ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್(budget) ಕುರಿತು ಲೋಕಸಭೆಯಲ್ಲಿ ರಾಷ್ಟ್ರಪತಿಗಳ(president) ಭಾಷಣದ (speech) ಮೇಲೆ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ(rahul gandhi) ಹಲವು ವಿಷಯಗಳನ್ನು ಹೇಳುವ ಮೂಲಕ ಬಿಜೆಪಿಗೆ(bjp) ತಿರುಗೇಟು ಕೊಟ್ಟಿದ್ದರು. ರಾಹುಲ್ ಗಾಂಧಿ ಅವರ ಭಾಷಣಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸಿನಿ ತಾರೆಯರೂ ಸಹ ರಾಹುಲ್ ಭಾಷಣದ ಕುರಿತು ವಾದ-ಪ್ರತಿವಾದ ನಡೆಸಿದ್ದಾರೆ. ಅದಾಗ್ಯೂ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತಮ್ಮ ಭಾಷಣದಲ್ಲಿ ಸರ್ಕಾರ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಿಲ್ಲ. ಯುವಕರು ಉದ್ಯೋಗವಿಲ್ಲದೆ(emlpoyment) ಪರದಾಡುತ್ತಿದ್ದಾರೆ. ಚೀನಾ ಮತ್ತು ಪೆಗಾಸಸ್ ವಿಷಯದ ಕುರಿತು ಹರಿಹಾಯ್ದಿದ್ದರು. ಶ್ರೀಮಂತರಿಗೆ ಒಂದು ಬಡವರಿಗೆ ಮತ್ತೊಂದು ಎಂಬ ಎರಡು ಭಾರತಗಳನ್ನು ಬಿಜೆಪಿ ಸೃಷ್ಟಿ ಮಾಡಿದೆ. ಇವರಿಬ್ಬರ ನಡುವಿನ ಅಂತರ ಹೆಚ್ಚುತ್ತಿದೆ.
ದೇಶದ ಶೇ. 40ರಷ್ಟು ಆದಾಯ ಆಯ್ದ ಕೆಲವೇ ಜನರ ಪಾಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ ಎಂದು ಟೀಕಿಸಿದ್ದರು. ಈ ಭಾಷಣದ ಕುರಿತು ಈಗ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಚರ್ಚೆ, ವಾದ-ವಿವಾದಗಳು ನಡೆಯುತ್ತಿವೆ. ಈ ಮಧ್ಯೆ ಸಿನಿ ತಾರೆ, ನಟಿ ಸ್ವರ ಭಾಸ್ಕರ ಟ್ವೀಟ್ ಮಾಡಿ “ ಸಾಲಿಡ್ ಸ್ಪೀಚ್” (Solid) ಎಂದಿದ್ದಾರೆ.
ಸ್ವರ ಭಾಸ್ಕರ ಟ್ವೀಟ್ ನಲ್ಲಿ ಏನಿದೆ..?
ರಾಹುಲ್ ಗಾಂಧಿ ಭಾಷಣದ ಬಗ್ಗೆ ನಟಿ ಸ್ವರ ಭಾಸ್ಕರ ಟ್ವೀಟ್ ಮಾಡಿದ್ದು, “ ರಾಹುಲ್ ಗಾಂಧಿ ನಿನ್ನೆ ಲೋಕಸಭೆಯಲ್ಲಿ ಸಾಲಿಡ್ ಸ್ಪೀಚ್ (Solid speech) ನೀಡಿದ್ದಾರೆ. ಅಸಂಘಟಿತ ವರ್ಗಗಳ ದುರ್ದೆಶೆ, ನಿರುದ್ಯೋಗ, ವಿದ್ಯಾರ್ಥಿ ಆಂದೋಲನ, ಭಾರತದ ವಿವಿಧತೆಯನ್ನು ಗೌರವಿಸುವ ಅಗತ್ಯತೆ, ಕೃಷಿಕರ ಆಂದೋಲನ, ಸರ್ಕಾರದ ನೀತಿ, ಪೆಗಾಸಸ್ ಮತ್ತು ರಾಷ್ಟ್ರದ ಭದ್ರತೆ, ರಕ್ಷಣೆಯಂಥ ಪ್ರಮುಖ ವಿಷಯಗಳನ್ನು ಎತ್ತಿ ತೋರಿಸಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.
Solid speech by @RahulGandhi in LS yesterday..Raised plight of Unorganised sector, Unemployment, students protests, need to respect India’s diversity, Farmers protests,
totalitarian attitude of govt. , the erosion of institutions of the state, Pegasus & National security..
👏🏽👏🏽👏🏽
— Swara Bhasker (@ReallySwara) February 2, 2022
ಇದನ್ನೂ ಓದಿ: ಕೇಂದ್ರ ಬಜೆಟ್-2022ರ ಪ್ರಮುಖಾಂಶಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಅಸಂಘಟಿತ ವಲಯ ನಾಶ
ಇಂದು ಶೇ. 84ರಷ್ಟು ಭಾರತೀಯರ ಆದಾಯ ಕುಸಿದಿದೆ. ಅವರೆಲ್ಲರೂ ಬಡತನದ ದವಡೆಗೆ ದೂಡಲ್ಪಟ್ಟಿದ್ದಾರೆ. ಅಸಂಘಟಿತ ವಲಯ ಸಂಪೂರ್ಣವಾಗಿ ನಾಶವಾಗಿದೆ. ಇದು ಮೇಕ್ ಇನ್ ಇಂಡಿಯಾ ಚಿಂತನೆಗೆ ತದ್ವಿರುದ್ಧವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕಾರ್ಯತಂತ್ರದ ಹೆಸರಲ್ಲಿ ದೊಡ್ಡ ತಪ್ಪು ಮಾಡಲಾಗಿದೆ. ದೇಶದ ಅಡಿಪಾಯದ ಮೇಲೆ ಆರ್ ಎಸ್ ಎಸ್ ಮತ್ತು ಬಿಜೆಪಿ ಆಟವಾಡುತ್ತಿದೆ. ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಪೆಗಾಸಸ್ ಇವು ರಾಜ್ಯಗಳ ಒಕ್ಕೂಟದ ಧ್ವನಿಯನ್ನು ತಡೆಯುತ್ತಿವೆ.
ಸವಾಲುಗಳು, ನಿರೀಕ್ಷೆಗಳ ಬಗ್ಗೆ ಮಾತನಾಡಿಲ್ಲ
ರಾಷ್ಟ್ರಪತಿ ಅವರ ಭಾಷಣ ಕೇಂದ್ರ ಸರ್ಕಾರದ ಕಾರ್ಯತಂತ್ರದ ದೃಷ್ಟಿಗೆ ಬದಲಾಗಿ ಅಧಿಕಾರಶಾಹಿ ವಿಚಾರಗಳ ಪಟ್ಟಿಯಾಗಿ ಮಾರ್ಪಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಲಾಗಿದೆ. ಆದರೆ ಕೇಂದ್ರದ ಮುಂದಿರುವ ಸವಾಲುಗಳು, ಸಮಸ್ಯೆಗಳ ಬಗ್ಗೆ ಹೇಳಿಲ್ಲ. ದೇಶ ಎದುರು ನೋಡುತ್ತಿರುವ ನಿರೀಕ್ಷೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ