ಹಬ್ಬದ ಸೀಸನ್​ನಲ್ಲಿ 200 ಹೆಚ್ಚುವರಿ ರೈಲುಗಳಿಗೆ ಚಾಲನೆ ಸಾಧ್ಯತೆ

ಹಬ್ಬಗಳ ಋತು ಎಂದೇ ಕರೆಯಲಾಗುವ ಅಕ್ಟೋಬರ್ 15ರಿಂದ ನವೆಂಬರ್ 30ರವರೆಗಿನ ಒಂದೂವರೆ ತಿಂಗಳ ಅವಧಿಯಲ್ಲಿ 200 ಹೆಚ್ಚುವರಿ ರೈಲುಗಳನ್ನ ದೇಶಾದ್ಯಂತ ಬಿಡಲು ರೈಲ್ವೆ ಇಲಾಖೆ ಯೋಜಿಸಿದೆ.

news18
Updated:October 1, 2020, 10:40 PM IST
ಹಬ್ಬದ ಸೀಸನ್​ನಲ್ಲಿ 200 ಹೆಚ್ಚುವರಿ ರೈಲುಗಳಿಗೆ ಚಾಲನೆ ಸಾಧ್ಯತೆ
ಸಾಂದರ್ಭಿಕ ಚಿತ್ರ
  • News18
  • Last Updated: October 1, 2020, 10:40 PM IST
  • Share this:
ನವದೆಹಲಿ(ಅ. 01): ಇನ್ನೆರಡು ವಾರಗಳ ನಂತರ ದೇಶಾದ್ಯಂತ ಹಬ್ಬಗಳ ಸೀಸನ್ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಜನರ ಓಟಾಟ ಅತ್ಯಧಿಕವಾಗಿರುತ್ತದೆ. ಪರವೂರಿನಲ್ಲಿ ಕೆಲಸ ಮಾಡುತ್ತಿದ್ದವರು ತಮ್ಮ ತಮ್ಮ ಊರುಗಳಿಗೆ ಮರಳುವ ಸಂದರ್ಭವದು. ಈ ನಿಟ್ಟಿನಲ್ಲಿ ಜನರ ಅವಶ್ಯಕತೆ ಪರಿಗಣಿಸಿ 200ಕ್ಕೂ ಹೆಚ್ಚು ರೈಲುಗಳನ್ನ ಹೆಚ್ಚುವರಿಯಾಗಿ ಬಿಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಈ ಹೆಚ್ಚುವರಿ ರೈಲುಗಳು ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಸೇವೆಯಲ್ಲಿರಲಿವೆ. ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಈ ವಿಚಾರವನ್ನು ಆನ್​ಲೈನ್ ಪತ್ರಿಕಾ ಗೋಷ್ಠಿಯ ವೇಳೆ ತಿಳಿಸಿದ್ದಾರೆ. ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದವರು ಸ್ಪಷ್ಟಪಡಿಸಿದ್ದಾರೆ.

“ರಾಜ್ಯಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಹಬ್ಬದ ಋತುವಿನಲ್ಲಿ ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ 200 ರೈಲುಗಳಿಗೆ ಚಾಲನೆ ಕೊಡಬೇಕೆಂದಿದ್ದೇವೆ” ಎಂದು ಯಾದವ್ ತಿಳಿಸಿದ್ದಾರೆ. ಕೋವಿಡ್-19 ಬಿಕ್ಕಟ್ಟು ಬಂದ ಬಳಿಕ ದೇಶಾದ್ಯಂತ ಲಾಕ್​ಡೌನ್ ಅವಧಿಯವರೆಗೆ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಮಧ್ಯದಲ್ಲಿ ಕಾರ್ಮಿಕರನ್ನು ಅವರ ಊರಿಗೆ ಮರಳಿಸಲು ವಿಶೇಷ ಶ್ರಮಿಕ ರೈಲುಗಳನ್ನ ಬಿಡಲಾಯಿತು. ಅನ್​ಲಾಕ್ ಪ್ರಕ್ರಿಯೆ ಹಂತಹಂತವಾಗಿ ಜಾರಿಯಾಗಲು ಆರಂಭಿಸಿದಾಗ ನಿರ್ದಿಷ್ಟ ಮಾರ್ಗಗಳಲ್ಲಿ ಬೆರಳೆಣಿಕೆಯ ರೈಲುಗಳನ್ನಷ್ಟೇ ಬಿಡಲಾಗಿದೆ. ಈಗ ದೇಶಾದ್ಯಂತ ಸುಮಾರು 300 ಪ್ರಯಾಣಿಕ ರೈಲುಗಳು ಚಾಲನೆಯಲ್ಲಿವೆ. ಆದರೆ, ಸರಕು ಸಾಗಣೆ ರೈಲುಗಳು ಕೋವಿಡ್ ಇದ್ದರೂ ನಿರಂತರವಾಗಿ ಸೇವೆಯಲ್ಲಿವೆ.

ಇದನ್ನೂ ಓದಿ: ಹಾಥ್ರಸ್ ರೇಪ್ ಪ್ರಕರಣ: ಪ್ರಿಯಾಂಕಾ, ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ; ಉತ್ತರ ಪ್ರದೇಶದಾದ್ಯಂತ ಕೈ ಪ್ರತಿಭಟನೆ

ಇದೇ ವೇಳೆ, ಕೆಲ ಮಾರ್ಗಗಳಲ್ಲಿ ರೈಲ್ವೆ ಇಲಾಖೆ ಕ್ಲೋನ್ ರೈಲುಗಳನ್ನ ಬಿಟ್ಟಿದೆ. ಕಡಿಮೆ ನಿಲುಗಡೆ, ಹೆಚ್ಚು ವೇಗದ ಈ ಕ್ಲೋನ್ ರೈಲುಗಳು ಮಾಮೂಲಿಯ ರೈಲಿಗಿಂತ ಬಹಳ ಬೇಗ ತಮ್ಮ ನಿಲ್ದಾಣ ತಲುಪುತ್ತವೆ. ಈ ಕ್ಲೋನ್ ರೈಲುಗಳು ಈಗ ಶೇ. 60ರಷ್ಟು ಭರ್ತಿಯಲ್ಲಿ ಸೇವೆ ನೀಡುತ್ತಿವೆ.
Published by: Vijayasarthy SN
First published: October 1, 2020, 10:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading