ರಾಜ್​ಕುಂದ್ರಾ ಪ್ರಕರಣ: ಡ್ಯಾನ್ಸ್​ ಶೋನಿಂದ 2 ಕೋಟಿ ಕಳೆದುಕೊಂಡ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

ಶಿಲ್ಪಾಶೆಟ್ಟಿಯಿಂದ ಖಾಲಿ ಇರುವ ತೀರ್ಪುಗಾರರ ಸ್ಥಾನಕ್ಕೆ ಅವರ ಅನುಪಸ್ಥಿತಿಯಲ್ಲಿ ಕರೀಷ್ಮಾ ಕಪೂರ್​ ಅವರನ್ನು ಒಂದು ಸಂಚಿಕೆಗೆ ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿತ್ತು. ಮುಂದಿನ ಕೆಲವು ಸಂಚಿಕೆಗಳಲ್ಲಿ ತಾರಾ ಜೋಡಿ ನಟ ರಿತೇಶ್​ ದೇಶ್​ಮುಖ್ ಮತ್ತು ನಟಿ ಜೆನಿಲಿಯಾ ದೇಶ್​ಮುಖ್ ಅವರನ್ನು ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿದೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

 • Share this:

  ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣದಲ್ಲಿ ಬಂಧನವಾಗಿರುವುದರಿಂದ ಅವರ ಪತ್ನಿ ಬಾಲಿವುಡ್​​ ಬೆಡಗಿ ಶಿಲ್ಪಾ ಶೆಟ್ಟಿ 2 ಕೋಟಿ ರೂ ನಷ್ಟ ಅನುಭವಿಸುವಂತಾಗಿದೆ.


  ನಟಿ ಶಿಲ್ಪಾ ಶೆಟ್ಟಿ, ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಸೀಸನ್​​​ 4 ರ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಸದ್ಯ ತಮ್ಮ ಪತಿ ರಾಜ್​​ಕುಂದ್ರಾ ಅವರು ಸಂಕಷ್ಟದಲ್ಲಿರುವ ಕಾರಣ ಶಿಲ್ಪಾ ಶೆಟ್ಟಿಯವರ ದಿನಚರಿಯೆಲ್ಲವೂ ಅಸ್ತವ್ಯಸ್ತವಾಗಿದೆ. ನಟಿ ಶಿಲ್ಪಾ ಶೆಟ್ಟಿ ಕೆಲವು ದಿನಗಳ ಕಾಲ ರಿಯಾಲಿಟಿ ಶೋ ಕಾರ್ಯಕ್ರಮದ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಶಿಲ್ಪಾ ಶೆಟ್ಟಿ ಕಾರ್ಯಕ್ರಮಕ್ಕೆ ಗೈರುಹಾಜರಾದ ಕಾರಣ ಸುಮಾರು 2 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವನ್ನು ಎದುರಿಸಲಿದ್ದಾರೆ ಎಂದು ವರದಿಯಾಗಿದೆ.


  ಬಾಲಿವುಡ್​ ನಟಿ, ಬಿಗ್​ಬಾಸ್​​ ಖ್ಯಾತಿ, ಬಹುಭಾಷಾ ತಾರೆ, ಉದ್ಯಮಿ ಪತ್ನಿ ಹೀಗೆ ಹೈ ಪ್ರೊಫೈಲ್ ಹೊಂದಿರುವ ಶಿಲ್ಪಾ ಶೆಟ್ಟಿ ಕಿರುತೆರೆಯ ಜನಪ್ರಿಯ ಡ್ಯಾನ್ಸ್​ ರಿಯಾಲಿಟಿ ಶೋ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತೀರ್ಪುಗಾರರಾಗಿದ್ದಾರೆ. ಪ್ರತಿ ಎಪಿಸೋಡ್​ಗೆ 18 ರಿಂದ 22 ಲಕ್ಷ ರೂ. ಸಂಭಾವನೆಯನ್ನು ಸ್ವೀಕರಿಸುವ ಶಿಲ್ಪಾ ಪ್ರತಿವಾರ ಎರಡು ಎಪಿಸೋಡ್​​ಗಳ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು.


  ಆದರೆ ಪತಿ ರಾಜ್​ ಕುಂದ್ರಾ ಅವರ ಅಶ್ಲೀಲ ಚಿತ್ರಗಳ ನಿರ್ಮಾಣದ ಪ್ರಕರಣವು ಪ್ರತಿನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಲ್ಲದೇ ಪ್ರತಿನಿತ್ಯ ಹಲವಾರು ವಿಷಯಗಳು ಬಹಿರಂಗಗೊಳ್ಳುತ್ತಿದೆ. ಈ ಎಲ್ಲಾ ಕಾರಣಗಳಿಂದ ಶಿಲ್ಪಾ ಶೆಟ್ಟಿ ಚಿತ್ರೀಕರಣದಿಂದ ದೂರ ಉಳಿದಿದ್ದಾರೆ. ಇನ್ನೂ ಈ ಪ್ರಕರಣವು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ನಿರೀಕ್ಷೆಗಳಿವೆ.


  ಇನ್ನೂ ಶಿಲ್ಪಾಶೆಟ್ಟಿಯಿಂದ ಖಾಲಿ ಇರುವ ತೀರ್ಪುಗಾರರ ಸ್ಥಾನಕ್ಕೆ ಅವರ ಅನುಪಸ್ಥಿತಿಯಲ್ಲಿ ಕರೀಷ್ಮಾ ಕಪೂರ್​ ಅವರನ್ನು ಒಂದು ಸಂಚಿಕೆಗೆ ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿತ್ತು. ಮುಂದಿನ ಕೆಲವು ಸಂಚಿಕೆಗಳಲ್ಲಿ ತಾರಾ ಜೋಡಿ ನಟ ರಿತೇಶ್​ ದೇಶ್​ಮುಖ್ ಮತ್ತು ನಟಿ ಜೆನಿಲಿಯಾ ದೇಶ್​ಮುಖ್ ಅವರನ್ನು ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿದೆ. ಇನ್ನೂ ಶಿಲ್ಪಾ ಶೆಟ್ಟಿಯವರನ್ನು ಶಾಶ್ವತವಾಗಿ ಈ ಕಾರ್ಯಕ್ರಮದಿಂದ ಕೈ ಬಿಡಲು ವಾಹಿನಿ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


  ಕುಂದ್ರಾ ಪ್ರಕರಣ ಇನ್ನೊಂದು ತಿಂಗಳಲ್ಲಿ ಇತ್ಯರ್ಥವಾಗಲಿದ್ದು, ಶಿಲ್ಪಾ ಶೆಟ್ಟಿ ಈ ತಿಂಗಳಲ್ಲಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿದೆ.


  ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ಚಿತ್ರೀಕರಣ ಮತ್ತು ಆ್ಯಪ್​​ನಲ್ಲಿ ಬಿಡುಗಡೆ ಮಾಡಿದ ಆರೋಪದಡಿ ಜುಲೈ 19 ರಂದು ಬಂಧಿಸಲಾಗಿತ್ತು. ನೀಲಿ ಚಿತ್ರಗಳನ್ನು ತಯಾರಿಸಿ ಹಾಟ್ ಶಾಟ್ಸ್ ಎಂಬ ಆ್ಯಪ್ ನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ರಾಜ್​ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ.


  ಇದನ್ನೂ ಓದಿ: COVID-19: ಕೋವಿಡ್ ಲಸಿಕೆ ಅನುಮೋದನೆ ಪ್ರಸ್ತಾಪವನ್ನು ಹಿಂತೆಗೆದುಕೊಂಡ ಜಾನ್ಸನ್ ಅಂಡ್​ ಜಾನ್ಸನ್

  ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದಾರೆಯೇ ಎಂದು ಮುಂಬೈ ಪೊಲೀಸ್ ಅಪರಾಧ ವಿಭಾಗವು ತನಿಖೆ ಮಾಡಿದೆ. ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಶಿಲ್ಪಾ ಅವರ ಭಾಗಿದಾರಿಕೆ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಮುಂಬೈ ಪೊಲೀಸರು ಕಳೆದ ವಾರ ಮಾಹಿತಿ ನೀಡಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: