ವಿಮಾನ ದುರಂತದಿಂದ ರಾಹುಲ್ ಗಾಂಧಿ ಜಸ್ಟ್ ಮಿಸ್; 20 ಸೆಕೆಂಡ್ ತಡವಾಗಿದ್ದರೆ ಉಳಿಯುತ್ತಿರಲಿಲ್ಲ ಜೀವ!

news18
Updated:August 31, 2018, 9:48 AM IST
ವಿಮಾನ ದುರಂತದಿಂದ ರಾಹುಲ್ ಗಾಂಧಿ ಜಸ್ಟ್ ಮಿಸ್; 20 ಸೆಕೆಂಡ್ ತಡವಾಗಿದ್ದರೆ ಉಳಿಯುತ್ತಿರಲಿಲ್ಲ ಜೀವ!
news18
Updated: August 31, 2018, 9:48 AM IST
ನ್ಯೂಸ್ 18 ಕನ್ನಡ

ನವದೆಹಲಿ (ಆ.31): ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಕಾಂಗ್ರೆಸ್​ ಮುಖ್ಯಸ್ಥ ರಾಹುಲ್​ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಕೆಲ ಕ್ಷಣ ಎಚ್ಚರ ತಪ್ಪಿದರೆ ಭಾರೀ ದುರಂತ ಸಂಭವಿಸುತ್ತಿತ್ತು ಎಂಬ ಆತಂಕಕಾರಿ ವಿಷಯ ಇದೀಗ ಹೊರಬಿದ್ದಿದೆ.

ಪ್ರಚಾರ ಕಾರ್ಯಕ್ಕೆಂದು ಏಪ್ರಿಲ್ 26ರಂದು ರಾಹುಲ್ ಗಾಂಧಿ ಅವರು ಬಾಡಿಗೆ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಬ್ಬರು ಸದಸ್ಯರ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿತ್ತು. ಹಾರಾಟದ ವೇಳೆ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷಗಳಿಗೆ ಕಾರಣಗಳೇನು ಎಂದು ಕೇಳಿ ಸಲ್ಲಿಕೆಯಾಗಿದ್ದ ಆರ್​ಟಿಐ ಅರ್ಜಿಗೆ ನಿರ್ದೇಶನಾಲಯ ಉತ್ತರ ನೀಡಿದೆ.

ಸುಮಾರು ಎಂಟು ಸಾವಿರ ಅಡಿ ಮೇಲೆ ಹಾರುತ್ತಿದ್ದ ವಿಮಾನದ ಆಟೋ ಪೈಲಟ್ ಮೋಡ್​​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಒಂದು ಕಡೆಗೆ ವಿಮಾನ ಹೆಚ್ಚು ವಾಲಿತ್ತು. ದೋಷ ಕಾಣಿಸಿಕೊಂಡಾಗ ವಿಮಾನ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿತ್ತು. ವಿಮಾನ ಮೇಲಿಂದ ಕೆಳಕ್ಕೆ ಕುಸಿಯುತ್ತಾ ಬಂದಿತ್ತು. ಮೊದಲಿಗೆ ದೋಷ ಆಗಿದ್ದು ಪೈಲಟ್​​ ಅರಿವಿಗೆ ಬಂದಿರಲಿಲ್ಲ. ಆನಂತರ ಸಮಸ್ಯೆ ಅರಿವಿಗೆ ಬಂದು, ವಿಮಾನವನ್ನು ನಿಯಂತ್ರಣಕ್ಕೆ ತರಲು ಪೈಲೆಟ್​ಗೆ ಕೆಲ ಸಮಯ ಬೇಕಾಯ್ತು. ಒಂದು ವೇಳೆ ವಿಮಾನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಅರಿಯಲು ಪೈಲೆಟ್ ಇನ್ನು 20 ಸೆಕೆಂಡ್ ತಡ ಮಾಡಿದ್ದರೂ ವಿಮಾನ ಪತನಗೊಳ್ಳುತ್ತಿತ್ತು. ಮೊದಲಿಗೆ ಎರಡು ಬಾರಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಿರಲಿಲ್ಲ ಮೂರನೇ ಪ್ರಯತ್ನದಲ್ಲಿ ವಿಚಿತ್ರ ಶಬ್ಧದೊಂದಿಗೆ ವಿಮಾನ ಲ್ಯಾಂಡಿಂಗ್ ಆಗಿತ್ತು ಎಂದು ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ