿಎಲ್ (IPL2021) ರಾಜಸ್ತಾನ್ ರಾಯಲ್ಸ್ (Rajastan Royals)​ತಂಡದ ಸಹ ಮಾಲೀಕ ರಾಜ್ ಕುಂದ್ರಾ (Raj Kundra) ಪೋರ್ನ್ ರಾಕೆಟ್ (Porn Rocket) ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳು ತ್ತಿದೆ. ಪ್ರಕರಣದ ಆಳಕ್ಕೆ ಇಳಿದಷ್ಟು ರಾಜ್ ಕುಂದ್ರಾ ಸೆಕ್ಸ್ ಕಥೆಗಳು (Raj Kundra Sex Stories) ಮತ್ತಷ್ಟು ಹೊರ ಬೀಳುತ್ತಲೇ ಇವೆ. ಇದೀಗ Hot Shots ಆ್ಯಪ್ ಮೂಲಕ ಪೋರ್ನ್ ಹಂಚಲು ರಾಜ್ ಕುಂದ್ರಾ ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ಆತನ ಬಿಸಿನೆಸ್ ಪಾರ್ಟ್​ನರ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ನಿರ್ಮಾಪಕ ರಾಜ್ ಕುಂದ್ರಾ ಪೋರ್ನ್ ಕರ್ಮಕಾಂಡ ಇಡೀ ಬಾಲಿವುಡ್ ಚಿತ್ರಂರಗವನ್ನ ತಲ್ಲಣಗೊಳಿಸಿತ್ತು. ಜುಲೈ 19ರಂದು ರಾಜ್ ಕುಂದ್ರಾ ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ವಿಷಯಗಳು ಹೊರಬೀಳುತ್ತಿವೆ. ಇದೀಗ ಪೋರ್ನ್ ಸಿನಿಮಾಗಳನ್ನ ಬಿಡುಗಡೆ ಮಾಡಲೆಂದೇ ರಾಜ್ ಕುಂದ್ರಾ Hot Shots ಹೆಸರಿನ ಆ್ಯಪ್ ಒಂದನ್ನು ಸಿದ್ದಪಡಿಸಿದ್ದರು ಎಂಬ ಕಳವಳಕಾರಿ ಮಾಹಿತಿ ಇದೀಗ ಹೊರ ಬಿದ್ದಿದೆ. ಹೀಗಂತ ಸ್ವತಃ ಪೊಲೀಸರ ಮುಂದೆ ಆತನ ಬಿಸಿನೆಸ್ ಪಾರ್ಟ್​ನರ್ ಆಗಿದ್ದ ರ‍್ಯಾನ್​ ತ್ರೋಪ್ (Ryan Thorpe) ತಪ್ಪೊಪ್ಪಿಕೊಂಡಿದ್ದಾನೆ.

  Armsprime Ltd ಹೆಸರಿನ ಕಂಪನಿಯಲ್ಲಿ ರಾಜ್ ಕುಂದ್ರಾ ಹಾಗೂ ಸೌರಭ್ ಕುಶ್ವಾಹ ಡೈರೆಕ್ಟರ್ ಆಗಿದ್ರು, ಹಾಗೂ ಇದೇ ಕಂಪನಿಯಿಂದ Hot Shots ಆ್ಯಪ್ ಕೂಡ ಸಿದ್ಧಪಡಿಸಿದ್ದರು. ಆ್ಯಪ್ ಸಿದ್ಧಪಡಿಸಿ ಬಳಿಕ ಯುಕೆ ಮೂಲದ ಕೆನ್ರಿನ್ ಲಿಮಿಟೆಡ್ ಕಂಪನಿಗೆ ಮಾರಾಟ ಮಾಡಲಾಗಿತ್ತು. ಈ ಆ್ಯಪ್ ಮೂಲಕವೇ ರಾಜ್ ಕುಂದ್ರಾ ಪೋರ್ನ್ ಸಿನಿಮಾಗಳನ್ನ ಅಪ್ಲೋಡ್ ಮಾಡುತ್ತಿದ್ದರು. ಇದಾದ ಬಳಿಕ Armsprime Ltd ಕಂಪನಿಯಿಂದ ರಾಜ್ ಕುಂದ್ರಾ ಹೊರಬಂದಿದ್ದರು.

  ಇನ್ನೂ ರಾಜ್​ ಕುಂದ್ರಾ ಪತ್ನಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮುಂಬೈ ಪೊಲೀಸರ ಮುಂದೆ ತನ್ನ ಪತಿ ಮಾಡುತ್ತಿದ್ದ ಕೆಲಸದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಅಂತ ತಿಳಿಸಿದ್ದರು. "ನಾನು ನನ್ನ ಕೆಲಸದ ಮೇಲೆ ಹೆಚ್ಚಿನ ಗಮನ ನೀಡುತ್ತಿದೆ. ರಾಜ್ ಕುಂದ್ರಾ ಕೆಲಸದ ಬಗ್ಗೆ ನನಗೆ ಕಿಂಚಿತ್ತು ತಿಳಿದಿರಲಿಲ್ಲ. ಈ ಹಿಂದೆ 2015ರಲ್ಲಿ ರಾಜ್ ಕುಂದ್ರಾ ವಿಹಾನ್ ಇಂಡಸ್ಟ್ರಿ ಲಿಮಿಟೆಡ್ ಕಂಪನಿಯನ್ನ ಆರಂಭಿಸಿದ್ದರು. ಆಗ ನಾನು 2020ರವರೆಗೆ ಆ ಕಂಪನಿಯ ನಿದೇಶಕಿಯಾಗಿ ಕೆಲಸ ನಿರ್ವಹಿಸಿದ್ದೆ.

  ಇದನ್ನೂ ಓದಿ: Porn Case: ರಾಜ್​ ಕುಂದ್ರಾಗೆ ಸೇರಿದ ಎಸ್​ಬಿಐ ಖಾತೆಗಳನ್ನು ಬಂದ್​ ಮಾಡುವಂತೆ ಸೂಚಿಸಿದ ಪೊಲೀಸರು

  ಬಳಿಕ ವೈಯಕ್ತಿಕ ಕಾರಣಗಳಿಂದ ಆ ಜವಾಬ್ದಾರಿಯಿಂದ ಹೊರಬಂದಿದ್ದೆ. ನನಗೆ Hot Shots ಹಾಗೂ ಬಾಲಿಫೇಮ್ ಆ್ಯಪ್​ಗಳ ಬಗ್ಗೆ ನನಗೆ ಗೊತ್ತಿರಲಿಲ್ಲ"  ಎಂದು ನಟಿ ಶಿಲ್ಪಾ ಶೆಟ್ಟಿ ಮುಂಬೈ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿಯನ್ನು 43ನೇ ಸಾಕ್ಷಿದಾರರಾಗಿ ಸೇರಿಸಿದ್ದಾರೆ. ಬಾಲಿವುಡ್ ನಿರ್ಮಾಪಕ ರಾಜ್ ಕುಂದ್ರಾ ವಿರುದ್ಧ ಈಗಾಗಲೇ ಮುಂಬೈ ಪೊಲೀಸರು 1500 ಪೇಜ್ ಸಪ್ಲಿಮೆಂಟರಿ ಚಾರ್ಜ್​ ಶೀಟ್ ಸಲ್ಲಿಸಿದ್ದಾರೆ.

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು 45 ವರ್ಷದ ಮತ್ತೋರ್ವ ಉದ್ಯಮಿಯನ್ನೂ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ಮೇಲೆ ಐಪಿಸಿ ಸೆಕ್ಷನ್ 420, 34, 292, 293 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Raj Kundra: ರಾಜ್ ಕುಂದ್ರಾ ಮುಂಚೆ ಮಾಡಿದ್ದ ಅಶ್ಲೀಲ ಟ್ವೀಟ್​​ಗಳಿಗೆ ಈಗ ಹೊಸ ಅರ್ಥ !

  ಸದ್ಯ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಸೂಪರ್ ಡ್ಯಾನ್ಸರ್ 4 ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಹಂಗಾಮ – 2 ಸಿನಿಮಾದಲ್ಲಿ ಪರೇಶ್ ರವಾಲ್ ಜತೆ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದರು. ಪತಿ ರಾಜ್ ಕುಂದ್ರಾ ಪೋರ್ನ್ ರಾಕೆಟ್ ನಿಂದ ಮನನೊಂದಿರುವ ಶಿಲ್ಟಾ ಶೆಟ್ಟಿ ತನ್ನ ಪತಿಯ ಕೆಲಸ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ. ನೆಟ್ಟಿಗರು ಪತಿಯ ಕೆಲಸದ ಬಗ್ಗೆ ಗಮನವಿರದಷ್ಟು ಶಿಲ್ಪಾ ಶೆಟ್ಟಿ ಬ್ಯುಸಿಯಾಗಿದ್ದಾರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.

  (ವರದಿ - ವಾಸುದೇವ್.ಎಂ )

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: