Union Budget 2022: ಹಲವು ನಗರಗಳಿಗೆ ವಂದೇ ಭಾರತ್ ರೈಲು ಸಂಚಾರ ಸಾಧ್ಯತೆ: ಈ 5 ಪ್ರಮುಖ ಘೋಷಣೆಗಳು ಆಗುತ್ತಾ?

ಈ ಬಜೆಟ್‌ನಲ್ಲಿ ಹಲವು ಹೊಸ ರೈಲುಗಳ (New Railway) ಆರಂಭವನ್ನು ರೀಕ್ಷಿಸಲಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದರೆ ಈ ಬಜೆಟ್‌ನಲ್ಲಿ, ರೈಲ್ವೆಯಲ್ಲಿ ಇನ್ನೂ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Union Budget 2022: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ದೇಶದ ಸಾಮಾನ್ಯ ಬಜೆಟ್ (Aam Budget) ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರು ಏನು ಘೋಷಣೆ ಮಾಡುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿ ಜನರ ಕಣ್ಣು ಕೂಡ 2022ರ ರೈಲು ಬಜೆಟ್‌ (Railway Budget) ಮೇಲೆ ಇರುತ್ತದೆ. ಈ ಬಜೆಟ್‌ನಲ್ಲಿ ಹಲವು ಹೊಸ ರೈಲುಗಳ (New Railway) ಆರಂಭವನ್ನು ನಿರೀಕ್ಷಿಸಲಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದರೆ ಈ ಬಜೆಟ್‌ನಲ್ಲಿ, ರೈಲ್ವೆಯಲ್ಲಿ ಇನ್ನೂ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತದೆ. ಈ ಬಾರಿ  ರೈಲ್ವೇ ಬಜೆಟ್ ನಲ್ಲಿ ಐದು ಘೋಷಣೆಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.

1.300 ವಂದೇ ಭಾರತ್ ರೈಲುಗಳ ಘೋಷಣೆ ಸಾಧ್ಯತೆ

ಕಳೆದ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಯವರು ಭಾರತದ 75 ನಗರಗಳನ್ನು ಸಂಪರ್ಕಿಸಲು ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ್ದರು. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ರೈಲುಗಳ ಘೋಷಣ ಮಾಡುವ ಸಾಧ್ಯತೆ ಇದೆ.

ವಂದೇ ಭಾರತ್ ರೈಲುಗಳು ದೇಶದ ಹೆಚ್ಚಿನ ನಗರಗಳನ್ನು ಸಂಪರ್ಕಿಸುತ್ತವೆ. ಅಂದರೆ ಶತಾಬ್ದಿ ಹೊರತುಪಡಿಸಿ, ವಂದೇ ಭಾರತ್ ರೈಲುಗಳನ್ನು ಇಂಟರ್‌ಸಿಟಿ ರೈಲುಗಳಂತೆ ಅನೇಕ ಪ್ರಮುಖ ಮಾರ್ಗಗಳಲ್ಲಿ ಪ್ರಾರಂಭಿಸಲಾಗುವುದು.

ಇದನ್ನೂ ಓದಿ:  Union Budget 2022: ಬಜೆಟ್ ಮಂಡನೆ ವೇಳೆ ಕ್ಷಮೆ ಕೇಳಿದ್ರು ಇಂದಿರಾ ಗಾಂಧಿ; Black Budget ಮಂಡಿಸಿದ್ಯಾರು?

2.LHB ಕೋಚ್‌ಗಳೊಂದಿಗೆ 100 ರೈಲುಗಳನ್ನು ತಯಾರಿಸುವ ಗುರಿ

ಮುಂಬರುವ ಬಜೆಟ್ ವರ್ಷದಲ್ಲಿ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ 100 ರೈಲುಗಳನ್ನು ತಯಾರಿಸುವ ಗುರಿಯನ್ನು ನಿಗದಿಪಡಿಸಬಹುದು. ಇವುಗಳು ಜರ್ಮನ್ ವಿನ್ಯಾಸ ಕೋಚ್‌ಗಳಾಗಿವೆ. ಪ್ರಸ್ತುತ, ಭಾರತದಲ್ಲಿ ಹಳೆಯ ಕೋಚ್ ರೈಲುಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಿಸುವ ಮೂಲಕ LHB ಕೋಚ್ ರೈಲುಗಳನ್ನು ಓಡಿಸಲಾಗುತ್ತಿದೆ.

3.ಅಲ್ಯೂಮಿನಿಯಂ ಕೋಚ್ ಮೇಲ್-ಎಕ್ಸ್‌ಪ್ರೆಸ್ ರೈಲುಗಳ ನಿರ್ಮಾಣದ ಘೋಷಣೆ

ಈ ಬಜೆಟ್‌ನಲ್ಲಿ ಅಲ್ಯೂಮಿನಿಯಂ ಕೋಚ್‌ಗಳ ಮೇಲ್-ಎಕ್ಸ್‌ಪ್ರೆಸ್ ರೈಲುಗಳ ಘೋಷಣೆಯಾಗುವ ಸಾಧ್ಯತೆ ಇದೆ. ಆದ್ರೆ ಇಂತಹ ರೈಲಿನ ವೆಚ್ಚವು LHB ಗಿಂತ 2.5 ಪಟ್ಟು ಹೆಚ್ಚಾಗಿರುತ್ತದೆ. ಆದರೆ ಇದು ಕಡಿಮೆ ಶಕ್ತಿಯನ್ನು ಬಳಸುತ್ತದೆ. ಅಲ್ಯೂಮಿನಿಯಂ ಕೋಚ್ ಮೇಲ್ ಹಗುರವಾಗಿರುತ್ತವೆ ಮತ್ತು 160 ಕಿಮೀ ವೇಗದಲ್ಲಿ ಚಲಿಸಲು ಸುಲಭವಾಗುತ್ತದೆ. ಈ ರೈಲುಗಳು ಇಂಜಿನ್‌ಗಳನ್ನು ಹೊಂದಿರಲ್ಲ. ವಂದೇ ಭಾರತ್‌ನಂತೆ ಸ್ವಯಂ ಚಾಲಿತವಾಗಿ ಚಲಿಸುತ್ತವೆ. ಅಲ್ಲದೆ, ಟಿಲ್ಟಿಂಗ್ ತಂತ್ರಜ್ಞಾನದಿಂದಾಗಿ ಬಾಗಿದ / ತಿರುವು ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಕಡಿಮೆ ಮಾಡುವ ಅಗತ್ಯವಿಲ್ಲ.

4.MEMU ಬದಲಿಗೆ AC ರೈಲುಗಳ ನಿರ್ಮಾಣದ ಘೋಷಣೆ ಸಾಧ್ಯತೆ

ಸಾಮಾನ್ಯ ಬಜೆಟ್‌ನಲ್ಲಿ MEMU (MEMU- Mainline Electric Multiple Unit) ಬದಲಿಗೆ AC ರೈಲುಗಳನ್ನು ಘೋಷಿಸಬಹುದು. ಸಂಚರಿಸುತ್ತಿರುವಾಗ ಎಸಿ ರೈಲುಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆದ್ದರಿಂದ AC ರೈಲುಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ:  Budget 2022: ಇಂದು ಕೇಂದ್ರ ವಿತ್ತ ಸಚಿವರಿಂದ ಬಜೆಟ್​ ಮಂಡನೆ; ಹೆಚ್ಚಿದ ನಿರೀಕ್ಷೆ

5.ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಬಹುದು

ಇತ್ತೀಚಿನ ದಿನಗಳಲ್ಲಿ ರೈಲ್ವೇಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಾದದ ನಂತರ, ಈ ಬಗ್ಗೆಯೂ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಮೂಲಗಳ ಪ್ರಕಾರ, ರೈಲ್ವೆ ನೇಮಕಾತಿಯನ್ನು ಭವಿಷ್ಯದಲ್ಲಿ ಯಾವುದೇ ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಬಹುದು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ನರೇಂದ್ರ ಮೋದಿ ಸರ್ಕಾರದ (Modi Govt) 10 ನೇ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕತೆಯ ಮೇಲೆ ಕೊರೊನಾ ನೆರಳಿನ ನಡುವೆ ಮಂಡಿಸುತ್ತಿರುವ ಸತತ ಎರಡನೇ ಬಜೆಟ್ ಇದಾಗಿದೆ.
Published by:Mahmadrafik K
First published: