ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಹುಲ್​ ಗಾಂಧಿಗೆ ಕೇಂದ್ರದಿಂದ ನೋಟಿಸ್​​

ಸದ್ಯ ಕೇಂದ್ರದಿಂದ ರಾಹುಲ್​​ ಗಾಂಧಿಯವರಿಗೆ ಈ ಸಂಬಂಧ ನೋಟಿಸ್​ ಕಳಿಸಲಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಕಾಂಗ್ರೆಸ್​​ ಅಧ್ಯಕ್ಷರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Ganesh Nachikethu
Updated:June 11, 2019, 6:52 PM IST
ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಹುಲ್​ ಗಾಂಧಿಗೆ ಕೇಂದ್ರದಿಂದ ನೋಟಿಸ್​​
ರಾಹುಲ್​​ ಗಾಂಧಿ
  • Share this:
ನವದೆಹಲಿ(ಜೂನ್​​​.11): ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರಿಗೆ ಕೇಂದ್ರದಿಂದ ನೋಟಿಸ್​​ ನೀಡಲಾಗಿದೆ. ತಾವು 2004ರಿಂದ ದೆಹಲಿಯಲ್ಲಿ ನೆಲೆಸಿದ್ದ ಬಂಗಲೆಯನ್ನು ಸದ್ಯದಲ್ಲೇ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಯಾರ್‍ಯಾರು? ಬಂಗಲೆ ಖಾಲಿ ಮಾಡಬೇಕೆಂದು ಪಟ್ಟಿ ತಯಾರಿಸಿರುವ ಲೋಕಸಭಾ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.

ರಾಹುಲ್​​ ಗಾಂಧಿಯವರು ನೆಲೆಸಿರುವ ಅಧಿಕೃತ ನಿವಾಸ ಸೇರಿದಂತೆ 12 ಸಂಸದರ ಬಂಗಲೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಎಲ್ಲರಿಗೂ ನೋಟಿಸ್​ ನೀಡಲಾಗಿದ್ದು, ಖಾಲಿ ಮಾಡುವಂತೆ ಆದೇಶಿಸಲಾಗಿದೆ.

2004ರಲ್ಲಿ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದ ರಾಹುಲ್ ಗಾಂಧಿಯವರು ಇದೇ ನಂ.12 ಬಂಗಲೆಯನ್ನು​ ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ಟೈಪ್​​-8 ಕೆಟಗಿರಿ ಅಡಿಯಲ್ಲಿ ಬರುವ ಈ ಬಂಗಲೆ ಅತ್ಯುನ್ನತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Girish karnad: ಗಿರೀಶ್​​ ಕಾರ್ನಾಡ್​ರನ್ನು ನೆನೆದು ಭಾವುಕರಾದ ಬಾಲಿವುಡ್ ನಟಿ ಕತ್ರಿನಾ, ನಿರ್ದೇಶಕ ಕಬೀರ್ ಖಾನ್

ಇನ್ನು ಲೋಕಸಭಾ ಕಾರ್ಯದರ್ಶಿ ಹೊರಡಿಸಿರುವ ಈ ಪ್ರಕಟಣೆಯಲ್ಲಿ 12 ಬಂಗಲೆಗಳನ್ನು ಖಾಲಿ ಮಾಡಿಸುವುದರ ಜೊತೆಗೆ 517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.

ಸದ್ಯ ಕೇಂದ್ರದಿಂದ ರಾಹುಲ್​​ ಗಾಂಧಿಯವರಿಗೆ ಈ ಸಂಬಂಧ ನೋಟಿಸ್​ ಕಳಿಸಲಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಕಾಂಗ್ರೆಸ್​​ ಅಧ್ಯಕ್ಷರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: 'ಜಾಕಿರ್​​ ನಾಯ್ಕ್'ರನ್ನು​ ಗಡಿಪಾರು ಮಾಡದ ಹಕ್ಕು ನಮಗಿದೆ; ಮಲೇಷ್ಯಾ ಪ್ರಧಾನಿ​ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋತು ಕೇರಳದ ವಯನಾಡ್​ ಕ್ಷೇತ್ರದಿಂದ ಭರ್ಜರಿ ಗೆಲುವು ದಾಖಲಿಸಿದ ರಾಹುಲ್​​ಗೆ ಯಾವ ಬಂಗಲೆ ಸಿಗಲಿದೆ ಎಂಬುದು ಮಾತ್ರ ಕುತೂಹಲ ಸಂಗತಿ.
-------------
First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ