ಸಪ್ನಾ ಚೌಧರಿಯನ್ನೇ ರಾಹುಲ್ ಗಾಂಧಿ ಮದುವೆಯಾಗಬೇಕು; ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಶಾಸಕನ ಹೇಳಿಕೆ

ಸೋನಿಯಾ ಗಾಂಧಿ ಇಟಲಿಯಲ್ಲಿದ್ದಾಗ ಯಾವ ವೃತ್ತಿಯಲ್ಲಿದ್ದರೋ ಸ್ವಪ್ನಾ ಚೌಧರಿ ಕೂಡ ಅದೇ ವೃತ್ತಿಯವರಾಗಿದ್ದಾರೆ. ರಾಹುಲ್​ನ ತಂದೆ ಹೇಗೆ ಸೋನಿಯಾ ಗಾಂಧಿಯನ್ನು ಸ್ವೀಕರಿಸಿದರೋ ಅದೇ ರೀತಿ ರಾಹುಲ್ ಕೂಡ ಸ್ವಪ್ನಾ ಚೌಧರಿಯನ್ನು ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

sushma chakre | news18
Updated:March 24, 2019, 7:54 PM IST
ಸಪ್ನಾ ಚೌಧರಿಯನ್ನೇ ರಾಹುಲ್ ಗಾಂಧಿ ಮದುವೆಯಾಗಬೇಕು; ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಶಾಸಕನ ಹೇಳಿಕೆ
ಸ್ವಪ್ನ ಚೌಧರಿ
sushma chakre | news18
Updated: March 24, 2019, 7:54 PM IST
ನವದೆಹಲಿ (ಮಾ.24): ಭೋಜ್​ಪುರಿ ನೃತ್ಯಗಾರ್ತಿ ಮತ್ತು ನಟಿ ಸ್ವಪ್ನಾ ಚೌಧರಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ರಾಹುಲ್ ಗಾಂಧಿ ವೈಯಕ್ತಿಕ ವಿಚಾರದಲ್ಲಿ ವ್ಯಂಗ್ಯವಾಡುವ ಮೂಲಕ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಕ್ಕೀಡಾಗಿದ್ದಾರೆ.

ನಿನ್ನೆ ರಾತ್ರಿ ಉತ್ತರಪ್ರದೇಶದ ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ ನೇತೃತ್ವದಲ್ಲಿ ಸ್ವಪ್ನಾ ಚೌಧರಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಲ್ಲದೆ, ಸ್ವಪ್ನಾ ಈ ಬಾರಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿಯೂ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲ ವದಂತಿ ಎಂದಿರುವ ಸ್ವಪ್ನಾ ತಾನು ಕಾಂಗ್ರೆಸ್​ ಪಕ್ಷ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಬ್ರಾಹ್ಮಣ, ಚೌಕೀದಾರ ಆಗಲು ಸಾಧ್ಯವಿಲ್ಲ; ಪ್ರಧಾನಿ ಮೋದಿ ಪ್ರಚಾರ ತಂತ್ರಕ್ಕೆ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ


Loading...ಎಎನ್​ಐಗೆ ನೀಡಿರುವ ಹೇಳಿಕೆಯಲ್ಲಿ ಸ್ವಪ್ನಾ ಚೌಧರಿ ಮತ್ತು ರಾಹುಲ್ ಗಾಂಧಿ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಸ್ವಪ್ನಾ ಚೌಧರಿಯನ್ನು ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಹೋಲಿಸಿದ್ದಾರೆ. ಇಬ್ಬರೂ ಒಂದೇ ಪ್ರೊಫೆಷನ್​ನವರಾಗಿರುವುದರಿಂದ ರಾಹುಲ್ ಸ್ವಪ್ನಾ ಚೌಧರಿಯನ್ನೇ ಮದುವೆಯಾಗಬೇಕು ಎಂದು ಕಾಲೆಳೆದಿದ್ದಾರೆ.

ಚೌಕಿದಾರರು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ; ಕಬ್ಬು ಬೆಳೆಗಾರರ ಬಾಕಿ ಮೊತ್ತದ ಬಗ್ಗೆ ಧ್ವನಿಯೆತ್ತಿದ ಪ್ರಿಯಾಂಕಾ ಗಾಂಧಿ

ಸೋನಿಯಾ ಗಾಂಧಿ ಇಟಲಿಯಲ್ಲಿದ್ದಾಗ ಯಾವ ವೃತ್ತಿಯಲ್ಲಿದ್ದರೋ ಸ್ವಪ್ನಾ ಚೌಧರಿ ಕೂಡ ಅದೇ ವೃತ್ತಿಯವರಾಗಿದ್ದಾರೆ. ರಾಹುಲ್​ನ ತಂದೆ ಹೇಗೆ ಸೋನಿಯಾ ಗಾಂಧಿಯನ್ನು ಸ್ವೀಕರಿಸಿದರೋ ಅದೇ ರೀತಿ ರಾಹುಲ್ ಕೂಡ ಸ್ವಪ್ನಾ ಚೌಧರಿಯನ್ನು ಒಪ್ಪಿಕೊಳ್ಳಬೇಕು. ರಾಹುಲ್ ಗಾಂಧಿ ರಾಜಕಾರಣಿಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದರಿಂದ ಈಗ ಡ್ಯಾನ್ಸರ್​ಗಳ ಜೊತೆಗೆ ರಾಜಕೀಯ ಮಾಡಲು ಮುಂದಾಗಿದ್ದಾರೆ ಎನ್ನುವ ಮೂಲಕ ಸುರೇಂದ್ರ ಸಿಂಗ್ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

First published:March 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626