• Home
  • »
  • News
  • »
  • national-international
  • »
  • ಕರ್ನಾಟಕಕ್ಕೆ 5 ಸೇರಿ ದೇಶಾದ್ಯಂತ ಮತ್ತಷ್ಟು 39 ವಿಶೇಷ ರೈಲುಗಳಿಗೆ ಒಪ್ಪಿಗೆ

ಕರ್ನಾಟಕಕ್ಕೆ 5 ಸೇರಿ ದೇಶಾದ್ಯಂತ ಮತ್ತಷ್ಟು 39 ವಿಶೇಷ ರೈಲುಗಳಿಗೆ ಒಪ್ಪಿಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಶವಂತಪುರದಿಂದ ಕಾಮಾಕ್ಯ, ಬಾರ್ಮರ್ ಮತ್ತು ಹೌರಾ ನಗರಗಳಿಗೆ ವಾರಕ್ಕೊಮ್ಮೆ ರೈಲುಗಳು; ಹಾಗು ಚೆನ್ನೈ ಮತ್ತು ಬೆಂಗಳೂರು ಮಧ್ಯೆ 2 ರೈಲುಗಳು ಸೇರಿದಂತೆ ದೇಶಾದ್ಯಂತ 39 ವಿಶೇಷ ಹೆಚ್ಚುವರಿ ರೈಲುಗಳಿಗೆ ಮಂಡಳಿ ಅನುಮೋದನೆ ನೀಡಿದೆ.

  • News18
  • Last Updated :
  • Share this:

    ಬೆಂಗಳೂರು(ಅ. 07): ಹಬ್ಬದ ಸೀಸನ್​ನಲ್ಲಿ ಜನರು ತಮ್ಮ ಊರುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ 200ಕ್ಕೂ ಹೆಚ್ಚು ವಿಶೇಷ ರೈಲುಗಳನ್ನ ಹೆಚ್ಚುವರಿಯಾಗಿ ಸಂಚಾರಕ್ಕೆ ಬಿಡುವುದಾಗಿ ಹೇಳಿದ್ದ ರೈಲ್ವೆ ಇಲಾಖೆ ಆ ನಿಟ್ಟಿನಲ್ಲಿ ಇದೀಗ 30 ವಿಶೇಷ ರೈಲುಗಳಿಗೆ ಒಪ್ಪಿಗೆ ನೀಡಿದೆ. ಅತಿ ಶೀಘ್ರದಲ್ಲೇ ಈ ಹೆಚ್ಚುವರಿ ವಿಶೇಷ ರೈಲುಗಳು ಸಂಚಾರ ಪ್ರಾರಂಭಿಸಲಿವೆ.


    ರೈಲ್ವೆ ಮಂಡಳಿ ಅನುಮೋದನೆ ಮಾಡಿರುವ ಈ 30 ರೈಲುಗಳಲ್ಲಿ ಬಹುತೇಕವು ಎಸಿ ಎಕ್ಸ್​ಪ್ರೆಸ್ ರೈಲುಗಳಾಗಿವೆ. ದುರೋಂತೋ, ರಾಜಧಾನಿ ಮತ್ತು ಶತಾಬ್ದಿ ಎಕ್ಸ್​ಪ್ರೆಸ್ ರೈಲುಗಳೂ ಇವೆ. ಕರ್ನಾಟಕಕ್ಕೆ ಸಂಚರಿಸುವ ಐದು ರೈಲುಗಳು ಈ ಪಟ್ಟಿಯಲ್ಲಿವೆ. ಅಸ್ಸಾಮ್​ನ ಕಾಮಾಕ್ಯ, ರಾಜಸ್ಥಾನದ ಬಾರ್ಮರ್, ಪಶ್ಚಿಮ ಬಂಗಾಳದ ಹೌರಾಗಳಿಗೆ ಯಶವಂತಪುರದಿಂದ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಇವು ವಾರಕ್ಕೊಮ್ಮೆ ಹೋಗಿಬರುತ್ತವೆ. ಬೆಂಗಳೂರು ಮತ್ತು ಚೆನ್ನೈ ಮಧ್ಯೆ ಶಬಾಬ್ದಿ ಮತ್ತು ಡಬಲ್ ಡೆಕರ್ ರೈಲುಗಳ ಬಿಡಲಾಗುವುದು ಎಂದು ಮಂಡಳಿ ಹೇಳಿದೆ. ಬಹುತೇಕ ಇವು ಅಕ್ಟೋಬರ್ 15ರಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.


    ಕರ್ನಾಟಕಕ್ಕೆ ಬರುವ ವಿಶೇಷ ರೈಲುಗಳು:
    1) ಕಾಮಾಕ್ಯ-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ)
    2) ಬಾರ್ಮರ್-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ)
    3) ಹೌರಾ-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ)
    4) ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್​ಪ್ರೆಸ್ (ಮಂಗಳವಾರ ಬಿಟ್ಟು ವಾರಕ್ಕೆ ಆರು ದಿನ)
    5) ಚೆನ್ನೈ-ಬೆಂಗಳೂರು ಡಬಲ್ ಡೆಕರ್ (ಪ್ರತೀ ದಿನ)


    Special trains list
    ವಿಶೇಷ ರೈಲುಗಳ ಪಟ್ಟಿ


    Special trains list
    ವಿಶೇಷ ರೈಲುಗಳು



    ಕೊರೋನಾ ವಕ್ಕರಿಸಿ ನಂತರ ಮಾರ್ಚ್ ತಿಂಗಳಲ್ಲಿ ಲಾಕ್​ಡೌನ್ ಮಾಡಿದಾಗ ಎಲ್ಲಾ ರೈಲು ಸೇವೆಗಳನ್ನ ಸ್ಥಗಿತಗೊಳಿಸಲಾಯಿತು. ಮೇ 1ರಿಂದ ವಲಸೆ ಕಾರ್ಮಿಕರನ್ನ ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ರೈಲುಗಳನ್ನ ಬಿಡಲಾಯಿತು. ನಂತರ ಅನ್​ಲಾಕ್ ಪ್ರಕ್ರಿಯೆಯ ಭಾಗವಾಗಿ ದೇಶಾದ್ಯಂತ 300ಕ್ಕೂ ಹೆಚ್ಚು ವಿಶೇಷ ರೈಲುಗಳನ್ನ ಚಾಲನೆಯಲ್ಲಿಡಲಾಗಿದೆ. ಅದರ ಜೊತೆಗೆ 40 ಕ್ಲೋನ್ ರೈಲುಗಳೂ ಕೂಡ ವಿಶೇಷ ಸೇವೆಯಾಗಿ ಕಾರ್ಯಾಚರಣೆಯಲ್ಲಿವೆ. ಜನರಿಗೆ ಕ್ಷಿಪ್ರ ಪ್ರಯಾಣದ ಸೇವೆ ನೀಡುವ ಹಿನ್ನೆಲೆಯಲ್ಲಿ ಈ ಕ್ಲೋನ್ ರೈಲುಗಳು ಬಿಡಲಾಗಿದೆ.

    Published by:Vijayasarthy SN
    First published: