Shocking: 3 ವರ್ಷದಲ್ಲಿ ರೈಲು ಹಳಿಗಳ ಮೇಲೆ 45 ಆನೆಗಳ ಸಾವು! ಕರ್ನಾಟಕದಲ್ಲಿ ಎಷ್ಟು ಆನೆಗಳು ಮೃತಪಟ್ಟಿವೆ ನೋಡಿ

ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುವುದರ ಜೊತೆಗೆ ಏನಪ್ಪಾ ಇದು.. ಇಷ್ಟೊಂದು ಆನೆಗಳು ರೈಲ್ವೆ ಹಳಿಗಳ ಮೇಲೆ ಹೇಗೆ ಸಾವನ್ನಪ್ಪಿವೆ ಎಂದು ಅನ್ನಿಸದೆ ಇರದು. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಾಡಿ(Forest)ನಲ್ಲಿರುವ ಆನೆಗಳು ಸಾಮಾನ್ಯವಾಗಿ ಕಾಡಿನಿಂದ ಸ್ವಲ್ಪ ಹೊರಗೆ ಇರುವ ರಸ್ತೆಗೆ ಮತ್ತು ರೈಲ್ವೆ ಹಳಿಯ  (Railway Tracks) ಬಳಿ ಬಂದಾಗ ಮತ್ತು ಆ ಹಳಿಯನ್ನು ದಾಟುವಾಗ ಹಾಗೆ ವೇಗವಾಗಿ ಬರುವ ರೈಲು ಅವುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪುವುದನ್ನು ಕೇಳಿರುತ್ತೇವೆ. ಇಂತಹ ದುರ್ಘಟನೆಗಳು ಇತ್ತೀಚೆಗೆ ತುಂಬಾನೇ ಆಗುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಎಂದರೆ 2018 ರಿಂದ 2021 ರ ನಡುವೆ ದೇಶದ ವಿವಿಧ ರಾಜ್ಯಗಳ ರೈಲ್ವೆ ಹಳಿಗಳ ಮೇಲೆ 45 ಆನೆಗಳು (Elephants) ಸಾವನ್ನಪ್ಪಿವೆ ಎಂದು ಸರ್ಕಾರವು (Union Government) ಸೋಮವಾರ ಲೋಕಸಭೆಗೆ (Lok Sabha) ತಿಳಿಸಿದೆ. 

ಇಲ್ಲಿ ನೋಡಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಭೂಪೇಂದರ್ ಯಾದವ್ ಅವರು ಎಂತಹ ಮಾಹಿತಿಯನ್ನು ಲೋಕಸಭೆಯಲ್ಲಿ ತಿಳಿಸಿದ್ದಾರೆ ಅಂತ. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುವುದರ ಜೊತೆಗೆ ಏನಪ್ಪಾ ಇದು.. ಇಷ್ಟೊಂದು ಆನೆಗಳು ರೈಲ್ವೆ ಹಳಿಗಳ ಮೇಲೆ ಹೇಗೆ ಸಾವನ್ನಪ್ಪಿವೆ ಎಂದು ಅನ್ನಿಸದೆ ಇರದು. ಇಂತಹ ದುರ್ಘಟನೆಗಳನ್ನು ತಡೆಯಲು ಸರ್ಕಾರದವರು ತುಂಬಾನೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಬಂದೊದಗಿದೆ ಎಂದು ಹೇಳಬಹುದು.

ಗಾಬರಿ ಹುಟ್ಟಿಸುವಂತಿದೆ ಸಂಖ್ಯೆ!
ಕಳೆದ ಮೂರು ವರ್ಷಗಳಲ್ಲಿ ಎಂದರೆ 2018 ರಿಂದ 2021 ರ ನಡುವೆ ದೇಶದ ವಿವಿಧ ರಾಜ್ಯಗಳ ರೈಲ್ವೆ ಹಳಿಗಳ ಮೇಲೆ 45 ಆನೆಗಳು ಸಾವನ್ನಪ್ಪಿವೆ ಎಂದು ಸರ್ಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಅವರು 2018-19ರಲ್ಲಿ ರೈಲು ಹಳಿಗಳ ಮೇಲೆ 19 ಆನೆಗಳು, 2019-20ರಲ್ಲಿ 14 ಮತ್ತು 2020-21ರಲ್ಲಿ 12 ಆನೆಗಳು ರೈಲು ಹಳಿಗಳ ಮೇಲೆ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಷ್ಟು?
2020-21 ರಲ್ಲಿ, ಅಸ್ಸಾಂನ ರೈಲ್ವೆ ಹಳಿಗಳ ಮೇಲೆ ಒಟ್ಟು ಐದು ಆನೆಗಳು, ಒಡಿಶಾದಲ್ಲಿ ನಾಲ್ಕು ಮತ್ತು ಕರ್ನಾಟಕ, ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಆನೆಗಳು ಸಾವನ್ನಪ್ಪಿವೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ. ಅದೇ 2018ರಿಂದ 2021 ರವರೆಗೆ ಕರ್ನಾಟಕದಲ್ಲಿ ಮೂರು ಆನೆಗಳು ರೈಲ್ವೇ ಟ್ರಾಕ್​ಗೆ ಸಿಲುಕಿ ಮೃತಪಟ್ಟಿವೆ.

ಯಾವ ಯಾವ ರಾಜ್ಯದಲ್ಲಿ ಎಷ್ಟು ಆನೆಗಳು ರೈಲ್ವೆ ಹಳಿಗಳ ಮೇಲೆ ಮೃತಪಟ್ಟಿವೆ?
2018-19 ರಲ್ಲಿ ಒಡಿಶಾದಲ್ಲಿ ಇಂತಹ ಘಟನೆಗಳಲ್ಲಿ ಏಳು, ಪಶ್ಚಿಮ ಬಂಗಾಳದಲ್ಲಿ ಆರು, ಕರ್ನಾಟಕ ಮತ್ತು ಅಸ್ಸಾಂನಲ್ಲಿ ತಲಾ ಎರಡು ಮತ್ತು ಕೇರಳ ಹಾಗೂ ಉತ್ತರಾಖಂಡದಲ್ಲಿ ತಲಾ ಒಂದೊಂದು ಆನೆಗಳು ಸಾವನ್ನಪ್ಪಿವೆ ಎಂದು ಕೆಳಮನೆಯಲ್ಲಿ ಸಚಿವರು ಮಂಡಿಸಿದ ವರ್ಷವಾರು ಅಂಕಿ ಅಂಶಗಳಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

2019-20 ರಲ್ಲಿ ಪಶ್ಚಿಮ ಬಂಗಾಳದ ರೈಲ್ವೆ ಹಳಿಗಳ ಮೇಲೆ ಐದು ಆನೆಗಳು, ಕೇರಳದಲ್ಲಿ ಮೂರು, ಉತ್ತರಾಖಂಡ್ ಮತ್ತು ಅಸ್ಸಾಂನಲ್ಲಿ ತಲಾ ಎರಡು ಮತ್ತು ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ತಲಾ ಒಂದೊಂದು ಆನೆಗಳು ಸಾವನ್ನಪ್ಪಿವೆ.

ಸಾವು ತಡೆಯಲು ಹಲವು ಕ್ರಮ
ಇಂತಹ ಘಟನೆಗಳಲ್ಲಿ ಆನೆಗಳ ಸಾವನ್ನು ತಡೆಯಲು, ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ತಮ್ಮ ಸಚಿವಾಲಯವು ಹಲವಾರು ಕ್ರಮಗಳನ್ನು ತೆಗೆದು ಕೊಂಡಿದೆ ಎಂದು ಯಾದವ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: Moneycontrol ಈಗ ನಂಬರ್ 1 ಹಣಕಾಸು ಸುದ್ದಿ ವೇದಿಕೆ! Economic Times ಹಿಂದಿಕ್ಕಿ ಈ ಸಾಧನೆ

ಸಚಿವರು ತಮ್ಮ ಉತ್ತರದಲ್ಲಿ ಪಟ್ಟಿ ಮಾಡಿದ ಹಲವಾರು ಮುಂಜಾಗ್ರತಾ ಕ್ರಮಗಳಲ್ಲಿ, ಗುರುತಿಸಲಾದ ಸ್ಥಳಗಳಲ್ಲಿ ಆನೆ ಕಾರಿಡಾರ್ ಗಳನ್ನು ಮತ್ತು ಆವಾಸ ಸ್ಥಾನಗಳಲ್ಲಿ ಈ ರೈಲುಗಳಿಗೆ ಶಾಶ್ವತ ಮತ್ತು ತಾತ್ಕಾಲಿಕ ವೇಗದ ನಿರ್ಬಂಧಗಳನ್ನು ವಿಧಿಸುವುದು ಸೇರಿದೆ. ಆನೆಗಳು ಜಾಸ್ತಿ ಓಡಾಡುವ ಸ್ಥಳಗಳಲ್ಲಿ ಆನೆಗಳ ಚಲನೆಗಾಗಿ ಅಂಡರ್ ಪಾಸ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಾಣ ಮಾಡುವುದು, ರೈಲಿನಲ್ಲಿರುವ ಲೋಕೋ ಪೈಲಟ್‌ಗಳನ್ನು ಎಚ್ಚರಿಸಲು ಆಯ್ದ ಸ್ಥಳಗಳಲ್ಲಿ ಫೆನ್ಸಿಂಗ್, ಸೂಚನಾ ಫಲಕಗಳನ್ನು ಒದಗಿಸುವುದು.

ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ಎದೆ ನಡುಗಿಸಿ! RTI ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಕೊನೆಯದಾಗಿ ಈ ವಿಷಯದ ಬಗ್ಗೆ ರೈಲು ಸಿಬ್ಬಂದಿ ಮತ್ತು ಈ ರೈಲ್ವೆ ನಿಲ್ದಾಣಗಳಲ್ಲಿರುವ ಸ್ಟೇಷನ್ ಮಾಸ್ಟರ್ ಅವರಲ್ಲಿ ಆನೆಗಳ ಓಡಾಡುವಿಕೆಯ ಸ್ಥಳಗಳ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವುದು ಒಳಗೊಂಡಿದೆ ಎಂದು ಹೇಳಿದರು.
Published by:guruganesh bhat
First published: