ವಿಶೇಷ ರೈಲುಗಳ ಹೊರತು ಬೇರೆಲ್ಲಾ ಸೇವೆಗಳೂ ಅನಿರ್ದಿಷ್ಟಾವಧಿಗೆ ಸ್ಥಗಿತ; ಭಾರತೀಯ ರೈಲ್ವೆ ಪ್ರಕಟಣೆ

ಕೋವಿಡ್ ಕಾರಣದಿಂದಾಗಿ ಭಾರತೀಯ ರೈಲ್ವೆ ಸಾರಿಗೆ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಅಂದಾಜು 40,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:August 11, 2020, 8:54 PM IST
ವಿಶೇಷ ರೈಲುಗಳ ಹೊರತು ಬೇರೆಲ್ಲಾ ಸೇವೆಗಳೂ ಅನಿರ್ದಿಷ್ಟಾವಧಿಗೆ ಸ್ಥಗಿತ; ಭಾರತೀಯ ರೈಲ್ವೆ ಪ್ರಕಟಣೆ
ಭಾರತೀಯ ರೈಲ್ವೆ.
  • Share this:
ನವ ದೆಹಲಿ (ಆಗಸ್ಟ್‌ 11); ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು, ಮೊದಲೇ ನಿರ್ಧರಿಸಿದಂತೆ ಮತ್ತು ತಿಳಿಸಿದಂತೆ, ನಿಯಮಿತ ಪ್ರಯಾಣಿಕ ಮತ್ತು ಉಪನಗರ ರೈಲು ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗುವುದು. ಆದರೆ, 230 ವಿಶೇಷ ರೈಲುಗಳು ಸೇವೆಗಳು ಮಾತ್ರ ಮುಂದುವರೆಯಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಇಂದು ತಿಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತೀಯ ರೈಲ್ವೆ ಇಲಾಖೆ, "ಪ್ರಸ್ತುತ ಚಾಲನೆಯಲ್ಲಿರುವ 230 ವಿಶೇಷ ರೈಲುಗಳು ಚಾಲನೆಯಲ್ಲಿ ಮುಂದುವರಿಯಲಿವೆ. ಮುಂಬೈ ಮಹಾನಗರದಲ್ಲಿ ಸ್ಥಳೀಯ ರೈಲುಗಳು ಪ್ರಸ್ತುತ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸೀಮಿತ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿವೆ. ವಿಶೇಷ ರೈಲುಗಳ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲದೆ, ಅಗತ್ಯದ ಆಧಾರದ ಮೇಲೆ ಭವಿಷ್ಯದಲ್ಲಿ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸುವ ಸಾಧ್ಯತೆ ಇದೆ" ಎಂದು ತಿಳಿಸಲಾಗಿದೆ.

ಆದಾಗ್ಯೂ, ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಸಾಮಾನ್ಯ ಮತ್ತು ಉಪನಗರದ ರೈಲು ಸೇವೆ ಆರಂಭಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೆ, ಎಲ್ಲಾ ವಿಶೇಷ ರೈಲುಗಳು, ಮೇ 12 ರಿಂದ ರಾಜಧಾನಿ ಮಾರ್ಗಗಳಲ್ಲಿ ಆರಂಭಿಸಲಾಗಿದ್ದ 12 ಜೋಡಿ ರೈಲುಗಳು ಮತ್ತು ಜೂನ್ 1 ರಿಂದ ಆರಂಭಿಸಲಾಗಿದ್ದ 100 ಜೋಡಿ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ.

ಸ್ಥಳೀಯ ಅಧಿಕಾರಿಗಳಿಂದ ಗುರುತಿಸಲ್ಪಟ್ಟ ಅಗತ್ಯ ಸೇವೆಗಳ ಸಿಬ್ಬಂದಿಯನ್ನು ಕರೆದೊಯ್ಯಲು ಮುಂಬಯಿಯಲ್ಲಿ ಇತ್ತೀಚೆಗೆ ಪ್ರಾರಂಭವಾದ ಸೀಮಿತ ವಿಶೇಷ ಉಪನಗರ ಸೇವೆಗಳೂ ಸಹ ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ರಾಷ್ಟ್ರೀಯ ಸಾರಿಗೆದಾರರು ಆಗಸ್ಟ್ 12 ರವರೆಗೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ್ದರು.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ; ತನಿಖೆಗೆ ಆದೇಶಿಸಿದ ಸಿಎಂ ಯೋಗಿ ಆದಿತ್ಯನಾಥ್

ಕೋವಿಡ್ ಕಾರಣದಿಂದಾಗಿ ಭಾರತೀಯ ರೈಲ್ವೆ ಸಾರಿಗೆ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಅಂದಾಜು 40,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಪ್ರಸ್ತುತ ಸಕ್ರಿಯ COVID-19 ಪ್ರಕರಣಗಳು 6,39,929 ರಷ್ಟಿದ್ದರೆ, 15,83,489 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಂಗಳವಾರ, ಒಂದೇ ದಿನದ 53,601 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇನ್ನೂ ಸಾವಿನ ಸಂಖ್ಯೆ 45,257 ಕ್ಕೆ ಏರಿಕೆಯಾಗಿದೆ.
Published by: MAshok Kumar
First published: August 11, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading