ರಾಜ್ ಕುಂದ್ರಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ: ವಿಚ್ಛೇದನಕ್ಕೆ ಮುಂದಾಗಿದ್ದಾರಾ ಶಿಲ್ಪಾ ಶೆಟ್ಟಿ..?

Shilpa Shetty-Raj Kundra: ಮೊದಮೊದಲು ಪತಿಯನ್ನು ಬೆಂಬಲಿಸಿದ್ದ ಶಿಲ್ಪಾಗೆ ಈಗ ಭ್ರಮನೀರಸವಾಗಿದೆ. ತಮ್ಮ ಇಮೇಜ್​​ ಮತ್ತಷ್ಟು ಡ್ಯಾಮೇಜ್​ ಆಗುವ ಮುನ್ನ ರಾಜ್​ಕುಂದ್ರಾರಿಂದ ದೂರವಾಗಲು ಶಿಲ್ಪಾ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Shilpa Shetty-Raj Kundra

Shilpa Shetty-Raj Kundra

  • Share this:
ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​​ ಕುಂದ್ರಾರನ್ನು ಕೋರ್ಟ್​​​ ನ್ಯಾಯಾಂಗ ಬಂಧನಕ್ಕೆ ನೀಡಿದೆ. ನೀಲಿಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜು.19ರಂದು ರಾಜ್​​ಕುಂದ್ರಾರನ್ನು ಬಂಧಿಸಲಾಗಿತ್ತು. ಇಂದು ಪೊಲೀಸ್​​ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್​​ ರಾಜ್​ ಕುಂದ್ರಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸ್​ ಕಸ್ಟಡಿ ಪ್ರಶ್ನಿಸಿ ಹಾಗೂ ಜಾಮೀನಿಗಾಗಿ ಬಾಂಬೆ ಹೈಕೋರ್ಟ್​ಗೆ ಆರೋಪಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಕೋರ್ಟ್​​ ರಾಜ್​ಕುಂದ್ರಾಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ನಾಳೆ ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನು ತನಿಖೆ ವೇಳೆ ರಾಜ್​​ಕುಂದ್ರಾರನ್ನು ಅವರ ಮನೆಗೆ ಕರೆದೊಯ್ದು ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಈ ವೇಳೆ ಮನೆಯಲ್ಲಿದ್ದ ಶಿಲ್ಪಾ ಪತಿ ರಾಜ್​​ಕುಂದ್ರಾ ವಿರುದ್ಧ ಕೂಗಾಡಿದ್ದಾರೆ ಎಂದು ವರದಿಯಾಗಿದೆ. ಯಾಕಾಗಿ ಈ ರೀತಿ ಮಾಡಿದೆ. ಪೋರ್ನ್​​ ಸಿನಿಮಾಗಳ ನಿರ್ಮಾಣದಲ್ಲಿ ನಿನ್ನ ಪಾತ್ರ ಏಕಿದೆ ಎಂದು ಪ್ರಶ್ನಿಸಿದ್ದಾರೆ. ಪೊಲೀಸ್​ ಜೊತೆ ಮನೆಗೆ ಬಂದ ಪತಿಯನ್ನು ನೋಡಿ ಭಾವೋಗ್ವೇದಕ್ಕೆ ಒಳಗಾದ ಶಿಲ್ಪಾ ಕಣ್ಣೀರಾಕಿ ಕಿರುಚಾಡಿದ್ದಾರೆ ಎನ್ನಲಾಗುತ್ತಿದೆ.

ಕೆಲವೊಂದು ಆಪ್ತ ಮೂಲಗಳ ಪ್ರಕಾರ ಪತಿ ರಾಜ್​ಕುಂದ್ರಾರಿಂದ ದೂರವಾಗಲು ಬಯಸಿದ್ದಾರಂತೆ ಶಿಲ್ಪಾ ಶೆಟ್ಟಿ. ಮೊದಲು ರಾಜ್​ಕುಂದ್ರಾ ಬಂಧನವಾದಾಗ ಶಿಲ್ಪಾ ಪತಿಯನ್ನು ಸಮರ್ಥಿಸಿಕೊಂಡಿದ್ದರು. ಕಾಮೋದ್ರೇಕ ಸಿನಿಮಾಗಳಿಗೂ ನೀಲಿಚಿತ್ರಗಳಿಗೂ ವ್ಯತ್ಯಾಸವಿದೆ. ನನ್ನ ಪತಿ ಮುಗ್ಧ ಹಾಗೂ ನಿರಪರಾಧಿ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದರು. ಶಿಲ್ಪಾ ಶೆಟ್ಟಿ ಸೋದರಿ ಶಮಿತಾ ಶೆಟ್ಟಿ ಸಹ ಅಕ್ಕ-ಭಾವನನ್ನು ಬೆಂಬಲಿಸಿ ಈ ಕೆಟ್ಟ ಘಳಿಗೆ ಬೇಗ ಮುಗಿಯಲಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನೆಟ್ಟಿಗರಿಂದ ಸಾಕಷ್ಟು ಟೀಕೆಯನ್ನು ಎದುರಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಎಲ್ಲಾ ದಿಕ್ಕುಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ರಾಜ್​ಕುಂದ್ರಾರ ಪೋರ್ನ್​​ ಆ್ಯಪ್​, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಗಳಿಕೆ ಸಂಬಂಧ ಹಲವು ಸಂಗತಿಗಳು ನಿತ್ಯ ಬಯಲಾಗುತ್ತಲೇ ಇವೆ. ಮಾಧ್ಯಮಗಳಲ್ಲಿ ರಾಜ್​ಕುಂದ್ರಾ ವಿರುದ್ಧದ ವರದಿಗಳನ್ನು ಬಿತ್ತರವಾಗುತ್ತಿದ್ದು, ಶಿಲ್ಪಾ ವಿಚಲಿತರಾಗಿದ್ದಾರೆ ಎನ್ನಲಾಗುತ್ತಿದೆ. ನೀಲಿ ಚಿತ್ರಗಳ ನಿರ್ಮಾಣದಲ್ಲಿ ರಾಜ್​ಕುಂದ್ರಾ ಪಾತ್ರ ಸ್ಪಷ್ಟವಾಗುತ್ತಿದ್ದು, ಜೈಲುಪಾಲಾಗೋದು ಪಕ್ಕಾ ಆಗುತ್ತಿದೆ. ಈ ಹಿನ್ನೆಲೆ ಶಿಲ್ಪಾ ಕೂಡ ಪತಿಯನ್ನು ತೊರೆಯಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ: Raj Kundra: ಬಸ್ ಕಂಡಕ್ಟರ್ ಮಗನಾಗಿ ರಾಜ್ ಕುಂದ್ರಾ ದೊಡ್ಡ ಉದ್ಯಮಿಯಾಗಿದ್ದೇಗೆ?

ಇನ್ನು ನೀಲಿಚಿತ್ರಗಳ ನಿರ್ಮಾಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರದ ಆಯಮದಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈವರೆಗೆ ಪತಿಯ ಅಕ್ರಮ ಚಟುವಟಿಗಳಲ್ಲಿ ಶಿಲ್ಪಾರ ಪಾತ್ರ ಕಂಡು ಬಂದಿಲ್ಲ. ಶಿಲ್ಪಾಗೆ ತಿಳಿಯದೆ ರಾಜ್​ಕುಂದ್ರಾ ನೀಲಿಚಿತ್ರಗಳನ್ನು ನಿರ್ಮಿಸುತ್ತಿದ್ದರು. ಈ ಬಗ್ಗೆ ತಿಳಿಯದ ಶಿಲ್ಪಾಗೆ ಆಘಾತವಾಗಿದೆ. ಮೊದಮೊದಲು ಪತಿಯನ್ನು ಬೆಂಬಲಿಸಿದ್ದ ಶಿಲ್ಪಾಗೆ ಈಗ ಭ್ರಮನೀರಸವಾಗಿದೆ. ತಮ್ಮ ಇಮೇಜ್​​ ಮತ್ತಷ್ಟು ಡ್ಯಾಮೇಜ್​ ಆಗುವ ಮುನ್ನ ರಾಜ್​ಕುಂದ್ರಾರಿಂದ ಅಂತರ ಕಾಯ್ದುಕೊಳ್ಳಲು ಶಿಲ್ಪಾ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಾಜ್​​ಕುಂದ್ರಾ ನಟಿ ಶಿಲ್ಪಾ ಶೆಟ್ಟಿನ 2ನೇ ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದು, ಬಾಡಿಗೆ ತಾಯಿ ಮೂಲಕ ಮಗಳನ್ನು ಪಡೆದುಕೊಂಡಿದ್ದಾರೆ. ರಾಜ್​​ಕುಂದ್ರಾ ಬಂಧನ ಅವರ ದಾಂಪತ್ಯದಲ್ಲೂ ಬಿರುಗಾಳಿ ಎಬ್ಬಿಸಿದೆ.
Published by:Kavya V
First published: