‘ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಮೋದಿ ಸರ್ಕಾರವೇ ಬೆನ್ನೆಲುಬು’: ರಾಹುಲ್​​ ಗಾಂಧಿ ಆರೋಪ..!

ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮೋದಿ ದೊಡ್ಡ ತಪ್ಪೆಸಗಿದ್ದಾರೆ. ಈ ರಾಜ್ಯ ಹೊತ್ತಿ ಉರಿಯಲು ಪ್ರಧಾನಿ ಅವರೇ ಪ್ರಮುಖ ಕಾರಣ- ರಾಹುಲ್​​

Ganesh Nachikethu
Updated:October 29, 2018, 9:31 PM IST
‘ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಮೋದಿ ಸರ್ಕಾರವೇ ಬೆನ್ನೆಲುಬು’: ರಾಹುಲ್​​ ಗಾಂಧಿ ಆರೋಪ..!
ರಾಹುಲ್​​, ಮೋದಿ
  • Share this:
ನ್ಯೂಸ್​​-18 ಕನ್ನಡ

ಭೋಪಾಲ್​(ಅ.29): ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ವಿಚಾರದಲ್ಲಿ ತಪ್ಪು ಮಾಡಿದ ಕಾರಣದಿಂದಲೇ ಆ ರಾಜ್ಯ ಈಗಲೂ ಹೊತ್ತಿ ಉರಿಯುತ್ತಿದೆ ಎಂದು ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿ ಆರೋಪಿಸಿದ್ಧಾರೆ. ಅಲ್ಲದೇ ಇಂದು ಜಮ್ಮು-ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಚಟುವಟಿಕೆಗಳಿಗೆ ಮೋದಿ ಸರ್ಕಾರವೇ ನೇರಹೊಣೆ ಎಂದು ರಾಹುಲ್ ಕಿಡಿಕಾರಿದ್ಧಾರೆ.

ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಅವರು, ಕಾಶ್ಮೀರದ ವಿಚಾರದಲ್ಲಿ ಮೋದಿ ದೊಡ್ಡ ತಪ್ಪೆಸಗಿದ್ದಾರೆ. ಈ ರಾಜ್ಯ ಹೊತ್ತಿ ಉರಿಯಲು ಅವರೇ ಕಾರಣ. ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಮೋದಿ ಸರ್ಕಾರವೇ ಬಾಗಿಲು ತೆಗೆದಿದೆ. ಉಗ್ರರಿಗೆ ಬಲಿಯಾಗುತ್ತಿರುವುದು ದೇಶದ ಸೈನಿಕರೇ ಹೊರತು ಯಾವುದೇ ರಾಜಕಾರಣಿಗಳಲ್ಲ ಎಂದು ರಾಹುಲ್​​ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮೋದಿ ಸರ್ಕಾರ ಜನರಿಗೆ ನಾಲ್ಕು ವರ್ಷಗಳಿಂದ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. 'ಒಂದೇ ಶ್ರೇಣಿ ಒಂದೇ ಪಿಂಚಣಿ (ಒಆರ್‌ಒಪಿ) ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಆದರೆ ಈ ವಿಚಾರವಾಗಿ ಮೋದಿ ಅವರು ಮಾತ್ರ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಮೋದಿ ಸರ್ಕಾರ ಹೆಚ್ಚು ದಿನ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್​​ ಅಧ್ಯಕ್ಷರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಎಲ್ಲಿಗೆ ಬರಬೇಕು ಹೇಳಪ್ಪ ಅಲ್ಲಿಗೆ ಬರುತ್ತೇನೆ; ರೆಡ್ಡಿ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ

'ಒಆರ್‌ಒಪಿ ವಿಚಾರದಲ್ಲಿ ನಾವು ಮೋದಿ ಅವರನ್ನು ಬಲವಾಗಿ ನಂಬಿದ್ದೆವು. ಆದರೀಗ ಪ್ರಧಾನಿ ಅವರ ನಡೆಯಿಂದ ನಿರಾಶೆಗೊಂಡಿದ್ದೇವೆ. ತಮ್ಮ ರಾಜಕೀಯಕ್ಕೆ ಸೈನಿಕರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಕೇವಲ ಭಾಷಣಕ್ಕೆ ಸೀಮಿತವಾಗಿದೆಯೇ ಹೊರತು ಮೋದಿಯವರು ದೇಶದ ಸೈನಿಕರಿಗೆ ಏನು ಮಾಡಿಲ್ಲ ಎಂದು ಮಾಜಿ ಸೈನಿಕನೋರ್ವ ತಮ್ಮ​​ ಬಳಿ ಹೇಳಿಕೊಂಡಿರುವುದಾಗಿ ರಾಹುಲ್​​ ಭಾಷಣದಲ್ಲಿ ಪ್ರಸ್ತಾಪಿಸಿದರು.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ರಾಹುಲ್‌ ಗಾಂಧಿ ಬಹಿರಂಗ ಹೇಳಿಕೆ ನೀಡಿದ್ದರು. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿದ್ದ ಯಾವೊಂದು ಭರವಸೆಯನ್ನೂ ಮೋದಿ ಈಡೇರಿಸಿಲ್ಲ. ಹೀಗಾಗಿ ಈ ಬಾರಿ 2019ರ ಲೋಕಸಭಾ ಚುನಾವಣೆಯಲ್ಲಿ ಮರಳಿ ಮೋದಿ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಅಭಿಪ್ರಾಯಪಟ್ಟಿದ್ದರು.ಇದನ್ನೂ ಓದಿ: ಪೊಲೀಸ್​ ಕಾನ್ಸ್​ಟೇಬಲ್ ಮಗ ಈಗ ಐಪಿಎಸ್​ ಅಧಿಕಾರಿ; ಇಲ್ಲಿದೆ ಒಂದು ಅಪರೂಪದ ಕತೆ

ಒಂದೆಡೆ '70 ವರ್ಷಗಳಲ್ಲಿ ಕಾಂಗ್ರೆಸ್‌ ಬಡವರಿಗಾಗಿ ಏನು ಮಾಡಿದೆ ಎಂದು ಮೋದಿ ಪದೇ ಪದೇ ಕೇಳುತ್ತಾರೆ. ಇನ್ನೊಂದೆಡೆ ಈ ದೇಶದ ಬಡವರ ಚೌಕಿದಾರರಾಗಬೇಕಿದ್ದ ಪ್ರಧಾನಿ ಕೇವಲ ಶ್ರೀಮಂತ ಉದ್ಯಮಿಗಳ ಚೌಕಿದಾರರಾಗಿದ್ದಾರೆ. ಶ್ರೀಮಂತರ ಪರವಾಗಿರುವ ಮೋದಿಗೆ ಕಾಂಗ್ರೆಸ್​​ ಏನು ಮಾಡಿದೆ ಎಂದು ಕೇಳುವ ಅರ್ಹತೆಯಿಲ್ಲ ಎಂದು ರಾಹುಲ್​​ ಗಾಂಧಿ ಟೀಕೆ ಮಾಡಿದರು ಎನ್ನಲಾಗಿದೆ.

------------
ಮೈಸೂರು: ಪೂಜಾರಿಗೆ ಆತನ ಪತ್ನಿಯಿಂದಲೇ ಬಿತ್ತು ಗೂಸಾ
First published: October 29, 2018, 6:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading