ಅಶ್ಲೀಲ ಚಿತ್ರಗಳಿಂದ ದಿನಕ್ಕೆ 6 ರಿಂದ 8 ಲಕ್ಷ ಗಳಿಸುತ್ತಿದ್ದ ರಾಜ್ ಕುಂದ್ರಾ!

“ರಾಜ್ ಕುಂದ್ರಾ ಅವರು ಭಾರತದಿಂದ ಅಶ್ಲೀಲ ವೀಡಿಯೊಗಳನ್ನು ಹಾಟ್‌ಶಾಟ್ ಎಂಬ ಆ್ಯಪ್​ಗೆ ಅಪ್‌ಲೋಡ್ ಮಾಡಲು ಸಾಧ್ಯವಾಗದ ಕಾರಣ  ಅವುಗಳನ್ನು ವಿ- ಟ್ರಾನ್ಸ್‌ಫರ್ ಮೂಲಕ ವಿದೇಶಕ್ಕೆ ಕಳುಹಿಸುತ್ತಿದ್ದರು” ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

 • Share this:
  ಮುಂಬೈ ಪೊಲೀಸರು ಮಂಗಳವಾರ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಬಂಧಿತ ಉದ್ಯಮಿ ರಾಜ್ ಕುಂದ್ರಾ ಅವರ ವ್ಯವಹಾರ ಮತ್ತು ಕಂಪನಿ ಅಶ್ಲೀಲ ಚಲನಚಿತ್ರ ದಂಧೆಯನ್ನು ಹೇಗೆ ನಿರ್ವಹಿಸುತ್ತಿತ್ತು ಎಂಬುದರ ಕುರಿತು ಹಲವಾರು ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಅಪರಾಧ ಶಾಖೆಯ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ಕುಂದ್ರಾ ಅವರ ವ್ಯವಹಾರವು ಪ್ರವರ್ಧಮಾನಕ್ಕೆ ಬಂದಿತ್ತು.

  ಪತ್ರಿಕಾಗೋಷ್ಠಿಯಲ್ಲಿ, ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭರಂಬೆ ಮಾತನಾಡಿ, ಕುಂದ್ರಾ ಈ ವ್ಯವಹಾರವನ್ನು ಕೇವಲ 18 ತಿಂಗಳ ಹಿಂದೆಯೇ ಪ್ರಾರಂಭಿಸಿದರು. ಅದು ವೇಗವಾಗಿ ಬೆಳೆಯಿತು ಮತ್ತು ಅವರು ಪ್ರತಿದಿನ ಲಕ್ಷಗಳಲ್ಲಿ ಗಳಿಸಲು ಪ್ರಾರಂಭಿಸಿದರು. ತನ್ನ ಯುಕೆ ಮೂಲದ ಸಂಬಂಧಿ ಪ್ರದೀಪ್ ಬಕ್ಷಿಯ ಕೆನ್ರಿನ್ ಲಿಮಿಟೆಡ್ ಜೊತೆ ಕೈ ಜೋಡಿಸಿ ಈ ಕೃತ್ಯ ಮಾಡುತ್ತಿದ್ದನು ಎಂದು ಬಹಿರಂಗಪಡಿಸಿದ್ದಾರೆ.

  ಈ ವ್ಯವಹಾರದಿಂದ ರಾಜ್‌ ಕುಂದ್ರಾ ಅವರು ಮೊದಲು ದಿನಕ್ಕೆ 2-3 ಲಕ್ಷ ಮಾತ್ರ ಆಧಾಯಗಳಿಸುತ್ತಿದ್ದರು. ಆನಂತರ ಯಾವಾಗ ಬೇಗ ಬೆಳವಣಿಗೆ ಕಂಡ ತಕ್ಷಣ ಪ್ರತಿದಿನ 6 ರಿಂದ 8 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದರು ಎನ್ನುವ ಸ್ಪೋಟಕ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ.

  “ರಾಜ್ ಕುಂದ್ರಾ ಅವರು ಭಾರತದಿಂದ ಅಶ್ಲೀಲ ವೀಡಿಯೊಗಳನ್ನು ಹಾಟ್‌ಶಾಟ್ ಎಂಬ ಆ್ಯಪ್​ಗೆ ಅಪ್‌ಲೋಡ್ ಮಾಡಲು ಸಾಧ್ಯವಾಗದ ಕಾರಣ  ಅವುಗಳನ್ನು ವಿ- ಟ್ರಾನ್ಸ್‌ಫರ್ ಮೂಲಕ ವಿದೇಶಕ್ಕೆ ಕಳುಹಿಸುತ್ತಿದ್ದರು” ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ.

  ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಪ್ರಸಾರ ಮಾಡುವ ಬಗ್ಗೆ, ಫೆಬ್ರವರಿಯಲ್ಲಿ ಮುಂಬಯಿಯ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಿದ್ದೇವೆ. ಈ ಬಗ್ಗೆ ನಮಲ್ಲಿ ಸಾಕಷ್ಟು ಪುರಾವೆಗಳಿವೆ” ಎಂದು ಮುಂಬೈ ಪೊಲೀಸ್ ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದರು.

  "ಹಾಟ್‌ಶಾಟ್‌ ಆ್ಯಪ್​ಅನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಆಪಲ್ ಮತ್ತು ಗೂಗಲ್ ಪ್ಲೇಸ್ಟೋರ್ ಎರಡೂ ತೆಗೆದು ಹಾಕಿವೆ. ತನಿಖೆಯ ಸಮಯದಲ್ಲಿ ಮುಂಬೈ ಪೊಲೀಸರು ಹಲವಾರು ಹಾಟ್‌ಶಾಟ್ ಫಿಲ್ಮ್‌ಗಳು, ವಿಡಿಯೋ ತುಣುಕುಗಳು, ವಾಟ್ಸಾಪ್ ಚಾಟ್‌ಗಳು ಮುಂತಾದ ಸಾಕ್ಷ್ಯಗಳನ್ನು ಮರುಪಡೆಯಲಾಗಿದೆ" ಎಂದು ಭರಂಬೆ ಹೇಳಿದರು ಮಂಗಳವಾರ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.

  ಉದ್ಯಮಿ ರಾಜ್ ಕುಂದ್ರಾ ಅವರು ಈ ವ್ಯವಹಾರದಿಂದ ಪ್ರತಿದಿನ ಸುಮಾರು 6 ರಿಂದ 8 ಲಕ್ಷಗಳನ್ನು ಗಳಿಸುತ್ತಿದ್ದರು. ಹಣಕಾಸಿನ ವಹಿವಾಟಿನ ದಾಖಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ನಿಖರವಾದ ಗಳಿಕೆಯನ್ನು ಪಡೆಯಲು ನಾವು ವಿವರಗಳನ್ನು ವಿಶ್ಲೇಷಿಸುತ್ತಿದ್ದೇವೆ. ಇದನ್ನು ಅಪರಾಧದ ಆದಾಯವೆಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ನಾವು ವಿವಿಧ ಖಾತೆಗಳಲ್ಲಿ 7.5 ಕೋಟಿ ರೂಗಳನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಮಿಲಿಂದ್ ಭರಂಬೆ ತಿಳಿಸಿದ್ದಾರೆ.

  ಈಗ ಹೆಚ್ಚು ಪ್ರಚಲಿತದಲ್ಲಿರುವ ವೆಬ್ ಶೋಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ಸಣ್ಣ ಸಣ್ಣ ನಟರನ್ನು ಆಮಿಷಕ್ಕೆ ಒಳಪಡಿಸಲಾಗಿದೆ. ಅವರನ್ನು ಬೋಲ್ಡ್‌ ಸೀನ್‌ಗಳಲ್ಲಿ ನಟಿಸುವಂತೆ ಕೇಳಲಾಗಿದೆ. ಅವರ ಇಚ್ಛೆಗೆ ವಿರುದ್ದವಾಗಿ ಅರೆ-ನಗ್ನ ಮತ್ತು ನಗ್ನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗೆ ದೌರ್ಜನ್ಯಕ್ಕೆ ಒಳಗಾದವರಲ್ಲಿ ಕೆಲವರು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಈ ಹಿಂದೆ ಭರಂಬೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರು.

  ಇದನ್ನೂ ಓದಿ: Nandamuri Balakrishna-AR Rahman: ಎ.ಆರ್​. ರೆಹಮಾನ್​ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಬಾಲಕೃಷ್ಣ

  ಪೊಲೀಸರ ಅಪರಾಧ ಶಾಖೆ-ಸಿಐಡಿ ಮತ್ತು ಪ್ರಾಪರ್ಟಿ ಸೆಲ್ ನಡೆಸಿದ ತನಿಖೆಯ ನಂತರ, ಕುಂದ್ರಾ, ಅವರ ಸಹವರ್ತಿ ರಿಯಾನ್ ಜೆ. ಥಾರ್ಪೆ ಸೇರಿದಂತೆ ಕನಿಷ್ಠ 12 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ, ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು  ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ತಿಳಿಸಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: