ಭಾರಿ ಮಳೆಯ ನಡುವೆ 7 ಕಿ.ಮೀ ನಡೆದುಕೊಂಡು ಹೋಗಿ ಸಂವಹನ ವ್ಯವಸ್ಥೆ ಸರಿಪಡಿಸಿದ ರೈಲ್ವೆ ಉದ್ಯೋಗಿ..!

ಉನ್ನತ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು, ಭಾರಿ ಮಳೆಯಿಂದಾಗಿ ಹಳಿಗಳು ನೀರಿನಲ್ಲಿ ಮುಳುಗುತ್ತಿರುವ ಸಮಯದಲ್ಲೇ ರಾಹುಲ್‌ ಧೈರ್ಯ ಕೆಡದೆ ಸಂವಹನ ಸಾಧನ ಸರಿಪಡಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇತರ ಯಾವುದೇ ಸಿಬ್ಬಂದಿಯಂತೆ, ಮಧ್ಯರಾತ್ರಿಯಲ್ಲಿ ಭಾರೀ ಮಳೆಯಾದಾಗ ಅಸಮರ್ಪಕವಾದ ಸಂವಹನ ವ್ಯವಸ್ಥೆಯನ್ನು ಸರಿಪಡಿಸಲು ರಾಹುಲ್ ನಿರಾಕರಿಸಬಹುದಾಗಿತ್ತು.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

 • Share this:

  ಕೋಟಾ ರೈಲ್ವೇ ವಿಭಾಗದ ಉದ್ಯೋಗಿಯೊಬ್ಬರು ಎಲ್ಲರಿಗೂ ಮಾದರಿಯಾಗುವಂತ ಕೆಲಸ ಮಾಡಿದ್ದಾರೆ. ಅವರ ಕೆಲಸ ಸ್ಫೂರ್ತಿಮಯವಾಗಿದೆ. ಅವರ ಮಾದರಿಯ ಕೆಲಸ ಈಗ ಇಂಟರ್‌ನೆಟ್‌ನಲ್ಲಿ ಸುದ್ದಿ ಮಾಡುತ್ತಿದೆ. ಬನ್ನಿ ಆ ಮಾದರಿಯ ಕೆಲಸ ಕುರಿತು ಇನ್ನಷ್ಟು ತಿಳಿಯೋಣ.


  ಭಾರತೀಯ ರೈಲ್ವೆಯ ಈ ಉದ್ಯೋಗಿಯು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ತಮ್ಮ ಕೆಲಸ ಮಾಡಲು ಹಿಂಜರಿಯಲಿಲ್ಲ. ರಾತ್ರಿಯ ಧಾರಾಳಾವಾದ ಮಳೆಯ ನಡುವೆಯೂ ಭಾರತೀಯ ರೈಲ್ವೆಯ ಈ ಉದ್ಯೋಗಿಯು 7 ಕಿಲೋಮೀಟರುಗಳಷ್ಟು ದೂರ ನಡೆದುಕೊಂಡು ಹೋಗಿ ಧೈರ್ಯದಿಂದ ರೈಲುಗಳ ಟ್ರ್ಯಾಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂವಹನ ಸಾಧನವನ್ನು ಸರಿಪಡಿಸಿದ್ದಾರೆ. ಈ ಕೆಲಸವೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


  ರೈಲ್ವೇ ಇಲಾಖೆಯ ಕೋಟಾ ಲಾಹ್ರಿಯಲ್ಲಿ ಎಂಸಿಎಫ್ ಆಗಿ ಸೇವೆ ಸಲ್ಲಿಸುತ್ತಿರುವ ರಾಹುಲ್‌ಗೆ ರೈಲ್ವೇ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು, ಭಾರಿ ಮಳೆಯಿಂದಾಗಿ ಹಳಿಗಳು ನೀರಿನಲ್ಲಿ ಮುಳುಗುತ್ತಿರುವ ಸಮಯದಲ್ಲೇ ರಾಹುಲ್‌ ಧೈರ್ಯ ಕೆಡದೆ ಸಂವಹನ ಸಾಧನ ಸರಿಪಡಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇತರ ಯಾವುದೇ ಸಿಬ್ಬಂದಿಯಂತೆ, ಮಧ್ಯರಾತ್ರಿಯಲ್ಲಿ ಭಾರೀ ಮಳೆಯಾದಾಗ ಅಸಮರ್ಪಕವಾದ ಸಂವಹನ ವ್ಯವಸ್ಥೆಯನ್ನು ಸರಿಪಡಿಸಲು ರಾಹುಲ್ ನಿರಾಕರಿಸಬಹುದಾಗಿತ್ತು.


  ಆದರೆ, ಇವರು ಅ ರೀತಿ ಮಾಡಲಿಲ್ಲ. ಕೆಲಸ ಮಾಡಲು ಮುಂದಾದರು, ಹಾಗೂ ಈ ರೈಲ್ವೆ ಉದ್ಯೋಗಿಯು ಕತ್ತಲ ರಾತ್ರಿಯಲ್ಲಿ ಹಳಿಗಳ ಉದ್ದಕ್ಕೂ ಏಳು ಕಿಲೋಮೀಟರಷ್ಟು ನಡೆದುಕೊಂಡು ಹೋಗಲು ನಿರ್ಧರಿಸಿ, ಛಲ ಬಿಡದೆ ಹಿಡಿದ ಕೆಲಸವನ್ನು ಮುಗಿಸಿ ಬಂದಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.


  ಡಿಆರ್‌ಎಂ ಪಂಕಜ್ ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳು ಮಧ್ಯರಾತ್ರಿ ಸುರಿಯುತ್ತಿದ್ದ ಜೋರು ಮಳೆಯ ನಡುವೆಯೂ ಸಂವಹನ ವ್ಯವಸ್ಥೆ ಸರಿಪಡಿಸಿದ್ದಕ್ಕಾಗಿ ರಾಹುಲ್ ಸಾಹಸವನ್ನು ಪ್ರಶಂಸಿಸುತ್ತಿದ್ದಾರೆ.


  "ಆಗಸ್ಟ್ 3 ರ ಮಧ್ಯರಾತ್ರಿ 1:30 ರ ಸುಮಾರಿಗೆ ನಮ್ಮ ಸಂವಹನ ಸಾಧನಗಳು ಲೆವೆಲ್ ಕ್ರಾಸಿಂಗ್ ಸಂಖ್ಯೆ 137 ಮತ್ತು ನಮ್ಮ ಟ್ರ್ಯಾಕ್ ಸರ್ಕ್ಯೂಟ್‌ಗಳು ಮತ್ತು ಲೇಕೇರಿ ಹಾಗೂ ಇಂದ್ರಗಢದ ನಡುವಿನ ಹೊಲದಲ್ಲಿ ಸ್ಥಾಪಿಸಲಾದ ಪಾಯಿಂಟ್ ಯಂತ್ರದಲ್ಲಿ ಭಾರೀ ಮಳೆಯಿಂದಾಗಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಂತರ ಟ್ರ್ಯಾಕ್ ಸರ್ಕ್ಯೂಟ್ ಮತ್ತು ಪಾಯಿಂಟ್ ಯಂತ್ರದ ವೈಫಲ್ಯದಿಂದ ನಮ್ಮ ಸಂವಹನ ಜಾಲ ವಿಫಲವಾಗಿದೆ ಎಂದು ತಿಳಿದ ಕೂಡಲೇ ನಮ್ಮ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು. ಹಾಗೂ ಆ ಸಮಯದಲ್ಲಿ ಇಂದ್ರಗಢದಲ್ಲಿ ರಾತ್ರಿಯ ಕರ್ತವ್ಯದಲ್ಲಿದ್ದ ರಾಹುಲ್ ನೂರಾರು ಪ್ರಯಾಣಿಕರನ್ನು ರಕ್ಷಿಸಿದರು ಎಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ.


  "ಈ ಚಿಕ್ಕ ಹುಡುಗ ಸುಮಾರು ಎರಡು ಕಿಲೋಮೀಟರ್ ನಡೆದರು. ಮೊದಲು ಲೆವೆಲ್ ಕ್ರಾಸಿಂಗ್ ಸಂಖ್ಯೆ 137ರಲ್ಲಿ ಅಸಮರ್ಪಕ ಸಂವಹನ ಸಾಧನವನ್ನು ಸರಿಪಡಿಸಿದರು, ನಂತರ ಪಾಯಿಂಟ್ ಮೆಷಿನ್ ಮತ್ತು ಟ್ರ್ಯಾಕ್ ಸರ್ಕ್ಯೂಟ್ ಸರಿಪಡಿಸಲು ಮತ್ತೆ ಜೋರಾಗಿ ಗಾಳಿ, ಗುಡುಗು ಸಹಿತ ಭಾರೀ ಮಳೆಯ ನಡುವೆಯು 7 ಕಿಲೋಮೀಟರ್ ನಡೆದುಕೊಂಡು ನಮ್ಮ ನೆಟ್ವರ್ಕ್ ವ್ಯವಸ್ಥೆ ಸರಿಪಡಿಸಿದರು ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: ಕಾಂಗ್ರೆಸ್‍ ಪಕ್ಷದ್ದು ಹಿಟ್ ಆ್ಯಂಡ್ ರನ್ ಪಾಲಿಸಿ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಂಗ್ಯ

  ರಾಹುಲ್ ಕೆಲಸವು ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದೆ. ನಾವು ಈ ರೀತಿಯ ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಜನರನ್ನು ಪ್ರೋತ್ಸಾಹಿಸಬೇಕು ಮತ್ತು ಇಂತಹ ಕಠಿಣ ಸವಾಲು ಎದುರಿಸುವ ಗುಣವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: