Porn case: ರಾಜ್​ ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣ: ನಟಿ ಶೆರ್ಲಿನ್​ ಚೋಪ್ರಾಗೆ ಜಾಮೀನು ನಿರಾಕರಣೆ

ತನಿಖೆಗೆ ಸಹಕರಿಸಲು ಚೋಪ್ರಾ ಸಿದ್ಧವಾಗಿದ್ದಾರೆ. ಆದರೆ, ಇತರೆ ಆರೋಪಿಗಳನ್ನು ಬಂಧಿಸಿರುವ ರೀತಿಯಲ್ಲಿ ತಮ್ಮನ್ನು ವಶಕ್ಕೆ ಪಡೆಯಬಹುದು ಎಂದು ಅವರು ಆತಂಕಿತರಾಗಿದ್ದಾರೆ ಎಂದಿದ್ದಾರೆ.

ಶರ್ಲಿನ್ ಚೋಪ್ರಾ

ಶರ್ಲಿನ್ ಚೋಪ್ರಾ

 • Share this:

  ಅಶ್ಲೀಲ ಚಿತ್ರ ಪ್ರಕರಣದಲ್ಲಿ ಉದ್ಯಮಿ ರಾಜ್‌ ಕುಂದ್ರಾ ಬಂಧನವಾಗಿರುವ ಹಿನ್ನೆಲೆಯಲ್ಲಿ ತನ್ನನ್ನೂ ವಶಕ್ಕೆ ಪಡೆಯಬಹುದು ಎಂಬ ಭೀತಿಯಿಂದ ನಟಿ ಶೆರ್ಲಿನ್‌ ಚೋಪ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ಮುಂಬೈ ಸೆಷನ್ಸ್‌ ನ್ಯಾಯಾಲಯ ವಜಾ ಮಾಡಿದೆ.   ನಟಿ ಶೆರ್ಲಿನ್ ಚೋಪ್ರಾ ಗುರುವಾರದಂದು ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಶ್ಲೀಲ ಚಿತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಮುಂಬೈನ ಕ್ರೈಂ ಬ್ರಾಂಚ್ ಪ್ರಾಪರ್ಟಿ ಸೆಲ್​ಗೆ​​ ಹೇಳಿಕೆ ನೀಡಿದ್ದಾರೆ. ಶೆರ್ಲಿನ್​ 2021 ಏಪ್ರಿಲ್​ ತಿಂಗಳಿನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣದಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದರು.


  ಚೋಪ್ರಾ ನಿರೀಕ್ಷಣಾ ಜಾಮೀನು ಮನವಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಸೋನಾಲಿ ಅಗರ್ವಾಲ್‌ ಅವರು ಆದೇಶ ಹೊರಡಿಸಿದ್ದಾರೆ.


  ಕಳೆದ ಫೆಬ್ರವರಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ಸಾಮಾಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ (ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾಗ್ರಿಗಳ ಪ್ರಸಾರ) ಮತ್ತು ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವ (ನಿಯಂತ್ರಣ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿರುವ ಎಫ್‌ಐಆರ್‌ನಿಂದಾಗಿ ತಮ್ಮ ಬಂಧನವಾಗಬಹುದು ಎಂದು ಚೋಪ್ರಾ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.


  ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಪ್ರಾ ಹೇಳಿಕೆ ದಾಖಲಿಸಿಕೊಳ್ಳುವ ಸಂಬಂಧ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 160ರ ಅಡಿ ಸಮನ್ಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ಜಾರಿ ಮಾಡದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರಣಕ್ಕಾಗಿ ಚೋಪ್ರಾ ಆತಂಕಗೊಂಡಿದ್ದಾರೆ ಎಂದು ಮಂಗಳವಾರ ವಕೀಲ ಸಿದ್ಧೇಶ್‌ ಬೋರ್​ಕರ್​ ವಾದಿಸಿದ್ದಾರೆ.


  ಎಫ್‌ಐಆರ್‌ನಲ್ಲಿ ಯಾವೆಲ್ಲಾ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂಬುದು ಚೋಪ್ರಾಗೆ ತಿಳಿದಿಲ್ಲ. ಆಕೆಗೆ ಎಫ್‌ಐಆರ್‌ ಪ್ರತಿ ಅಥವಾ ನಿರ್ದಿಷ್ಟ ಆರೋಪಗಳ ಬಗ್ಗೆ ಮಾಹಿತಿಯನ್ನೂ ಸಹ ಇವರಿಗೆ ನೀಡಿಲ್ಲ. ಹೀಗಾಗಿ, ಸತ್ಯಾಸತ್ಯತೆ ಪರಿಶೀಲಿಸದೇ ಜಾಮೀನು ರಹಿತ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿರುವುದರಿಂದ ತನ್ನನ್ನೂ ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ಆಕೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಪೀಠದ ಗಮನ ಸೆಳೆದಿದ್ದಾರೆ.


  ತನಿಖೆಗೆ ಸಹಕರಿಸಲು ಚೋಪ್ರಾ ಸಿದ್ಧವಾಗಿದ್ದಾರೆ. ಆದರೆ, ಇತರೆ ಆರೋಪಿಗಳನ್ನು ಬಂಧಿಸಿರುವ ರೀತಿಯಲ್ಲಿ ತಮ್ಮನ್ನು ವಶಕ್ಕೆ ಪಡೆಯಬಹುದು ಎಂದು ಅವರು ಆತಂಕಿತರಾಗಿದ್ದಾರೆ ಎಂದಿದ್ದಾರೆ.


  ಎಫ್‌ಐಆರ್‌ಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ ದಾಖಲಿಸುವಾಗಿನ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಅಪರಾಧದ ದೊಡ್ಡ ಜಾಲವೇ ಇದೆ ಎಂದು ಅರ್ಜಿಗೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.


  ಸಂತ್ರಸ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರನ್ನು ಪತ್ತೆ ಹಚ್ಚುವ ಕೆಲಸವನ್ನು ಅಪರಾಧ ವಿಭಾಗ ಮಾಡುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


  ತನಿಖೆ ನಡೆಸುತ್ತಿರುವಾಗ ಚೋಪ್ರಾ ಅವರು ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  ಅಶ್ಲೀಲ ಚಿತ್ರ ಪ್ರಕರಣ: ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್‌ ಕುಂದ್ರಾ


  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವವರ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಚೋಪ್ರಾ ಹೇಳಿಕೆ ದಾಖಲಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಹೇಳಿದ್ದಾರೆ.


  ಈ ಕಾರಣಕ್ಕಾಗಿ ಜುಲೈ 26ರಂದು ಚೋಪ್ರಾಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅಪರಾಧ ವಿಭಾಗದ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವುದನ್ನು ಬಿಟ್ಟು ಚೋಪ್ರಾ ಈಗ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಹೇಳಿದೆ.


  ವಾದ-ಪ್ರತಿವಾದಗಳನ್ನು ಆಲಿಸಿದ ಸೆಷನ್ಸ್‌ ನ್ಯಾಯಾಧೀಶರು ಚೋಪ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದರು.

  ಇದನ್ನೂ ಓದಿ: Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

  ನಟಿ ಶೆರ್ಲಿನ್ ನೀಡಿರುವ ದೂರಿನ ಪ್ರಕಾರ, 2019ರಲ್ಲಿ ರಾಜ್​ ಕುಂದ್ರಾ ಒಂದು ಆ್ಯಪ್​ ಬಿಜಿನೆಸ್​​ ಬಗ್ಗೆ ಮಾತನಾಡಲು​ ನನ್ನನ್ನು ಕರೆದಿದ್ದರು. ಬಿಜಿನೆಸ್​ ಮೀಟಿಂಗ್ ಮುಗಿದ ಬಳಿಕ, 2019ರ ಮಾರ್ಚ್ 27ರಂದು ರಾಜ್​ ಕುಂದ್ರಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು. ಇದರಿಂದ ನಮ್ಮ ನಡುವೆ ಜಗಳ ಉಂಟಾಯಿತು‘ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: