ದುಬೈನಲ್ಲಿ ರಾಹುಲ್​​​: ನಿಮ್ಮ ಮನದ ಮಾತು ಆಲಿಸುವೆ; ಅನಿವಾಸಿ ಭಾರತೀಯರಿಗೆ ಕಾಂಗ್ರೆಸ್​​ ಅಧ್ಯಕ್ಷ ಭರವಸೆ!

ಕಾರ್ಮಿಕರ ಭೇಟಿಗೂ ಮುನ್ನವೇ ರಾಹುಲ್‌, ಭಾರತ ಮೂಲದ ಉದ್ಯಮಿಗಳ ಜೊತೆಗೆ ಚರ್ಚಿಸಿದ್ದಾರೆ. ಕರ್ನಾಟಕ ಕರಾವಳಿ ಮೂಲದ ಬಿ.ಆರ್‌.ಶೆಟ್ಟಿ ಸೇರಿದಂತೆ ಅನೇಕ ದುಬೈ ಉದ್ಯಮಿಗಳ ಜತೆ ಸಭೆ ನಡೆಸಿದ್ದಾರೆ. ಈ ವೇಳೆ ಭಾರತಕ್ಕೆ ಸಂಬಂಧಿಸಿಂದತೇ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.

Ganesh Nachikethu | news18
Updated:January 11, 2019, 11:29 PM IST
ದುಬೈನಲ್ಲಿ ರಾಹುಲ್​​​: ನಿಮ್ಮ ಮನದ ಮಾತು ಆಲಿಸುವೆ; ಅನಿವಾಸಿ ಭಾರತೀಯರಿಗೆ ಕಾಂಗ್ರೆಸ್​​ ಅಧ್ಯಕ್ಷ ಭರವಸೆ!
ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ
Ganesh Nachikethu | news18
Updated: January 11, 2019, 11:29 PM IST
ನವದೆಹಲಿ(ಜ.11): ಎರಡು ದಿನಗಳ ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​​ ಗಾಂಧಿಯವರು ಅನಿವಾಸಿ ಭಾರತೀಯರ ನೆರವಿಗೆ ಧಾವಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಇಲ್ಲಿ ನಾನು ಮನ್ ಕಿ ಬಾತ್ ಕೇಳಲು ಬಂದಿಲ್ಲ. ಬದಲಿಗೆ ನಿಮ್ಮ ನಿಜವಾದ ಮನದ ಮಾತು ಆಲಿಸಲು ಬಂದಿದ್ದೇನೆ. ನಿಮಗೆ ಯಾವುದೇ ಸಮಸ್ಯೆಯಿದ್ದರೂ ನನ್ನ ಬಳಿ ಹಂಚಿಕೊಳ್ಳಿ. ನಾನು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ರಾಹುಲ್​​ ಗಾಂಧಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುಬೈನ ಜಬಲ್‌ ಅಲಿ ಲೇಬರ್‌ ಕಾಲೋನಿಯಲ್ಲಿ ಭಾರತೀಯ ಕಾರ್ಮಿಕರನ್ನು ಉದ್ದೇಶಿಸಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಮಾತನಾಡಿದರು. ಈ ವೇಳೆ ನಾನು ನಿಮ್ಮೊಂದಿದ್ದೇನೆ. ಇಲ್ಲಿ ಯಾವುದೇ ರೀತಿಯ ಮನ್​​ ಕಿ ಬಾತ್​​ ಕೇಳಲು ಬಂದಿಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡಲು ಬಂದಿದ್ದೇನೆ. ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಏನೇ ಆಗಿದ್ದರು ಧೈರ್ಯವಾಗಿ ಹೇಳಿಕೊಳ್ಳಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ರಾಹುಲ್​​ ಆಶ್ವಾಸನೆ ನೀಡಿದರು.

ಇಲ್ಲಿಯೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ರಾಹುಲ್​​, ಎನ್​​ಡಿಎ ಸರ್ಕಾರ ಶ್ರೀಮಂತರ ಪರವಾಗಿದೆ. ರೈತ ಕೂಲಿ-ಕಾರ್ಮಿಕರಿಗೆ ಯಾವುದೇ ನೆರವು ನೀಡಲು ಮೋದಿ ಸರ್ಕಾರ ಮುಂದಾಗಿಲ್ಲ. ಅವರು ರೆಡಿಯೋದಲ್ಲಿ ಬರುವ ‘ಮನ್​ ಕಿ ಬಾತ್’​​​ ಕಾರ್ಯಕ್ರಮದ ಮೂಲಕವೇ ಸಮಸ್ಯೆಯನ್ನು ಆಲಿಸುತ್ತಾರೆ. ಲೋಕಸಭೆ ಚುನಾವಣೆ ಹೊತ್ತಲ್ಲಿ  ಉದ್ದುದ್ದ ಭಾಷಣ ಬಿಗಿದ ಮಾತ್ರಕ್ಕೆ ಜನರ ಹೊಟ್ಟೆ ತುಂಬದು ಎಂದು ಮೋದಿ ವಿರುದ್ಧ ಕುಟುಕಿದ್ದಾರೆ. ಅಲ್ಲದೇ ಕಾಂಗ್ರೆಸ್​​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮೋದಿಯನ್ನು ಸೋಲಿಸುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮನೆಯೊಂದು ಹತ್ತು ಬಾಗಿಲು; ವಿರೋಧಗಳ ಸರಮಾಲೆಗಳೊಂದಿಗೆ ಹೈಕಮಾಂಡ್​ಗೆ ಬಿಎಸ್​ವೈ ರಿಪೋರ್ಟ್

ದುಬೈ ನಗರದ ಅಭಿವೃದ್ದಿಯಲ್ಲಿ ನೀವು ಪಾಲದಾರರು. ಜಗಮಗಿಸುವಂತಹ ದೊಡ್ಡದೊಡ್ಡ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು, ವಿಶಾಲ ರಸ್ತೆಗಳು, ವಿಮಾನ ನಿಲ್ದಾಣಗಳ ನಿರ್ಮಾಣದ ಹಿಂದೆ ನಿಮ್ಮ ಬೆವರಿನ ಹನಿಯಿದೆ. ನೀವು ಇಲ್ಲಿ ಕಷ್ಟಪಡುತ್ತಾ, ಭಾರತದಲ್ಲಿನ ನಿಮ್ಮ ಕುಟುಂಬವನ್ನು ಸಾಕುತ್ತಿದ್ದೀರಿ. ನಿಮಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಕಾಂಗ್ರೆಸ್ ಪಕ್ಷವಿದೆ ಎಂದರು.

ಉದ್ಯಮಿಗಳ ಜತೆ ಚರ್ಚೆ: ಕಾರ್ಮಿಕರ ಭೇಟಿಗೂ ಮುನ್ನವೇ ರಾಹುಲ್‌, ಭಾರತ ಮೂಲದ ಉದ್ಯಮಿಗಳ ಜೊತೆಗೆ ಚರ್ಚಿಸಿದ್ದಾರೆ. ಕರ್ನಾಟಕ ಕರಾವಳಿ ಮೂಲದ ಬಿ.ಆರ್‌.ಶೆಟ್ಟಿ ಸೇರಿದಂತೆ ಅನೇಕ ದುಬೈ ಉದ್ಯಮಿಗಳ ಜತೆ ಸಭೆ ನಡೆಸಿದ್ದಾರೆ. ಈ ವೇಳೆ ಭಾರತಕ್ಕೆ ಸಂಬಂಧಿಸಿಂದತೇ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
Loading...

----------------

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...