Congress: ಕಾಂಗ್ರೆಸ್ ಹಾಳು ಮಾಡೋಕೆ ಅಣ್ಣ- ತಂಗಿ ಸಾಕು, ರಾಹುಲ್-ಪ್ರಿಯಾಂಕಾಗೆ ಯೋಗಿ ಟಾಂಗ್

ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್ ಅನ್ನು ಹಾಳು ಮಾಡಲು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸಾಕು. ಬೇರೆ ಯಾರೂ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ಕೊಟ್ಟಿದ್ದಾರೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

  • Share this:
ಯುಪಿ ಚುನಾವಣಾ (UP Election) ಕಾವು ಹೆಚ್ಚುತ್ತಿರುವಂತೆ ಪಕ್ಷಗಳ ಮುಖಂಡರ ಪರಸ್ಪರ ವಾಗ್ದಾಳಿ ಹೆಚ್ಚಾಗಿದೆ. ಪಕ್ಷದ ಕುರಿತು ಹಾಗು ವೈಯಕ್ತಿಕ ದಾಳಿಯೂ ಕೇಳಿ ಬರುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಅವರು ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಿದ ಯೋಗಿ, ಕಾಂಗ್ರೆಸ್​ನ ಅಣ್ಣ-ತಂಗಿ ಜೋಡಿಗೆ ಟಾಂಗ್ ಕೊಟ್ಟಿದ್ದಾರೆ. ಇತ್ತ ಪ್ರಿಯಾಂಕ ಅವರೂ ತಮ್ಮ ಸಹೋದರನ ಬಗ್ಗೆ ಕೆಲವು ಹೇಳಿಕೆಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಯೋಗಿ ಹೇಳಿದ್ದೇನು ? ಕಾಂಗ್ರೆಸ್​ ಮುಖಂಡರನ್ನು ವ್ಯಂಗ್ಯ ಮಾಡಿದ್ದೇಕೆ ?

ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ (CM) ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್ ಅನ್ನು ಹಾಳು ಮಾಡಲು ಸಹೋದರರು (ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ) ಸಾಕು. ಬೇರೆ ಯಾರೂ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನದ ದಿನದಂದು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯೋಗಿ ಅವರು ಈ ರೀತಿ ಮಾತನಾಡಿದ್ದಾರೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ (Congress) ಅನ್ನು ಏಕೆ ಬೆಂಬಲಿಸುತ್ತಿದ್ದೀರಿ ಎಂದು ನಾನು ಜನರನ್ನು ಕೇಳಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಶನಿವಾರ ಉತ್ತರಾಖಂಡದಲ್ಲಿ ಮತದಾನಕ್ಕೆ (Voting) ಮುನ್ನ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.

ಇದನ್ನೂ ಓದಿ: Hijab Controversy: ಬಿಕಿನಿಯೋ, ಹಿಜಾಬೋ..! ಅದು ಹೆಣ್ಮಕ್ಕಳ ಹಕ್ಕು ಎಂದ ಪ್ರಿಯಾಂಕಾ ವಾದ್ರಾ

ಹಿಜಾಬ್ ವಿವಾದದ ಬಗ್ಗೆ ಯೋಗಿ ರಿಯಾಕ್ಷನ್

ಸಂದರ್ಶನದಲ್ಲಿ ಕರ್ನಾಟಕದ (Karntaka) ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ನಮ್ಮ ಮುಸ್ಲಿಂ (Muslim) ಹೆಣ್ಣುಮಕ್ಕಳನ್ನು ಮುಕ್ತಗೊಳಿಸಲು, ಅವರಿಗೆ ಹಕ್ಕುಗಳು ಮತ್ತು ಗೌರವವನ್ನು ನೀಡಲು ಪ್ರಧಾನಿ ತ್ರಿವಳಿ ತಲಾಖ್ (Talaq) ಕಾನೂನನ್ನು ರದ್ದುಗೊಳಿಸಿದ್ದಾರೆ. ಆ ಹೆಣ್ಮಕ್ಕಳಿಗೆ ಗೌರವವನ್ನು ನೀಡಲು, ವ್ಯವಸ್ಥೆಯನ್ನು ಭಾರತದ ಸಂವಿಧಾನದ ಮೇಲೆ ನಡೆಸಲಾಗುವುದು ಅದನ್ನು ಶರಿಯತ್ ನಿರ್ಧರಿಸುವುದು ಅಲ್ಲ ಎಂದು ನಾವು ಹೇಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: UP Polls: ಅಧಿಕಾರಕ್ಕೆ ಬಂದ 10ದಿನದೊಳಗೆ ರೈತರ ಸಾಲಮನ್ನಾ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​​​​

ಅಸೆಂಬ್ಲಿ ಚುನಾವಣೆಗಳು 2022

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಉತ್ತರಾಖಂಡ್ ಚುನಾವಣೆ ಒಂದು ಹಂತದಲ್ಲಿ ನಡೆಯುತ್ತಿದ್ದು ಮತದಾನ ಫೆಬ್ರವರಿ 14 ರಂದು ನಡೆಯುತ್ತಿದೆ.

ಅಣ್ಣನಿಗಾಗಿ ಪ್ರಾಣ ಕೊಡ್ತೀನಿ

ನಾನು ನನ್ನ ಅಣ್ಣನಿಗಾಗಿ ನನ್ನ ಪ್ರಾಣವನ್ನು ನೀಡಬಲ್ಲೆ. ಅವನು ನನಗಾಗಿ ತನ್ನ ಪ್ರಾಣವನ್ನು ನೀಡಬಲ್ಲನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ರಾಹುಲ್ ಹಾಗು ಪ್ರಿಯಾಂಕ ಮಧ್ಯೆ ಸಂಘರ್ಷವಿದೆ ಎಂಬ ಬಿಜೆಪಿಯ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ವಾದ್ರಾ ಮತ್ತು ರಾಹುಲ್ ಗಾಂಧಿ ನಡುವಿನ ಭಿನ್ನಾಭಿಪ್ರಾಯವು ಕಾಂಗ್ರೆಸ್ ಪಕ್ಷವನ್ನು ಉರುಳಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ಬೆನ್ನಲ್ಲೇ ಪ್ರಿಯಾಂಕ ಅವರೂ ಉತ್ತರ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿದೆ ಘರ್ಷಣೆ ಎಂ ಪ್ರಿಯಾಂಕಾ ಗಾಂಧಿ

ಘರ್ಷಣೆ ಯೋಗಿಜಿ ಅವರ ಮನಸ್ಸಿನಲ್ಲಿದೆ, ಬಿಜೆಪಿಯ ಭಿನ್ನಾಭಿಪ್ರಾಯದಿಂದಾಗಿ ಅವರು ಈ ರೀತಿ ಹೇಳುತ್ತಿದ್ದಾರೆಂದು ತೋರುತ್ತದೆ. ಅವರ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಕೇಂದ್ರ ಗೃಹ ಸಚಿವ ನಡುವೆ ಸಂಘರ್ಷ ಇರಬೇಕು ಎಂದಿದ್ದಾರೆ.
Published by:Divya D
First published: