• Home
  • »
  • News
  • »
  • national-international
  • »
  • Agnipath: ರೈಲಿಗೆ 'ಅಗ್ನಿ' ಸ್ಪರ್ಶ, ಇಲಾಖೆಗೆ 700 ಕೋಟಿ ನಷ್ಟ! ಇನ್ನೂ ನಿಂತಿಲ್ಲ ವಿರೋಧಿಗಳ ಹೋರಾಟ

Agnipath: ರೈಲಿಗೆ 'ಅಗ್ನಿ' ಸ್ಪರ್ಶ, ಇಲಾಖೆಗೆ 700 ಕೋಟಿ ನಷ್ಟ! ಇನ್ನೂ ನಿಂತಿಲ್ಲ ವಿರೋಧಿಗಳ ಹೋರಾಟ

ಪ್ರತಿಭಟನಾಕಾರರ ಆಕ್ರೋಶಕ್ಕೆ ಹೊತ್ತಿ ಉರಿದ ರೈಲು

ಪ್ರತಿಭಟನಾಕಾರರ ಆಕ್ರೋಶಕ್ಕೆ ಹೊತ್ತಿ ಉರಿದ ರೈಲು

ಬಿಹಾರದಲ್ಲಿ ಅಗ್ನಿಪಥ್ ವಿರೋಧಿ ಹೋರಾಟ ಜೋರಾಗಿದೆ. ಉದ್ರಿಕ್ತ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹೆಚ್ಚಾಗಿದೆ. ಕೇವಲ ನಾಲ್ಕು ದಿನಗಳಲ್ಲಿ ಭಾರತೀಯ ರೇಲ್ವೆ ಇಲಾಖೆಗೆ 700 ಕೋಟಿ ರೂಪಾಯಿ ನಷ್ಟವಾಗಿದೆ.

  • Share this:

ಬಿಹಾರ: ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆ (Agnipath Project) ವಿರುದ್ಧ ವಿರೋಧಿಗಳ ಸಿಟ್ಟು ಇನ್ನೂ ತಣ್ಣಗಾಗಿಲ್ಲ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದೂ ಸಹ ಪ್ರತಿಭಟನೆ ಮುಂದುವರೆದಿದೆ. ಬಿಹಾರದಲ್ಲಂತೂ (Bihar) ಪರಿಸ್ಥಿತಿ ಕೈಮೀರುತ್ತಿದೆ. ಆಕ್ರೋಶಿತರ ಗುಂಪು ರೈಲುಗಳನ್ನೇ (Rail) ಗುರಿಯಾಗಿಸಿ ದಾಳಿ ನಡೆಸುತ್ತಿದೆ. ರೈಲುಗಳಿಗೆ ಬೆಂಕಿ (Fire) ಹಚ್ಚಿ ದಾಂಧಲೆ ಎಬ್ಬಿಸುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ 11 ಇಂಜಿನ್‌ಗಳ (Engine) ಜೊತೆಗೆ 60 ರೈಲುಗಳ ಬೋಗಿಗಳನ್ನು (Railway Boogies) ಪ್ರತಿಭಟನಾಕಾರರು ಸುಟ್ಟಿದ್ದಾರೆ. ಇದರಿಂದಾಗಿ ರೈಲ್ವೆ ಇಲಾಖೆಗೆ (Railway Department) ಬರೋಬ್ಬರಿ 700 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ಯಂತೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 138 ಎಫ್‌ಐಆರ್‌ಗಳು (FIR) ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ (Arrest) ಅಂತ ವರದಿಯಾಗಿದೆ.


 ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, 700 ಕೋಟಿ ನಷ್ಟ


ಬಿಹಾರದಲ್ಲಿ ಅಗ್ನಿಪಥ್ ವಿರೋಧಿ ಹೋರಾಟ ಜೋರಾಗಿದೆ. ಉದ್ರಿಕ್ತ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹೆಚ್ಚಾಗಿದೆ. ಕೇವಲ ನಾಲ್ಕು ದಿನಗಳಲ್ಲಿ ಭಾರತೀಯ ರೇಲ್ವೆ ಇಲಾಖೆಗೆ 700 ಕೋಟಿ ರೂಪಾಯಿ ನಷ್ಟವಾಗಿದೆ.


ರೈಲ್ವೆ ನಿಲ್ದಾಣಗಳಲ್ಲಿ ಪ್ರತಿಭಟನಾಕಾರರಿಂದ ದಾಂಧಲೆ


ಕಳೆದ ನಾಲ್ಕು ದಿನಗಳಲ್ಲಿ 11 ಇಂಜಿನ್‌ಗಳ ಜೊತೆಗೆ 60 ರೈಲುಗಳ ಬೋಗಿಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಇದಲ್ಲದೇ ರೈಲ್ವೇ ನಿಲ್ದಾಣಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ರೈಲ್ವೆ ಇಲಾಖೆಗೆ ಸೇರಿದ ಇತರೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ.


ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?


ಆಸ್ತಿ ಹಾನಿಯ ಅಂದಾಜಿನ ಲೆಕ್ಕ ಇನ್ನೂ ಸಿಕ್ಕಿಲ್ಲ


ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಒಂದು ಸಾಮಾನ್ಯ ಕೋಚ್ ನಿರ್ಮಿಸಲು 80 ಲಕ್ಷ ರೂ., ಸ್ಲೀಪರ್ ಕೋಚ್ ಮತ್ತು ಎಸಿ ಕೋಚ್‌ಗೆ ಕ್ರಮವಾಗಿ 1.25 ಕೋಟಿ ಮತ್ತು 3.5 ಕೋಟಿ ರೂ. ಒಂದು ರೈಲ್ ಇಂಜಿನ್ ನಿರ್ಮಿಸಲು 20 ಕೋಟಿ ರೂ. 12 ಬೋಗಿಗಳ ಪ್ಯಾಸೆಂಜರ್ ರೈಲಿಗೆ 40 ಕೋಟಿ ರೂ. ಮತ್ತು 24 ಬೋಗಿಗಳ ರೈಲಿಗೆ 70 ಕೋಟಿ ರೂ. ವೆಚ್ಚವಾಗುತ್ತದೆ. ಆಸ್ತಿ ಹಾನಿಯ ಅಂದಾಜುಗಳನ್ನು ಇನ್ನೂ ಮಾಡಲಾಗುತ್ತಿದೆ ಅಂತ ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ.


ಇದುವರೆಗೂ 138 ಎಫ್‌ಐಆರ್‌, 718 ಮಂದಿ ಅರೆಸ್ಟ್


ಇನ್ನು ಗಲಭೆಗೆ ಸಂಬಂಧಿಸಿದಂತೆ ಡುವೆ ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಬಿಹಾರದಲ್ಲಿ 250 ಕ್ಕೂ ಹೆಚ್ಚುಜನರನ್ನು ಬಂಧಿಸಲಾಗಿದೆ. ಮೂರು ದಿನಗಳಲ್ಲಿ ಒಟ್ಟು 138 ಎಫ್‌ಐಆರ್‌ಗಳು ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯಲ್ಲಿ ತೊಡಗಿರುವವರ ಬಂಧನಕ್ಕಾಗಿ ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಅಂತ ಮೂಲಗಳು ತಿಳಿಸಿವೆ.


ಇದನ್ನೂ ಓದಿ: Agnipath: ಒಂದೆಡೆ ಹೊತ್ತಿ ಉರಿಯುತ್ತಿರುವ 'ಅಗ್ನಿ', ಮತ್ತೊಂದೆಡೆ ಮೀಸಲಾತಿ! ಅಗ್ನಿವೀರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್


ರಾಜನಾಥ್ ಸಿಂಗ್ ಮಹತ್ವದ ಸಭೆ


ಇನ್ನು ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿನ್ನೆ ಮಹತ್ವದ ಸಭೆ ನಡೆಸಿದರು. ನವದೆಹಲಿಯ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ರಾಜನಾಥ್ ಸಿಂಗ್, ಅಗ್ನಿಪಥ್ ಯೋಜನೆಯ ಕುರಿತು ಪುನರ್ ಪರಿಶೀಲನೆ ನಡೆಸಿದ್ರು. ಈ ಸಭೆಯಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರು ಭಾಗಿಯಾಗಿದ್ದರು. ಇನ್ನು ಇಂದೂ ಕೂಡ ಮತ್ತೊಂದು ಹಂತದ ಮಹತ್ವದ ಸಭೆ ಈಗಾಗಲೆೇ ಆರಂಭವಾಗಿದೆ.

Published by:Annappa Achari
First published: