ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ತಯಾರಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂದು ತನಿಖೆಯಲ್ಲಿ ಕಂಡುಕೊಂಡಿರುವುದಾಗಿ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ತಿಳಿದುಬಂದಿದೆ ಎಂದು ಮುಂಬೈ ಅಪರಾಧ ಶಾಖೆಯ ಆಪ್ತ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ.
ಕುಂದ್ರಾ ಈ ಹಿಂದೆ ತನ್ನ ವ್ಯವಹಾರವನ್ನು ಯುಕೆಯಲ್ಲಿ ನೆಲೆಸಿರುವ ತನ್ನ ಸಂಬಂಧಿಗೆ ಮಾರಿರುವುದಾಗಿ ಹೇಳಿಕೊಂಡಿದ್ದರು, ಆದರೆ ಈ ವಿಷಯ ಸುಳ್ಳು ಎಂದು ಆಸ್ತಿ ಕೋಶದ ಅಧಿಕಾರಿಗಳು ತನಿಖೆ ನಡೆಸಿ ರಾಜ್ ಕುಂದ್ರಾ ಅವರ ನಿಜ ಮುಖವನ್ನು ಬಯಲು ಮಾಡಿದ್ದಾರೆ. ಮಾರಾಟ ಮಾಡಲಾಗಿದೆ ಹೇಳುತ್ತಿರುವ ಈ ಕಂಪೆನಿಯ ಎಲ್ಲಾ ವ್ಯವಹಾರಗಳಲ್ಲಿ ದಿನ ನಿತ್ಯ ರಾಜ್ಕುಂದ್ರಾ ಭಾಗವಹಿಸುತ್ತಿದ್ದರು ಅಲ್ಲದೇ ಇವರೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಎಂದೂ ಸಹ ತನಿಖೆ ವೇಳೆ ಬಯಲಾಗಿದೆ.
ಹಾಟ್‌ಶಾಟ್ಸ್ (ಎಚ್‌ಎಸ್) ಅಪ್ಲಿಕೇಶನ್‌ಗಾಗಿ ತಯಾರಿಸಲಾಗುತ್ತಿದ್ದ ಅಶ್ಲೀಲ ವಿಡಿಯೋಗಳ ನಕಲು ಹಾಗೂ ಪೈರಸಿ ಮಾಡದಂತೆ ತಡೆಗಟ್ಟಲು ಕುಂದ್ರಾ ಬಲವಾದ ಕಾನೂನು ತಂಡವನ್ನು ರಚಿಸಿದ್ದರು. ಈ ಕಾನೂನು ತಂಡವು ಭಾರತ ಮತ್ತು ವಿದೇಶಗಳಲ್ಲಿ ಕಾಪಿರೈಟ್ ಹಾಗೂ ನಕಲು ಆಗದಂತೆ ತಡೆಯುತ್ತಿತ್ತು, ನಿರಂತರವಾಗಿ ಪರಿಶೀಲಿಸುತ್ತಿತ್ತು ಎಂದು ಹೇಳಲಾಗಿದೆ.
ರಾಜ್ಕುಂದ್ರಾ ಅವರಿಂದ ವಶಪಡಿಸಿಕೊಂಡಿರುವ ಫೋನ್ನಲ್ಲಿ ಇರುವ ಮಾಹಿತಿಗಳನ್ನು ಸಹ ಕಲೆಹಾಕಲಾಗುತ್ತಿದೆ. ಕುಂದ್ರಾ ಅಡ್ಮಿನ್ ಆಗಿರುವ ಎಚ್‌ಎಸ್ ಅಕೌಂಟ್ ವಾಟ್ಸ್ಆ್ಯಪ್ ಗ್ರೂಪಿಗೆ ಇವರೇ ಅಡ್ಮಿನ್ ಅಲ್ಲದೇ ಇನ್ನೂ ಎರಡು ವಾಟ್ಸಪ್ ಗ್ರೂಪ್ಳಿವೆ ಎಂದು ಪೊಲೀಸರು ಹೇಳಿದ್ದಾರೆ. ಎಚ್‌ಎಸ್ ಅಕೌಂಟ್ ಗ್ರೂಪಿನಲ್ಲಿ ಮುಖ್ಯವಾಗಿ ಆದಾಯ ಹಾಗೂ ವ್ಯವಹಾರಗಳ ಬಗ್ಗೆ ಹೆಚ್ಚು ಮಾತುಕತೆಯಾಗುತ್ತಿತ್ತು ಎಂದು ಹೇಳಲಾಗಿದೆ.
ಪ್ರಸ್ತುತ, ‘ಎಚ್‌ಎಸ್ ಟೇಕ್ ಡೌನ್’ ಹೆಸರಿನ ಎರಡನೇ ವಾಟ್ಸಾಪ್ ಗುಂಪು ಪರಿಶೀಲನೆಯಲ್ಲಿದೆ. ಕುಂದ್ರಾ ಈ ಗುಂಪಿನ ಅಡ್ಮಿನ್ ಸಹ ಆಗಿದ್ದಾರೆ.
‘ಎಚ್‌ಎಸ್ ಟೇಕ್ ಡೌನ್’ ವಾಟ್ಸಪ್ ಗುಂಪು ಕುಂದ್ರಾ ಹಾಗೂ ಕಾನೂನು ತಂಡದ ಸದಸ್ಯರನ್ನು ಒಳಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕುಂದ್ರಾ ಕಂಪನಿಯಿಂದ ತಯಾರಿಸಿದ ಅಶ್ಲೀಲ ವಿಡಿಯೋಗಳನ್ನು ಯಾರಾದರೂ ಕದ್ದಿದ್ದಾರಾ ಅವರ ವಿರುದ್ದ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತಿತ್ತು, ಹಾಗೂ ಯಾರಾದರೂ ಕದ್ದಿದ್ದಾರಾ ಎನ್ನುವ ಕುರಿತು ಪರಿಶೀಲನೆ ನಡೆಯುತ್ತಿತ್ತು ಎಂದು ತನಿಖೆ ವೇಳೆ ಕಂಡುಕೊಳ್ಳಲಾಗಿದೆ.
ಈ ವಕೀಲರ ತಂಡವು ಎಲ್ಲಾ ವೆಬ್ಸೈಟ್ಗಳ ಮೇಲೆ ನಿಗಾ ಇಡಲು ಮತ್ತು ಪರಿಹಾರವನ್ನು ಕೋರಿ ಅಥವಾ ಪೋರ್ಟಲ್‌ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಿ ಕಾನೂನು ನೋಟಿಸ್‌ಗಳನ್ನು ಕಳುಹಿಸಲು ನಿಯೋಜಿಸಲಾಗಿತ್ತು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾನೂನು ತಂಡವನ್ನು ಸಹ ಪ್ರಶ್ನಿಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಇದನ್ನೂ ಓದಿ: ಕೊರೋನಾ ಸೊಂಕು ಮತ್ತೆ ವ್ಯಾಪಕವಾಗಿ ಹರಡಿರುವ ಶಂಕೆ: ಬೃಹತ್ ಪರೀಕ್ಷೆಗೆ ಮುಂದಾದ ಚೀನಾ
ಈ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಹಾಗೂ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಸಕ್ರಿಯವಾಗಿ ಇರುವ ಎಲ್ಲಾ ಸದಸ್ಯರನ್ನು ಸಹ ಮುಂದಿನ ದಿನಗಳಲ್ಲಿ ಪ್ರಶ್ನಿಸಲಾಗುವುದು ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ