• Home
 • »
 • News
 • »
 • national-international
 • »
 • Porn Case: ರಾಜ್​ ಕುಂದ್ರಾಗೆ ಸೇರಿದ ಎಸ್​ಬಿಐ ಖಾತೆಗಳನ್ನು ಬಂದ್​ ಮಾಡುವಂತೆ ಸೂಚಿಸಿದ ಪೊಲೀಸರು

Porn Case: ರಾಜ್​ ಕುಂದ್ರಾಗೆ ಸೇರಿದ ಎಸ್​ಬಿಐ ಖಾತೆಗಳನ್ನು ಬಂದ್​ ಮಾಡುವಂತೆ ಸೂಚಿಸಿದ ಪೊಲೀಸರು

ರಾಜ್​ ಕುಂದ್ರಾ

ರಾಜ್​ ಕುಂದ್ರಾ

ಶ್ಯಾಮ್ ನಗರದಲ್ಲಿ ವಾಸಿಸುವ ಅರವಿಂದ ಅವರ ತಂದೆ ಎನ್.ಪಿ.ಶ್ರೀವಾಸ್ತವ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಹೀಗೆ ಪ್ರತಿಕ್ರಿಯೆ ನೀಡಿದ್ದು: "ಕಳೆದ ಎರಡು ವರ್ಷಗಳಲ್ಲಿ ಅರವಿಂದ್ ಮನೆಗೆ ಬಂದಿಲ್ಲ ಮತ್ತು ಮನೆಯ ಖರ್ಚಿಗೆ ಎಂದು ಕಾಲಕಾಲಕ್ಕೆ ಹಣವನ್ನು ಕಳುಹಿಸುತ್ತಿದ್ದನು’’ ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರು ಕಾನ್ಪುರದಲ್ಲಿ ಹೊಂದಿರುವ ಎರಡು ಸ್ಟೇಟ್ ಬ್ಯಾಂಕ್ ಖಾತೆಗಳನ್ನು ಬಂದ್​ ಮಾಡುವಂತೆ ಮುಂಬೈ ಅಪರಾಧ ಶಾಖೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನಿರ್ದೇಶನ ನೀಡಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.


  ಈ ಎರಡು ಬ್ಯಾಂಕ್ ಖಾತೆಗಳಲ್ಲಿ ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.


  ಭಾನುವಾರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡ ನಂತರ, ಕುಂದ್ರಾ ಬಗ್ಗೆ ಮತ್ತೊಂದು ವಿಷಯ ಹೊರಬಿದ್ದಿದೆ. ಅರವಿಂದ್ ಶ್ರೀವಾಸ್ತವ ಅವರ ಜೊತೆ ಸೇರಿ ರಾಜ್ ಕುಂದ್ರಾ ಅವರು ನಿರ್ಮಾಣ ಕಂಪನಿಯೊಂದನ್ನು ನಡೆಸುತ್ತಿದ್ದರು ಮತ್ತು ಹಣವನ್ನು ಅರವಿಂದ ಶ್ರೀವಾಸ್ತವ ಅವರ ಪತ್ನಿ ಹರ್ಷಿತಾಗೆ ವರ್ಗಾಯಿಸಲಾಗುತ್ತಿತ್ತು ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.


  ಶ್ಯಾಮ್ ನಗರದಲ್ಲಿ ವಾಸಿಸುವ ಅರವಿಂದ ಅವರ ತಂದೆ ಎನ್.ಪಿ.ಶ್ರೀವಾಸ್ತವ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಹೀಗೆ ಪ್ರತಿಕ್ರಿಯೆ ನೀಡಿದ್ದು: "ಕಳೆದ ಎರಡು ವರ್ಷಗಳಲ್ಲಿ ಅರವಿಂದ್ ಮನೆಗೆ ಬಂದಿಲ್ಲ ಮತ್ತು ಮನೆಯ ಖರ್ಚಿಗೆ ಎಂದು ಕಾಲಕಾಲಕ್ಕೆ ಹಣವನ್ನು ಕಳುಹಿಸುತ್ತಿದ್ದನು’’ ಎಂದು ಹೇಳಿದ್ದಾರೆ.


  ಮುಂಬೈ ಅಪರಾಧ ವಿಭಾಗವು ಫೆಬ್ರವರಿ 2021 ರಲ್ಲಿ ಅರವಿಂದ್​ ಅವರಿಗಾಗಿ ಲುಕ್ ಔಟ್​ ನೋಟಿಸ್ ನೀಡಿದೆ ಎಂದು ಎನ್.ಪಿ.ಶ್ರೀವಾಸ್ತವ ಹೇಳಿದ್ದಾರೆ.


  ಮತ್ತೊಂದೆಡೆ, ಅರವಿಂದ್ ಅವರ ತಂದೆ ಅರವಿಂದ್ ಅವರ ಉದ್ಯೋಗದ ಬಗ್ಗೆ ತಿಳಿದಿಲ್ಲ ಹಾಗೂ ಇಷ್ಟು ದೊಡ್ಡ ಮೊತ್ತದ ಹಣ ಸೊಸೆ ಹರ್ಷಿತಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ ಎನ್ನುವ ವಿಚಾರವೂ ತಿಳಿದಿಲ್ಲ ಎನ್ನುತ್ತಾರೆ.


  ರಾಜ್ ಕುಂದ್ರಾ ಅವರ ನಾಲ್ಕು ಉದ್ಯೋಗಿಗಳು ಅವರ ವಿರುದ್ಧ ಸಾಕ್ಷ್ಯ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.


  ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ತಾರ್ಪೆ ಅವರನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಯ ನಂತರ ಕಿಲ್ಲಾ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಾಗಿದೆ. ಮಂಗಳವಾರ ಇವರ ಬಂಧನದ ಅವಧಿ ಮುಗಿಯಲಿದೆ.


  ಜುಲೈ 20 ರಂದು ಮುಂಬೈ ಪೊಲೀಸರು ಅಶ್ಲೀಲ ಚಿತ್ರಗಳ ದಂಧೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಬಿಲಿಯನೇರ್ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಕುಂದ್ರಾ ಅವರ ಸಂಬಂಧಿಯ ಒಡೆತನದ ಹಾಟ್​ಶಾಟ್ಸ್​ ಆ್ಯಪ್ಅನ್ನು​ ರಾಜ್ ಕುಂದ್ರಾ ಅವರ ನಿರ್ಮಾಣದ ಚಿತ್ರಗಳನ್ನು ಬಿತ್ತರಿಸಲು ಬಳಸಲಾಗುತ್ತಿತ್ತು, ಕುಂದ್ರಾ ಅವರನ್ನು ಜುಲೈ 23 ರವರೆಗೆ ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು, ಈ ದಿನಾಂಕವನ್ನು ಈಗ ಜುಲೈ 27 ಕ್ಕೆ ವಿಸ್ತರಿಸಲಾಗಿತ್ತು.

  ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ತನ್ವೀರ್ ಹಶ್ಮಿ ಅವರನ್ನು ಭಾನುವಾರ ಕ್ರೈಂ ಬ್ರಾಂಚ್​  ತನಿಖೆಗೆ ಒಳಪಡಿಸಿತು. ಆ ನಂತರ ಅವರು ಹೀಗೆ ಹೇಳಿರುವುದಾಗಿ ವರದಿಯಾಗಿದೆ. ಈ ವೀಡಿಯೊಗಳನ್ನು ಅಶ್ಲೀಲ ಎಂದು ಕರೆಯಲಾಗುವುದಿಲ್ಲ ಮತ್ತು ರಾಜ್​ಕುಂದ್ರಾ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದಿದ್ದರು.


  ಇದನ್ನೂ ಓದಿ: ಕೋವಿಡ್ -19 ನಿಂದ ಚೇತರಿಸಿಕೊಂಡ ಮಧುಮೇಹಿಗಳ ಆಹಾರ ಪದ್ಧತಿ ಹೇಗಿರಬೇಕು?

  ಜಾಮೀನಿನ ಮೇಲೆ ಹೊರಬಂದ ನಂತರ ಹಶ್ಮಿ ಮಾಧ್ಯಮಗಳ ಎದುರು ಮಾತನಾಡಿದರು.  ಈ ಪ್ರಕರಣದಲ್ಲಿ ನಟ ಗೆಹಾನಾ ವಶಿಷ್ಟ​ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್​ ಕಳಿಸಲಾಗಿತ್ತು ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: