HOME » NEWS » National-international » RAIL LINK TO SABARIMALA IS COMING TO REALITY THROUGH ANGAMALI ERUMELI PROJECT SNVS

ಶಬರಿಮಲೆಗೆ ಸಿಗುತ್ತಿದೆ ರೈಲ್ವೆ ಸಂಪರ್ಕ; 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಜೀವ

ಎರ್ನಾಕುಲಂನ ಅಂಗಮಾಲಿ ಮತ್ತು ಕೊಟ್ಟಾಯಂನ ಎರುಮೆಲಿ ನಡುವೆ ರೈಲು ಮಾರ್ಗ ಯೋಜನೆಯ ಶೇ. 50 ವೆಚ್ಚ ಭರಿಸಲು ಕೇರಳ ಸರ್ಕಾರ ಒಪ್ಪಿಕೊಂಡಿದೆ. ಎರುಮೆಲಿಯಿಂದ ಪಂಬಾ ಕೇವಲ 18 ಕಿಮೀ ದೂರ ಇದೆ. ಇದರಿಂದ ಶಬರಿಮಲೆ ಯಾತ್ರಿಕರಿಗೆ ಮಾರ್ಗ ಇನ್ನಷ್ಟು ಸಲೀಸಾದಂತಾಗಲಿದೆ.

news18
Updated:January 8, 2021, 9:26 AM IST
ಶಬರಿಮಲೆಗೆ ಸಿಗುತ್ತಿದೆ ರೈಲ್ವೆ ಸಂಪರ್ಕ; 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಜೀವ
ಶಬರಿಮಲೆ ದೇವಸ್ಥಾನ
  • News18
  • Last Updated: January 8, 2021, 9:26 AM IST
  • Share this:
ತಿರುವನಂತಪುರಂ(ಜ. 08): ಶಬರಿಮಲೆ ಯಾತ್ರಿಕರಿಗೆ ಸಿಹಿ ಸುದ್ದಿ ಇದೆ. ಅಯ್ಯಪ್ಪನ ದರ್ಶನ ಪಡೆಯಲು ಬಹಳ ಸಮಯ ಮತ್ತು ಶ್ರಮ ವ್ಯಯಿಸುವ ಅಗತ್ಯತೆ ಇನ್ನು ತಗ್ಗಲಿದೆ. ಶಬರಿಮಲೆ ಸಮೀಪದವರೆಗೂ ರೈಲು ಸಂಪರ್ಕ ಸಿಗಲಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿ ಮತ್ತು ಕೊಟ್ಟಾಯಂ ಜಿಲ್ಲೆಯ ಎರುಮೆಲಿ ನಗರದ ಮಧ್ಯೆ 111 ಕಿಮೀ ರೈಲ್ವೆ ಮಾರ್ಗ ನಿರ್ಮಿಸುವ ಯೋಜನೆ ಸಾಕಾರಗೊಳ್ಳುತ್ತಿದೆ. ಈ ಯೋಜನೆಯ ಶೇ. 50 ವೆಚ್ಚವನ್ನು ಭರಿಸಲು ಕೇರಳ ಸರ್ಕಾರ ಒಪ್ಪಿಕೊಂಡಿದೆ. ಶಬರಿಮಲೆ ಬೆಟ್ಟಕ್ಕೆ ಕಾಲ್ನಡಿಗೆ ಆರಂಭವಾಗುವ ಪಂಬಾ ಸ್ಥಳ ಪ್ರಸ್ತಾವಿತ ಎರುಮೇಲಿ ರೈಲು ನಿಲ್ದಾಣದಿಂದ ಕೇವಲ 18 ಕಿಮೀ ದೂರ ಇದೆ. ಇದರಿಂದ ಅಯ್ಯಪ್ಪ ಭಕ್ತರಿಗೆ ಸಾಕಷ್ಟು ಪ್ರವಾಸ ಸಮಯ ಉಳಿದಂತಾಗುತ್ತದೆ.

ಸದ್ಯ ಶಬರಿಮಲೆ ದೇವಸ್ಥಾನಕ್ಕೆ ಹೋಗಬೇಕಾದ ಅಯ್ಯಪ್ಪ ಭಕ್ತರಿಗೆ ಸ್ವಂತ ವಾಹನ ಇದ್ದರೆ ಸಮಸ್ಯೆ ಇಲ್ಲ. ಆದರೆ, ರೈಲು, ವಿಮಾನಗಳಲ್ಲಿ ಬರುವವರು ಸಾಕಷ್ಟು ಪ್ರಯಾಣ ಬೆಳೆಸಬೇಕಾಗುತ್ತದೆ. ಸಮೀಪದ ವಿಮಾನ ನಿಲ್ದಾಣಗಳಿರುವುದು ಕೊಚ್ಚಿ ಮತ್ತು ತಿರುನಂತಪುರಂ ನಗರಗಳಲ್ಲಿ. ಅಲ್ಲಿಂದ ಐದಾರು ಗಂಟೆ ಕ್ಯಾಬ್, ಬಸ್ಸುಗಳ ಮೂಲಕ ಪಂಬಾಗೆ ಬರಬೇಕು. ಹಾಗೆಯೇ, ಕೊಟ್ಟಾಯಂ ಮತ್ತು ಚೆಂಗನ್ನೂರ್ ರೈಲ್ವೆ ನಿಲ್ದಾಣಗಳಿಂದಲೂ ಪಂಬಾಗೆ ಬರಲು ಐದು ಗಂಟೆ ಬೇಕಾಗುತ್ತದೆ. ಈಗ ನೇರವಾಗಿ ಪಂಬಾಗೆ ರೈಲು ಸಂಪರ್ಕ ಸಿಗುತ್ತಿರುವುದರಿಂದ ಶಬರಿಮಲೆ ಯಾತ್ರಿಕರಿಗೆ ಅಯ್ಯಪ್ಪ ದರ್ಶನ ತುಸು ಸುಲಭವಾಗಲಿದೆ.

ಇದನ್ನೂ ಓದಿ: Badaun Gangrape: ಸಂಜೆ ವೇಳೆ ಸಂತ್ರಸ್ತೆ ಮನೆಯಿಂದ ಹೊರ ಹೋಗಬಾರದಿತ್ತು; ಮಹಿಳಾ ಆಯೋಗ ಸದಸ್ಯೆ

1997-98ರ ಬಜೆಟ್​ನಲ್ಲೇ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಆಗ ಇದರ ವೆಚ್ಚ 517 ಕೋಟಿ ರೂ ಎಂದು ಅಂದಾಜಿಸಲಾಗಿತ್ತು. ಆದರೆ, ಯೋಜನೆಯ ಶೇ. 50ರಷ್ಟು ವೆಚ್ಚವನ್ನು ಕೇರಳ ಸರ್ಕಾರ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಕೇರಳ ಸರ್ಕಾರದ ಬಹುಕಾಲದ ಬೇಡಿಕೆ ಇದಾಗಿದ್ದರೂ ಕೇಂದ್ರ ಷರತ್ತನ್ನು ಕೇರಳ ಸರ್ಕಾರ ಒಪ್ಪಿರಲಿಲ್ಲ. ಹೀಗಾಗಿ, ಈ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. 2016ರಲ್ಲಿ ಕೇಂದ್ರ ರೈಲ್ವೆ ಇಲಾಖೆ ಮತ್ತು ಕೇರಳ ಸರ್ಕಾರ ಲಾಭದಾಯಕ ಯೋಜನೆಗಳನ್ನ ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಅದರಂತೆ ಅಂಗಮಾಲಿ-ಎರುಮೆಲಿ ರೈಲು ಯೋಜನೆಗೂ ಜೀವ ಬಂದಿತು. ಈಗ ಇದರ ಅಂದಾಜು ವೆಚ್ಚ 2,817 ಕೋಟಿ ಎಂದು ಹೇಳಲಾಗುತ್ತಿದೆ. ಈ ಯೋಜನೆಯಿಂದ ಬಂದ ಲಾಭದಲ್ಲಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ಸಮಪಾಲು ಪಡೆಯಲಿದೆ.

ಮೊದಲ ಹಂತದ ಯೋಜನೆಯಲ್ಲಿ ಎರುಮೆಲಿಯವರೆಗೆ ರೈಲು ಸಂಪರ್ಕ ಇದೆ. ಎರಡನೇ ಹಂತದಲ್ಲಿ ಇದು ಕೊಲ್ಲಂ ಜಿಲ್ಲೆಯ ಪುನಲೂರಿಗೆ ವಿಸ್ತರಣೆ ಆಗಬಹುದು. ಅದಾದರೆ ತಮಿಳುನಾಡಿಗೆ ಸಂಪರ್ಕ ಸುಲಭವಾಗುತ್ತದೆ. ಮೂರನೇ ಹಂತದಲ್ಲಿ ಇದು ಪುನಲೂರಿನಿಂದ ತಿರುವನಂತಪುರಂ ಬಳಿಯ ನೆಮೋಮ್ ಎಂಬಲ್ಲಿಯವರೆಗೂ ಸಂಪರ್ಕ ವಿಸ್ತರಿಸುವ ಅವಕಾಶ ಇದೆ.

ಕೇರಳಿಗರಿಗೂ ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ. ಇಡುಕ್ಕಿ, ಕೊಟ್ಟಾಯಂ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡಲಿದೆ. ಇಡುಕ್ಕಿ ಜಿಲ್ಲೆಗೆ ಮೊದಲ ಬಾರಿಗೆ ರೈಲು ಸಂಪರ್ಕ ಆಗಲಿರುವುದು ವಿಶೇಷ.
Published by: Vijayasarthy SN
First published: January 8, 2021, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories