ನಾವು ಆಂದೋಲನ್​ ಜೀವಿ, ನೀವು ದೇಶವನ್ನೇ ಮಾರುವವರು; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಟಾಂಗ್​

ನರೇಂದ್ರ ಮೋದಿ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಹೋರಾಟಗಾರರು ಮೋದಿ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅಲ್ಲದೆ, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ನಾವು ಆಂದೋಲನ್​ ಜೀವಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ ಎಂದಿದ್ದರು.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ನವ ದೆಹಲಿ (ಫೆಬ್ರವರಿ 10); ದೇಶದಲ್ಲಿ ಹೋರಾಟ ಮಾಡುವವರನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಂಸತ್​ನಲ್ಲಿ ಮಾತನಾಡುವ ವೇಳೆ ಆಂದೋಲನ್​ ಜೀವಿಗಳು ಎಂದು ಹೀಗೆಳೆದಿದ್ದರು. ಆದರೆ, ಪ್ರಧಾನಿ ಮೋದಿ ಮಾತಿಗೆ ಇಂದಿನ ಸಂಸತ್​ ಅಧಿವೇಶನದಲ್ಲಿ ತಿರುಗೇಟು ನೀಡಿರುವ ರಾಹುಲ್ ಗಾಂಧಿ. "ನಾವು ಆಂದೋಲನ್​ ಜೀವಿಗಳು. ಆದರೆ, ನೀವು ದೇಶವನ್ನೇ ಮಾರಾಟ ಮಾಡುವ ಕ್ರೋನಿ ಜೀವಿಗಳು" ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ 75 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್​ ನಾಯಕರು ಸಹ ಈ ಹೋರಾಟವನ್ನು ಬೆಂಬಲಿಸಿದ್ದಾರೆ. ಆದರೆ, ಅಧ್ಯಕ್ಷರ ಭಾಷಣೆಕ್ಕೆ ಉತ್ತರಿಸುವ ವೇಳೆ ಈ ಹೋರಾಟ ವಿರುದ್ಧ ಮಾತನಾಡಿದ್ದ ಪ್ರಧಾನಿ ಮೋದಿ ಹೋರಾಟಗಾರರನ್ನು ಆಂದೋಲನ್ ಜೀವಿಗಳು ಎಂದಿದ್ದರು.

  "ರೈತ ಪ್ರತಿಭಟನೆಯ ಹಿಂದೆ ಇರುವವರ ಬಗ್ಗೆ ದೇಶವು ಎಚ್ಚರದಿಂದಿರಬೇಕು. ಏಕೆಂದರೆ ಇವರು ಆಂದೋಲನ್​ ಜೀವಿಗಳು. ಇವರು ಪ್ರತಿಭಟನೆಗಾಗಿಯೇ ಬದುಕುತ್ತಾರೆ. ಅಲ್ಲದೆ, ಆಂದೋಲನಗಳಿಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರೆ. ಇಂತಹ ಆಂದೋಲನ್​ ಜೀವಿಗಳ ಬಗ್ಗೆ ದೇಶವು ಎಚ್ಚರದಿಂದ ಇರುವುದು ಒಳ್ಳೆಯದು" ಎಂದು ಮೋದಿ ಸಂಸತ್​ ಅಧಿವೇಶನದ ವೇಳೆ ದೇಶದ ಜನರಿಗೆ ಕಿವಿಮಾತು ಹೇಳಿದ್ದರು.  ಆದರೆ, ನರೇಂದ್ರ ಮೋದಿ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಹೋರಾಟಗಾರರು ಮೋದಿ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅಲ್ಲದೆ, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, "ನಾವು ಆಂದೋಲನ್​ ಜೀವಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ಅಲ್ಲದೆ, ಮಹಾತ್ಮಾ ಗಾಂಧಿ ವಿಶ್ವದ ಸರ್ವಶ್ರೇಷ್ಠ ಆಂದೋಲನ್​ ಜೀವಿ" ಎಂದು ಖಡಕ್​ ಉತ್ತರ ನೀಡಿದ್ದಾರೆ.

  ಇದನ್ನೂ ಓದಿ: ಕೇಂದ್ರದ ಸೂಚನೆಯನ್ನು ಭಾಗಶಃ ಪಾಲಿಸಿದ ಟ್ವಿಟರ್; ಖಲಿಸ್ತಾನಿ ಬೆಂಬಲಿತ 500 ಖಾತೆಗಳಿಗೆ ನಿರ್ಬಂಧ!

  ಇದೀಗ ರಾಹುಲ್ ಗಾಂಧಿ ಸಹ ಪ್ರಧಾನಿ ಮೋದಿ ಮಾತಿಗೆ ಉತ್ತರ ನೀಡಿದ್ದು, "ನಾವು ಆಂದೋಲನ್​ ಜೀವಿಗಳು. ಆದರೆ, ನೀವು ದೇಶವನ್ನೇ ಮಾರುವ ಕ್ರೋನಿ ಜೀವಿಗಳು" ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ಕೃಷಿ ಕಾನೂನು ಜಾರಿಯಾದರೆ ಖಾಸಗಿ ಕಂಪೆನಿಗಳು ರೈತರನ್ನು ಶೋಷಿಸುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ನಾವು ಎಂದಿಗೂ ರೈತರ ಬೆನ್ನಿಗೆ ನಿಲ್ಲುತ್ತೇವೆ" ಎಂದು ತಿಳಿಸಿದ್ದಾರೆ.

  ದೆಹಲಿ-ಹರಿಯಾಣ ಗಡಿಯಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಸಾವಿರಾರು ರೈತರು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳದ ಹೊರತು ಮನೆಗೆ ಹಿಂದಿರುಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರೈತರೊಂದಿಗೆ ಈ ಕುರಿತು ಚರ್ಚೆ ನಡೆಸಲು ಹಾಗೂ ಒಂದೂವರೆ ವರ್ಷಗಳ ಕಾಲ ಈ ಹೊಸ ಕಾನೂನುಗಳನ್ನು ಅನುಷ್ಠಾನಗೊಳಿಸದಿರಲು ಕೇಂದ್ರ ಸರ್ಕಾರ ನಿಶ್ಚಯಿಸಿದೆ. ಆದರೆ, ಇದಕ್ಕೆ ಒಪ್ಪದ ರೈತರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೆ ಹೋರಾಟ ನಿಲ್ಲದು ಎಂದು ಸರ್ಕಾರಕ್ಕೆ ಈಗಾಗಲೇ ಸಂದೇಶವನ್ನು ರವಾನಿಸಿದ್ದಾರೆ.
  Published by:MAshok Kumar
  First published: