5 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣ ಎಂದಿದ್ದರು ಪ್ರಧಾನಿ: ಈ ಬಾರಿಯ ಮಳೆ ಮೋದಿ ಭವಿಷ್ಯ ಸೂಚಿಸುತ್ತಂತೆ..?


Updated:April 17, 2018, 8:06 AM IST
5 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣ ಎಂದಿದ್ದರು ಪ್ರಧಾನಿ: ಈ ಬಾರಿಯ ಮಳೆ ಮೋದಿ ಭವಿಷ್ಯ ಸೂಚಿಸುತ್ತಂತೆ..?

Updated: April 17, 2018, 8:06 AM IST
ನ್ಯೂಸ್ 18 ಕನ್ನಡ

ನವದೆಹಲಿ(ಏ.17): ಈ ಬಾರಿ ದೇಶದೆಲ್ಲೆಡೆ ಉತ್ತಮ ಮಳೆಯಾಗಲಿದೆ ಅನ್ನೋದು ಹವಾಮಾನ ಮುನ್ಸೂಚನೆ. ಈ ಮುನ್ಸೂಚನೆ ನಿಜವಾದ್ರೆ, ಪ್ರಧಾನಿ ಮೋದಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಲಿದೆ. ಅದು ಹೇಗೆ ಅಂತೀರಾ.. ಇಲ್ಲಿದೆ ವಿವರ

ದೇಶದಲ್ಲಿ ಅರ್ಧದಷ್ಟು ಮಳೆ ಆಧಾರಿತ ಕೃಷಿಕರೇ ಇರೋದು. ಮಳೆ ಯಾವ ರೀತಿ ಬರುತ್ತದೆ ಎನ್ನುವುದರ ಮೇಲೆ ಈ ರೈತರ ಭವಿಷ್ಯ ನಿರ್ಧಾರವಾಗತ್ತದೆ. ಆದರೆ ಈ ಬಾರಿಯ ಮಳೆ, ಪ್ರಧಾನಿ ಮೋದಿ ಭವಿಷ್ಯ ನಿರ್ಧರಿಸಲಿದೆ ಎಂದೇ ಬಣ್ಣಿಸಲಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈ ಬಾರಿ ದೇಶದೆಲ್ಲೆಡೆ ಉತ್ತಮ ಮಳೆ ಆಗಲಿದೆ. ಇದು ಮೋದಿಗೆ ಸಹಕಾರಿಯಾಗಲಿದೆ. ಅಕ್ಕಿ, ಗೋಧಿ, ಕಬ್ಬು, ಸೋಯಾಬೀನ್​ನಂತಹ ಬೆಳೆಗಳು ಮಳೆ ಮೇಲೇ ಅವಲಂಬಿತವಾಗಿವೆ. ಉತ್ತಮ ಮಳೆಯಾದರೆ, ರೈತರಿಗೆ ಉತ್ತಮ ಇಳುವರಿ ಸಿಗಲಿದೆ, ಉತ್ತಮ ಇಳುವರಿಯಿಂದ ಉತ್ತಮ ಲಾಭ ಸಿಗಲಿದೆ. ಅಂತಿಮವಾಗಿ ದೇಶದ ಆರ್ಥಿಕ ಪರಿಸ್ಥಿತಿ, ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ.

5 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣ ಮಾಡೋದಾಗಿ ಪ್ರಧಾನಿ ಮೋದಿ ಹೇಳಿದ್ರು. ಈ ಬಾರಿ ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾಗಿ, ಉತ್ತಮ ಮಳೆಯಾಗಿ, ರೈತರ ಆದಾಯ ಹೆಚ್ಚಾದರೆ, ಮೋದಿ ಕೊಟ್ಟ ಮಾತು ನಿಜವಾಗಲಿದೆ. ಇದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸಹಕಾರಿಯಾಗಲಿದೆ. ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ.

 
First published:April 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...