Tamil Nadu Rain: ಮಳೆಯ ಆರ್ಭಟಕ್ಕೆ ತತ್ತರಿಸಿದ ತಮಿಳುನಾಡು!

ತಮಿಳುನಾಡಿನ ಸೇಲಂ ನಗರದ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ವೃದ್ಧ ಮಹಿಳೆಯರು ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.

ತಮಿಳುನಾಡಿನ ಸೇಲಂ ನಗರದ ಪ್ರವಾಹ

ತಮಿಳುನಾಡಿನ ಸೇಲಂ ನಗರದ ಪ್ರವಾಹ

  • Share this:
ತಮಿಳುನಾಡಿನಲ್ಲೂ (Tamil Nadu) ಸಹ ವರುಣನ ಅಬ್ಬರ ಜೋರಾಗಿದೆ. ಇಲ್ಲಿ ಆಗಿರುವ ಅನಿರೀಕ್ಷಿತ ಧಾರಾಕಾರ ಮಳೆಯು ವಾಡಿಕೆಗಿಂತ ಎರಡು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ (Rain) ತಮಿಳುನಾಡಿನ ನದಿಗಳು ಮತ್ತು ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು, ವಿಶೇಷವಾಗಿ ಕಾವೇರಿ ಮತ್ತು ಕೊಲ್ಲಿಡಂ ನದಿ ಭಾಗದ ಜನರಿಗೆ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಸಾವು-ನೋವುಗಳ ಸಹ ಸಂಭವಿಸಿವೆ. ತಮಿಳುನಾಡಿನ ಸೇಲಂ ನಗರದ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ವೃದ್ಧ ಮಹಿಳೆಯರು (Old Women's) ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ ಸುರಿದ ಮಳೆ ಮತ್ತು ಕಾಲುವೆಗಳ ತಡೆಯಿಂದಾಗಿ ಮಂಗಳವಾರ ಸೇಲಂ ಕಾರ್ಪೊರೇಷನ್‌ನ ಎರಡು ಪ್ರದೇಶಗಳಲ್ಲಿನ ಮನೆಗಳಿಗೆ ನೀರು (Water) ನುಗ್ಗಿ ಇಬ್ಬರು ವೃದ್ಧೆಯರು ಹಾಸಿಗೆ ಮೇಲೆಯೇ ಸಾವನ್ನಪ್ಪಿದ್ದಾರೆ.

ಮನೆಗೆ ನುಗ್ಗಿದ ನೀರು.. ಇಬ್ಬರು ವೃದ್ದೆಯರ ಸಾವು
ನೆರೆಹೊರೆಯವರಿಂದ ಮಹಿಳೆಯರ ಸಾವಿನ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಮೃತ ಮಹಿಳೆಯರನ್ನು ಸಾಮಿನಾಥಪುರಂ ಬಳಿಯ ಡಾ.ರತ್ನಂ ಸ್ಟ್ರೀಟ್ ನಿವಾಸಿ ಪಳನಿಯಮ್ಮಾಳ್ (80) ಮತ್ತು ಪೆರಮನೂರಿನ ಗೋವಿಂದ ಗೌಂಡರ್ ತೊಟ್ಟಂ ನಿವಾಸಿ ರುಕ್ಮಣಿ (78) ಎಂದು ಗುರುತಿಸಿದ್ದಾರೆ.

ಇದನ್ನೂ ಓದಿ:  Crime News: ಅಮ್ಮನಿಗೆ ಮುಕ್ತಿ ಕೊಟ್ಟೆ, 77 ಪುಟದ ಡೆತ್​ನೋಟ್​ ಪತ್ತೆ: ಅವ್ವನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!

“ಇಬ್ಬರೂ ಮಹಿಳೆಯರೂ ಒಂಟಿಯಾಗಿ ವಾಸಿಸುತ್ತಿದ್ದರು. ಪಳನಿಯಮ್ಮಾಳ್ ನಡೆಯಲು ಸಹ ಕಷ್ಟಪಡುತ್ತಿದ್ದರು,” ಎಂದು ಮೂಲಗಳನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಪಲ್ಲಪಟ್ಟಿ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಎರಡೂ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ. ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ರಾಮಚಂದ್ರನ್, “ನಾವು ಮುಂಜಾನೆ 4 ಗಂಟೆಯಿಂದ ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದೇವೆ. ಮಳೆ ಸುರಿಯುತ್ತಿರುವುದರಿಂದ ಗೋವಿಂದ ಗೌಡರ ತೊಟ್ಟಂ ಮತ್ತು ಸಾಮಿನಾಥಪುರಂನಲ್ಲಿ ಕಾಲುವೆಗಳಿಗೆ ನೀರು ನುಗ್ಗಿ ಮನೆಗಳಿಗೆ ನುಗ್ಗಿದೆ.

ಕಾಲುವೆಗಳನ್ನು ತ್ವರಿತವಾಗಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಕಾಲುವೆಗಳಲ್ಲಿ ಕಸ ಸುರಿಯದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ತಿಳಿಸಿದರು.

ಸೇಲಂ-ಯೆರ್ಕಾಡ್ ರಸ್ತೆ 24 ಗಂಟೆಗಳ ಕಾಲ ಬಂದ್
ಸೇಲಂ-ಯೆರ್ಕಾಡ್ ಮುಖ್ಯ ರಸ್ತೆಯಲ್ಲಿ ಭೂಕುಸಿತ ಮತ್ತು ಮರಗಳು ಉರುಳಿ ಬಿದ್ದಿರುವುದರಿಂದ ಅಧಿಕಾರಿಗಳು ಸೋಮವಾರ ರಾತ್ರಿ 10 ರಿಂದ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ನಿರಂತರ ಭಾರೀ ಮಳೆಯ ಎಚ್ಚರಿಕೆ ಇರುವುದರಿಂದ ಬುಧವಾರ ಬೆಳಗ್ಗೆ 5 ಗಂಟೆಯವರೆಗೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಕಾರ್ಮೇಗಂ ತಿಳಿಸಿದ್ದರು.

ಮೆಟ್ಟೂರು ಅಣೆಕಟ್ಟಿನಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿದೆ. ಕಾವೇರಿ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರವಾಹದ ನೀರಿನಲ್ಲಿ ಸಿಲುಕಿದ ವ್ಯಕ್ತಿ ಸಾವು
ಕೃಷ್ಣಗಿರಿಯಲ್ಲಿ, ಹೊಸೂರು ಸಮೀಪದ ನಲ್ಲೂರು ಅಗ್ರಹಾರದ ಕಾರ್ಮಿಕ ಕೆ. ಮರಿಯಪ್ಪ (55) ಮಂಗಳವಾರ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಪೊಲೀಸ್‌ ಮೂಲಗಳ ಪ್ರಕಾರ, ರಸ್ತೆಯಲ್ಲಿ ಬಾಗೇಪಲ್ಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೊಬೈಲ್ ಫೋನ್ ನೀರಿನಲ್ಲಿ ಬಿದ್ದಿತು. ಅದನ್ನು ತೆಗೆದುಕೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಆದಾಗ್ಯೂ ಅಲ್ಲೇ ಇದ್ದ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರೂ ಸಹ ದುರದೃಷ್ಟವಶಾತ್‌ ಸಾವನ್ನಪ್ಪಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ನಲ್ಲೂರು ಅಗ್ರಹಾರದ ಗ್ರಾಮಸ್ಥರು ಮಳೆಯಲ್ಲಿಯೇ ಸುಮಾರು 5 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಬೇಗೇಪಲ್ಲಿ -ನಲ್ಲೂರು ಅಗ್ರಹಾರ ನಡುವೆ ಸೇತುವೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ:  Survivor Of Amazon Tribe: ಹೆಸರೇ ಇಲ್ಲದ, ಹೊರಜಗತ್ತಿನ ಸಂಪರ್ಕ ಇರದ ವ್ಯಕ್ತಿ ನಿಧನ

ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಕಳೆದ ಮೂರು ವಾರಗಳಿಂದ ಬೇಗೇಪಲ್ಲಿಯ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್‌ನಲ್ಲಿ ಓದುತ್ತಿರುವ ಬಾಗೂರು ಮತ್ತು ನಲ್ಲೂರು ಅಗ್ರಹಾರ ಗ್ರಾಮಗಳ 20 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದರು. 1.17 ಕೋಟಿಯಲ್ಲಿ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ ಬಿಡಿಒ ರಾಮಚಂದ್ರನ್, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
Published by:Ashwini Prabhu
First published: